IMG 20231123 WA0010

ಪಾವಗಡ: ವಿದ್ಯಾರ್ಥಿಗಳು ಸಾಧ್ಯವಾದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿ…!

DISTRICT NEWS ತುಮಕೂರು

ವಿದ್ಯಾರ್ಥಿಗಳು ಸಾಧ್ಯವಾದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿ.

ಪಾವಗಡ : ಭಾರತದಲ್ಲಿ ಕೋವಿಡ್ 19 ನಂತರ ಮಕ್ಕಳಲ್ಲಿ ಮೊಬೈಲ್ ಬಳಕೆ ಅತಿ ಹೆಚ್ಚಾಗಿದ್ದು, ಓದಿನ ಬಗ್ಗೆ ವಿದ್ಯಾರ್ಥಿಗಳು ನಿರಾಸಕ್ತಿ ತೋರಿಸುವಂತಹ ಪರಿಸ್ಥಿತಿ ಉಲ್ಬಣವಾಗಿದೆ ಎಂದು
ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕೌನ್ಸಿಲರ್ ರಶ್ಮಿ ತಿಳಿಸಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಮತ್ತು ಪೋಕ್ಸೋ ಕಾಯ್ದೆಯ ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಪೋಕ್ಸೋ ಕಾಯ್ದೆ ಯ ಬಗ್ಗೆ. ಅರಿವನ್ನು ಮೂಡಿಸಿದರು.

ಬಾಲ್ಯ ವಿವಾಹ ಮಕ್ಕಳ ಬಾಲ್ಯವನ್ನೇ ಸಂಪೂರ್ಣವಾಗಿ ನಾಶಮಾಡುತ್ತದೆ.
ಬಾಲ್ಯ ವಿವಾಹದಿಂದ ಉಂಟಾಗುವ ಸಮಸ್ಯೆಗಳನ್ನು ವಿದ್ಯಾರ್ಥಿಗಳು ತಿಳಿದು, ಇತರರಿಗೂ ತಿಳಿಸಬೇಕು.
ಒಂದು ವೇಳೆ ಎಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ ಎಂದು ತಿಳಿದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಅಥವಾ 1098 ದೂರವಾಣಿಗೆ ಕರೆ ಮಾಡಿ ತಿಳಿಸಬಹುದೆಂದರು.

ಇತ್ತೀಚಿನ ದಿನಗಳಲ್ಲಿ ಪೂಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆಣ್ಣು ಮಕ್ಕಳು ಯಾರನ್ನು ನಂಬಿ ಜೊತೆ ಹೋಗದಂತಾಗಿದೆ ಎಂದರು.

ಇತ್ತೀಚಿಗೆ ಲೈಂಗಿಕ ದೌರ್ಜನ್ಯಗಳು ಬರಿ ಹೆಣ್ಣು ಮಕ್ಕಳ ಮೇಲೆ ಮಾತ್ರವಲ್ಲ ಗಂಡು ಮಕ್ಕಳ ಮೇಲೆಯೂ ನಡೆಯುತ್ತಿದೆ ಎಂದರು.

ಹೆಣ್ಣು ಮಕ್ಕಳು ತಮ್ಮ ಮೇಲೆ ಯಾರಾದರೂ ಲೈಂಗಿಕ ದೌರ್ಜನೆ ಮಾಡಿದರೆ ಹೆದರದೆ ಪೋಷಕರಿಗೆ ತಿಳಿಸುವುದು ಅಗತ್ಯ ಎಂದರು.
ಅದಕ್ಕೆ ಕಾನೂನಿನಲ್ಲಿ ಸೂಕ್ತವಾದ ಕಠಿಣ ಕ್ರಮವಿರುತ್ತದೆ ಎಂದರು.

ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ಆಕರ್ಷಣೆಗೆ ಒಳಗಾಗುವುದು ಸಹಜ.
ಆದರೆ ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ತಮ್ಮ ಗುರಿ ಸಾಧಿಸುವತ್ತ ಗಮನ ಹರಿಸಬೇಕೆಂದರು

ಕಾರ್ಯಕ್ರಮದಲ್ಲಿ ಶಾಲೆಯ ಖಜಾಂಚಿ ಪರಂದಾಮರೆಡ್ಡಿ, ವಡಸಲಪ್ಪ, ಶ್ರೀನಿವಾಸ್, ಇಂತಿಯಾಜ್, ನರಸಿಂಹಮೂರ್ತಿ ಇತರರು ಹಾಜರಿದ್ದರು.

ವರದಿ. ಶ್ರೀನಿವಾಸಲು.ಎ