ಸರಳವಾದ ರೀತಿಯಲ್ಲಿ. 534 ನೇ ಕನಕ ಜಯಂತಿ ಆಚರಣೆ.
ಪಟ್ಟಣದ ಹೊರವಲಯದ ವೆಂಕಟಾಪುರ ಕ್ರಾಸ್ ಬಳಿ ಇರುವ ಕನಕ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಸರಳವಾದ ರೀತಿಯಲ್ಲಿ ಕನಕ ಜಯಂತಿ ಆಚರಿಸಲಾಯಿತು . ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಸದಸ್ಯ ಮನು ಮಹೇಶ್ ಮಾತನಾಡುತ್ತಾ. ಕೋವಿಡ್ ನಿಯಮ ಇರುವುದರಿಂದ ಕನಕದಾಸರ ಜಯಂತಿಯನ್ನು ಸರಳವಾದ ರೀತಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತೆಂದು ಮುಂಬರುವ ದಿನಗಳಲ್ಲಿ ರಾಜ್ಯ ನಾಯಕರು ಹಾಗೂ ಜಿಲ್ಲಾ ನಾಯಕರನ್ನು ಕರೆಸಿ ಕನಕದಾಸರ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ಬಹಳ ವಿಜೃಂಭಣೆಯಿಂದ ಮಾಡಲಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಪಾವಗಡ ಮಾಜಿ ಶಾಸಕರಾದ ತಿಮ್ಮರಾಯಪ್ಪ. ಮನು ಮಹೇಶ್. ರಾಮಾಂಜಿ. ವೆಂಕಟೇಶ್. ಇತರರು ಪಾಲ್ಗೊಂಡಿದ್ದರು. ವಿ.ಎಸ್ .ಪಬ್ಲಿಕ್ ಶಾಲೆಯಲ್ಲಿ ಸರಳ ರೀತಿಯಲ್ಲಿ 534ನೇ ಕನಕ ಜಯಂತಿಯ ಆಚರಣೆ. ಪಾವಗಡ ಪಟ್ಟಣದ ವಿ. ಎಸ್.ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ಕನಕದಾಸರ ಜೀವನ ಸಾಹಿತ್ಯಕ್ಷೇತ್ರಕ್ಕೆ ಅವರ ಕೊಡುಗೆಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಾಯಿತು. ಮಕ್ಕಳಿಂದ ಕನಕದಾಸರ ಕೀರ್ತನೆಗಳನ್ನು ಹಾಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
10ನೇ ತರಗತಿಯ ವಿದ್ಯಾರ್ಥಿಗಳಾದ ಸಾಯಿ ವರ್ಷಿತ. ಸ್ಪೂರ್ತಿ ಹಾಗೂ ಪ್ರಭಾಸ್ ಯಾದವ್ ಮತ್ತು ಇತರ ವಿದ್ಯಾರ್ಥಿಗಳು ಕನಕದಾಸರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀನಿವಾಸಲು ರವರು ಮಾತನಾಡುತ್ತಾ ಕನಕದಾಸರು ಕೇವಲ ಒಂದು ಜಾತಿ ಮತ್ತು ಒಂದು ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ್ಲ.ಇವರು ಸಮಾಜದ ಅಭಿವೃದ್ಧಿಗಾಗಿ ಹೆಚ್ಚಿನ ಶ್ರಮವನ್ನು ವಹಿಸಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಎಂದರು.
ಜಾತಿ ಮುಕ್ತವಾಗಿರುವ ಸಮಾಜವನ್ನು ಕಟ್ಟುವುದು ಕನಕದಾಸರ ಕನಸಾಗಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಪರವಾಗಿ. ಕಿರಣ್ ದೀಪಿಕಾ ಎನ್. ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ. ಮುಖ್ಯಶಿಕ್ಷಕ ಶ್ರೀನಿವಾಸಲು.ಎ ಮುದ್ದವೀರಪ್ಪ. ರಾಮಕೃಷ್ಣ. ನರಸಿಂಹಮೂರ್ತಿ. ನಾಗಮಣಿ. ರೂಪಾದೇವಿ. ಗುಲಾಬ್ ಶಾ. ಶಾತಾಜ್. ರೇಷ್ಮಾ. ಪದ್ಮ. ಸುಕನ್ಯಾ ಮತ್ತಿತರ ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು.
ವರದಿ : ಶ್ರೀನಿವಾಸಲು ಎ