30 1 21 Sarvodaya day prog 5

ಪಾವಗಡ: ಹುತಾತ್ಮರ ದಿನಾಚಾರಣೆ….!

DISTRICT NEWS ತುಮಕೂರು
ಪಾವಗಡ:   ನಿಜವಾದ ಅರ್ಥದಲ್ಲಿ ಹುತಾತ್ಮರ ದಿನಾಚಾರಣೆ, ಸರ್ವೋದಯ ದಿನಾಚರಣೆ ಹಾಗೂ
ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನಾ ಕಾರ್ಯಕ್ರಮ
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಹೋರಾಟದಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡು ಅಂತ್ಯದಲ್ಲಿ ಆಗುಂತಕನ ಗುಂಡಿಗೆ ಬಲಿಯಾದರು
ಮಹಾತ್ಮಾ ಗಾಂಧೀಜಿ ರವರು ಹುತಾತ್ಮರಾದ ದಿನ ಇಂದು. ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಾಗೂ ನಿಜವಾದ ಅರ್ಥದಲ್ಲಿ ಹುತಾತ್ಮರ ದಿನಾಚರಣೆ, ಸರ್ವೋದಯ ದಿನಾಚರಣೆ ನಡೆಯಿತು ಎನ್ನಬಹುದಾಗಿದೆ.30 1 21 Sarvodaya day prog 12
   ಪಾವಗಡ ಹಾಗೂ ಮಧುಗಿರಿ ಮತ್ತು ದೂರದ ಕಲ್ಯಾಣದುರ್ಗ, ಪೇರೂರು ಮುಂತಾದ ಭಾಗಗಳಿಂದಲೂ ಗುಣಹೊಂದಿದ್ದು ಕುಷ್ಠರೋಗದಿಂದ ಅಂಗವಿಕಲತೆಯನ್ನು ಪಡೆದಿದ್ದ ಸರಿಸುಮಾರು 150ಕ್ಕೂ ಮಿಗಿಲಾದ ಕುಷ್ಠರೋಗಿಗಳು ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಕೋವಿಡ್ ನಿಯಮದಡಿ ಶಿಸ್ತಿನಿಂದ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಶ್ರೀ ಸುದೇಶ್ ಬಾಬು, ಅಧ್ಯಕ್ಷರು, ಆರ್ಯ ವೈಶ್ಯ ಸಂಘ, ಸದಸ್ಯರು, ಪುರಸಭೆ, ಶ್ರೀ ನವೀನ್ ಚಂದ್ರ, ಮುಖ್ಯಾಧಿಕಾರಿಗಳು, ಪುರಸಭೆ ರವರು ಭಾಗವಹಿಸಿದ್ದರು. ಕಾರ್ಯಕ್ರಮ ಕು.ರಿತೀಷಾ ರವರ ಗಣಪತಿಯ ಸುಶ್ರಾವ್ಯವಾದ ಸಂಗೀತದಿಂದ ಆರಂಭವಾಯಿತು. ಪ್ರಾಸ್ತಾವಿಕ ನುಡಿಯನ್ನು ನುಡಿದ ಪೂಜ್ಯ ಸ್ವಾಮಿ ಜಪಾನಂದಜೀ ರವರು ಮಹಾತ್ಮಾ ಗಾಂಧೀಜಿರವರಿಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದ ಕೆಲಸವೆಂದರೆ ಕುಷ್ಠರೋಗಿಗೆ ಸೇವೆ ಸಲ್ಲಿಸುವುದು. ಅವರು ತಮ್ಮ ಪ್ರಾರ್ಥನೆಗೆ ತೆರಳುವ ಮುನ್ನ ಶ್ರೀ ಪರಾಶರ ಶಾಸ್ತ್ರಿ ಎಂಬ ಕುಷ್ಠರೋಗಿಗೆ ಸೇವೆ ಸಲ್ಲಿಸಿ ನಂತರ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದನ್ನು ಇಲ್ಲಿ ಸ್ಮರಿಸಿದರು.
ದೇಶಕ್ಕಾಗಿ ತನ್ನ ಪ್ರಾಣವನ್ನೇ ತೊರೆದ ಮಹಾನ್ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿ ರವರು. ಅವರ ನೆನಪಿನಲ್ಲಿ ಇಂದು ನೂರಾರು ರೋಗಿಗಳಿಗೆ ಎಲ್ಲ ರೀತಿಯ ಪರಿಕರಗಳನ್ನು ಅಂದರೆ ಕಾಲಿಗೆ ಪಾದುಕೆಗಳು, ಕ್ರಚಸ್, ಊರುಗೋಲು ಮತ್ತು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ನೇತೃತ್ವದಲ್ಲಿ ಚರ್ಮರೋಗ ತಪಾಸಣಾ ಶಿಬಿರವೂ ನಡೆಯಿತು.
  ಈ ಶಿಬಿರದಲ್ಲಿ ಅನೇಕರು ಔಷಧಿಗಳನ್ನು ಹಾಗೂ ಅಂಗವಿಕಲತರಿಗಾಗಿ ವಿಶೇಷವಾಗಿ ಅನೇಕ ರೀತಿಯ ಆಧುನಿಕ ಪರಿಕರಗಳನ್ನು ವಿತರಿಸಲಾಯಿತು.
ಜೀವನಲ್ಲಿ ಶಿವನನ್ನು ಕಾಣು ಎಂಬ ತತ್ವವನ್ನು ಅಹರ್ನಿಷಿ ಅನುಷ್ಠಾನ ರೂಪಕ್ಕೆ ತರುತ್ತಿರುವ ಪೂಜ್ಯ ಸ್ವಾಮಿ ಜಪಾನಂದಜೀ ರವರು ಸ್ವತಃ ತಮ್ಮ ಕೈಗಳಿಂದಲೇ ಕುಷ್ಠರೋಗಿಗಳ ವ್ರಣಗಳನ್ನು ಶುದ್ಧೀಪಡಿಸಿ ಸರಿಯಾದ ರೀತಿಯಲ್ಲಿ ಶುಚಿಗೊಳಿಸಿ ಅದಕ್ಕೆ ಬ್ಯಾಂಡೇಜುಗಳನ್ನು ಹಾಕುತ್ತಾ ಇದ್ದದ್ದು ನಿಜಕ್ಕೂ ನೂತನವಾಗಿ ಸ್ವಾಮೀಜಿಯವರನ್ನು ಕಂಡಿರುವವರಿಗೆ ಆಶ್ಚರ್ಯವಾಯಿತು ಎನ್ನಬಹುದು. ಆದರೆ ಕಳೆದ 35 ವರ್ಷಗಳಿಂದ ಏಕಪ್ರಕಾರವಾಗಿ ಕುಷ್ಠರೋಗಿಗಳ ಸೇವೆಯನ್ನು ನಾನಾ ರೀತಿಯಲ್ಲಿ ಅಂದರೆ ಪ್ರತೀವಾರ ಧಾನ್ಯ ವಿತರಣೆ, ಹಬ್ಬ ಹರಿದಿನಗಳಲ್ಲಿ ನೂತನ ವಸ್ತ್ರ ವಿತರಣೆ ಹಾಗೂ ಕುಷ್ಠರೋಗಿಗಳು ಆಸ್ಪತ್ರೆ ಬಂದಾಕ್ಷಣ ಅವರಿಗೆ ಸರ್ವ ರೀತಿಯಲ್ಲಿ ಸತ್ಕರಿಸಿ ಸೇವೆ ಸಲ್ಲಿಸುತ್ತಿರುವ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದ ಕಾರ್ಯವೈಖರಿಯೇ ಹಾಗೆ ಎಂದು ಬಣ್ಣಿಸಿದರು.30 1 21 Sarvodaya day prog 10
ಸರ್ಕಾರ ಇನ್ನೂ ಹೆಚ್ಚಿನ ರೀತಿಯಲ್ಲಿ ಈ ರೋಗಿಗಳಿಗೆ ಸಹಾಯಹಸ್ತವನ್ನು ಚಾಚಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಶ್ರೀ ಸುದೇಶ್ ಬಾಬು ರವರು ದೇವರನ್ನು ಚಿತ್ರಪಟದಲ್ಲಿ ಕಾಣುತ್ತೇವೆ, ಬದಲಾಗಿ ಪೂಜ್ಯ ಸ್ವಾಮಿ ಜಪಾನಂದಜೀರವರಲ್ಲಿ ನಾವು ಕಾಣಬಹುದಾಗಿದೆ, ಎಲ್ಲ ರೀತಿಯ ಸೇವಾ ಕಾರ್ಯಗಳಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಲ್ಲದೆ ಇಂದು ವಿಶೇಷವಾಗಿ ಸರ್ವೋದಯ ದಿನಾಚರಣೆ ಹಾಗೂ ಹುತಾತ್ಮರ ದಿನಾಚರಣೆಯಂದು ಕುಷ್ಠರೋಗಿಗಳಿಗೆ ನೂತನ ವಸ್ತ್ರ, ಮುಖಗವಸು, ಸೋಪು, ಪರಿಕರಗಳನ್ನು ಹಾಗೂ ಊಟೋಪಚಾರಗಳನ್ನು ನಡೆಸುತ್ತಿರುವ
ಈ ಸಂಸ್ಥೆ ನಿಜಕ್ಕೂ ಎಲ್ಲರಿಗೂ ಆಶ್ಚರ್ಯವನ್ನು ತಂದಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಅನೇಕ ರೋಗಿಗಳಿಗೆ ಪಾದರಕ್ಷೆ, ಊರುಗೋಲು ಇತ್ಯಾದಿಗಳನ್ನೂ ಸಹ ವಿತರಿಸಿದರು.
ಪಾವಗಡ ಪುರಸಭೆಯ ಮುಖ್ಯಾಧಿಕಾರಿ ಶ್ರೀ ನವೀನ್ ಚಂದ್ರ ರವರು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ರೋಗಿಗಳಿಗೆ ಪರಿಕರಗಳನ್ನು ವಿತರಿಸಿದರು. ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆದಿದ್ದಲ್ಲದೆ ಶ್ರೀಮತಿ ಶೋಭಾ ಕೃಷ್ಣರಾವ್, ಆಡಳಿತಾಧಿಕಾರಿಗಳ ವಂದನಾರ್ಪಣೆಯೊಂದಿಗೆ ವೇದಿಕೆಯ ಕಾರ್ಯಕ್ರಮ ಮುಕ್ತಾಯವಾಯಿತು. ತದನಂತರ ಸಂಜೆಯವರೆವಿಗೂ ರೋಗಿಗಳಿಗೆ ನಾನಾ ರೀತಿಯ ತಪಾಸಣೆ ಹಾಗೂ ಔಷಧೋಪಚಾರದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಫೌಂಡೇಷನ್ನಿನ ಸಮರ್ಪಣಾ ಸ್ವಯಂಸೇವಕರು ಹಾಗೂ ಸಾಹಸ್ ಸಂಸ್ಥೆಯ ಮುಖ್ಯಾಧಿಕಾರಿಗಳಾದ ಶ್ರೀ ಮಹೇಶ್ ರವರು ಭಾಗವಹಿಸಿದ್ದರು.