. ಮಧುಗಿರಿ: – ತುರ್ತು ಆಂಬುಲೆನ್ಸ್ ಸೇವೆಗಳ 108 ಸೆಂಟ್ರಲ್ ಕಾಲ್ ಸೆಂಟ್ರಲ್ ನಲ್ಲಿ ದೂರವಾಣಿ ಕರೆಗಳು ತಾಂತ್ರಿಕ ದೋಷದಿಂದ.ಸ್ವೀಕೃತವಾಗದೆ ಕಾರಣ ಬದಲಿ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಲು ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆ ವತಿಯಿಂದ ಆದೇಶ …
ಮಧುಗಿರಿ ತಾಲೂಕು ಕಚೇರಿಯಲ್ಲಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆಗಳ ಆದೇಶದ ಮೇರೆಗೆ ಇಂದು ತಾಲೂಕು ಕಚೇರಿಯಲ್ಲಿ ತಹಶೀಲ್ದಾರಾದ ಟಿ ಜಿ ಸುರೇಶ್ ಆಚಾರ್ ಹಾಗೂ ತಾಲೂಕು ಆರೋಗ್ಯ ಆಡಳಿತ ಅಧಿಕಾರಿಯಾದ.ರಮೇಶ್ ಬಾಬು ರವರು ಪತ್ರಿಕೆಗೋಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ತುರ್ತು ಸೇವೆಗಳ 108 ಸೆಂಟ್ರಲ್ ಕಾಲ್ ಸೆಂಟರ್ ನಲ್ಲಿ ಸಾರ್ವಜನಿಕರಿಂದ ಬರುವ ದೂರವಾಣಿ ಕರೆಗಳು ಸ್ವೀಕೃತವಾಗದ ಕಾರಣ ಸಾರ್ವಜನಿಕರು ತುರ್ತು ಆರೋಗ್ಯ ಸೇವೆಗಳಿಗಾಗಿ ತುಂಬಾ ತೊಂದರೆ ಪಡುತ್ತಿರುವುದನ್ನು.ಮನಗಂಡಂತಹ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆಯು. ತಾಲೂಕ್ ಆಡಳಿತ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಗಳಿಗೆ ಸೂಚನೆ ನೀಡಿ.ತಾತ್ಕಾಲಿಕವಾಗಿ ಈ ಕೆಳಕಂಡಂತಹ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಎಂದಿನಂತೆ ತುರ್ತು ಸೇವೆಗಳು ಪಡೆಯುವಂತೆ ಸಾರ್ವಜನಿಕರಲ್ಲಿ.ಕೋರಿದ್ದಾರೆ..
ಸಾರ್ವಜನಿಕರು ತುರ್ತು ಆಂಬುಲೆನ್ಸ್ ಸೇವೆಗಳಿಗೆ ಕರೆ ಮಾಡಬೇಕಾದ ದೂರವಾಣಿ ಸಂಖ್ಯೆಗಳು .8660931009..9901322235…9008782366 ಈ ನಂಬರಿಗಳಿಗೆ ಸಾರ್ವಜನಿಕರು ಕರೆ ಮಾಡಿದರೆ ತುರ್ತು ಆಂಬುಲೆನ್ಸ್ ಸೇವೆಗಳು ಕಾರ್ಯನಿರ್ವಹಿಸಲಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ
ತಿಳಿಸಿರುತ್ತಾರೆ..
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.