download 1 4

ಸಕ್ಕರೆ ನಾಡು ಮಂಡ್ಯದಲ್ಲಿ ಕೊರೋನಾ ಅಟ್ಟಹಾಸ….!

DISTRICT NEWS ಮಂಡ್ಯ

ಸಕ್ಕರೆ ನಾಡು ಮಂಡ್ಯದಲ್ಲಿ ಮಂಗಳವಾರ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಜಿಲ್ಲೆಯಲ್ಲಿಂದು ಬರೋಬ್ಬರಿ 71 ಮಂದಿಗೆ ಪಾಸಿಟಿವ್ ಬಂದಿದ್ದು, ಇಡೀ ಜಿಲ್ಲೆ ತಲ್ಲಣಗೊಂಡಿದೆ

 ಬೆಂಗಳೂರು ಮೇ 19 :- ಮಂಡ್ಯ ಜಿಲ್ಲೆಯಲ್ಲಿ ನ ಕಳೆದ ನಾಲ್ಕು ದಿನಗಳಿಂದ  ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದೆ. ಮೂರು ದಿನಗಳ ಹಿಂದೆ ಆರು ಪ್ರಕರಣ ಪತ್ತೆಯಾಗಿದ್ರೆ, ಮೊನ್ನೆ 22, ನಿನ್ನೆ 17, ಇಂದು 71 ಪ್ರಕರಣಗಳು ಪತ್ತೆಯಾಗಿದ್ದು ಜಿಲ್ಲೆಯಲ್ಲಿ  ಸೋಂಕಿತರ ಸಂಖ್ಯೆ 161ಕ್ಕೇರಿದೆ. ಇದರಿಂದಾಗಿ ಇಡೀ ಜಿಲ್ಲೆ ಬೆಚ್ಚಿ ಬಿದ್ದಿದೆ. ಇವತ್ತು ಪತ್ತೆಯಾಗಿರುವ ಪ್ರಕರಣಗಳು ಸಹ ಮುಂಬೈಯಿಂದ ಬಂದವರಾಗಿದ್ದು, ಸೋಂಕಿತರ ಪೈಕಿ 21 ಮಂದಿ ನಾಗಮಂಗಲದವರಾದರೆ, 41 ಮಂದಿ ಕೆ.ಆರ್. ಪೇಟೆ ತಾಲೂಕಿನವರಾಗಿದ್ದಾರೆ. ಈ ಮೂಲಕ ಮುಂಬೈ ನಂಜು ಮಂಡ್ಯ ತಾಲ್ಲೂಕಿಗೂ ಒಕ್ಕರಿಸಿದೆ. 71 ಮಂದಿ ಪೈಕಿ ಒಂದು ವರ್ಷದ ಎರಡು ಮಕ್ಕಳು ಸೇರಿದಂತೆ 13 ಮಂದಿ ಮಕ್ಕಳಿಗೆ ಹಾಗೂ 23 ಮಂದಿ ಮಹಿಳೆಯರು ಹಾಗೂ 29 ಮಂದಿ ಪುರುಷರಿಗೆ ಪಾಸಿಟಿವ್ ಆಗಿದೆ. ಎಲ್ಲರಿಗೂ ಮಂಡ್ಯ ಮಿಮ್ಸ್ ನ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕನಸು ಮನಸ್ಸಿನಲ್ಲೂ ಕೋವಿಡ್ ಮಂಡ್ಯದಲ್ಲಿ ಈ ಪರಿಸ್ಥಿತಿ ತಲುಪುತ್ತೆ ಅಂತ ಅಂದುಕೊಂಡಿರಲಿಲ್ಲ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತವರು ಕೆ‌.ಆರ್.ಪೇಟೆಯಲ್ಲಿ ಕೊರೋನಾ ಸೋಂಕು ಸ್ಫೋಟಗೊಂಡಿದೆ ಎಂದು ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು ಆತಂಕ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪನವರೇ ತಮ್ಮ ಹುಟ್ಟೂರಿನಲ್ಲಿ ಕೊರೋನಾ ನಿಯಂತ್ರಿಸಲು ಧಾವಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಬೆಂಗಳೂರಿನಲ್ಲಿ ಕುಳಿತು ಕೊರೋನಾ ನಿಯಂತ್ರಿಸ್ತೇನೆ ಎಂಬ ಹುಂಬುತನ ಬಿಡಬೇಕು. ಜಿಲ್ಲೆಯ ಹಿತದೃಷ್ಠಿಯಿಂದ ಕೊರೋನಾ ವಿಚಾರದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಶ್ರೀಗಳು ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ರು.

ಒಟ್ಟಾರೆ ಮಂಡ್ಯದಲ್ಲಿ ದಿನೇ ದಿನೇ ಮುಂಬೈ ನಂಜು ಹೆಚ್ಚಾಗ್ತಿದ್ದು, ಸೋಂಕಿತರ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.