ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ ಕರೆ. .
ಪಾವಗಡ… ಇಂದು ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿ ಯಲ್ಲಿ ಬಿ.ಇ.ಓ ಅಶ್ವಥ್ ನಾರಾಯಣ ಮಾತನಾಡುತ್ತಾ, 28/3/22 ರಿಂದ 11/4/22 ರ ವರೆಗೆ 10ನೇ ತರಗತಿಯ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆ ಎಂದರು. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಇಲಾಖೆ ಮಾಡಿದೆ ಎಂದರು. ಪರೀಕ್ಷೆಗಳು ಕಠಿಣವಾಗಿರುತ್ತದೋ, ಸುಲಭವಾಗಿರುತ್ತದೋ, ಎಂಬುದರ ಬಗ್ಗೆ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳದೆ, ವಿದ್ಯಾರ್ಥಿಯ ಜೀವನದ ಪ್ರಮುಖ ಘಟ್ಟ ಆದ ಎಸ್ಎಸ್ಎಲ್.ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈವರೆಗೆ ಎಷ್ಟು ಓದಿದ್ದೀರಿ, ಏನು ಓದಿದ್ದೀರಿ, ಅದು ಸಾಕಾಗುತ್ತದೋ ಇಲ್ಲವೋ, ಎಂಬ ಗೊಂದಲಗಳು ಬಿಟ್ಟು , ಓದಿದ್ದನ್ನು ಸರಿಯಾಗಿ ಬರೆಯುತ್ತೇನೆ ಎಂಬ ಭರವಸೆ ಸಾಕು ಎಂದರು. ಪರೀಕ್ಷೆ ಕೇಂದ್ರಗಳ ವ್ಯವಸ್ಥೆ ಬಗ್ಗೆ ಮಾತನಾಡುತ್ತಾ, ಇಲಾಖೆಯ ನಿಯಮಾನುಸಾರ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ , ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ಉತ್ತಮವಾದ ಗಾಳಿ ಬೆಳಕು ಇರುವಂತಹ ಕೊಠಡಿಗಳನ್ನು ನೀಡಲಾಗಿದೆ, ಪ್ರತಿ ಕೊಠಡಿಗೆ 20 ವಿದ್ಯಾರ್ಥಿಗಳಂತೆ ಜಿಗ್ ಜಾಗ್ ರೀತಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ, ಎಂದರು. ನಂತರ ಎಸ್.ಎಸ್.ಎಲ್.ಸಿ ಪರೀಕ್ಷೆಯ ನೋಡಲ್ ಅಧಿಕಾರಿಯಾದ ಶಿವಮೂರ್ತಿನಾಯ್ಕ ಮಾತನಾಡುತ್ತಾ, ತಾಲೂಕಿನಲ್ಲಿ 16 ಪರೀಕ್ಷಾ ಕೇಂದ್ರಗಳು ಇದೆ ಎಂದು, 2826 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ, ಪರೀಕ್ಷೆಯಲ್ಲಿ ನಕಲು ತಡೆಯುವ ಉದ್ದೇಶದಿಂದ, ತಹಶೀಲ್ದಾರ್ ನೇತೃತ್ವದಲ್ಲಿ ಒಂದು ಜಾಗೃತದಳ, ತಾಲೂಕು ಪಂಚಾಯಿತಿ ಈ.ಓ ನೇತೃತ್ವದಲ್ಲಿ ಮತ್ತೊಂದು ಜಾಗೃತದಳ, ಬಿಇಓ ಮತ್ತು ಬಿ.ಆರ್.ಸಿ ನೇತೃತ್ವದಲ್ಲಿ ಜಾಗೃತಿ ದಳವನ್ನು ರಚಿಸಲಾಗಿದೆ ಎಂದರು. ಜಿಲ್ಲಾ ವೀಕ್ಷಕರಾಗಿ ಅಕ್ಷರ ದಾಸೋಹ ರಾಜ್ಯ ಕಚೇರಿ ಅಧಿಕಾರಿಯಾಗಿ ನಾರಾಯಣಗೌಡ ಇರುತ್ತಾರೆ ಎಂದು ತಿಳಿಸಿದರು. ಸರ್ಕಾರದ ಆದೇಶದಂತೆ ಎಸ್.ಓ.ಪಿ ನಿಯಮವನ್ನು ಪರೀಕ್ಷಾ ಕೇಂದ್ರಗಳಲ್ಲಿ ಪಾಲಿಸಲು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲಾಗಿದೆ, ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ತಾಲೂಕಿನ ಡಿಪೋ ಮ್ಯಾನೇಜರ್ ಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು, ಹಾಗೂ ಪ್ರತಿ ಶಾಲೆಯ ಮುಖ್ಯ ಶಿಕ್ಷಕರಿಗೆ ತಮ್ಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕರೆತರುವ ಜವಾಬ್ದಾರಿಯನ್ನು ಸಹ ನೀಡಲಾಗಿದೆ ಎಂದರು. ಪರೀಕ್ಷೆ ಪತ್ರಿಕೆಗಳನ್ನು ಕೇಂದ್ರಗಳಿಗೆ ತಲುಪಿಸುವ ಉದ್ದೇಶದಿಂದ 5 ಮಾರ್ಗ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು. ಇಂದು ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಬಿ.ಇ.ಓ ಅಶ್ವತ್ಥನಾರಾಯಣ, ಇಸಿಓ ಶಿವಮೂರ್ತಿ ನಾಯಕ್, ಇಸಿಓ ಇಸಿಓ ಶಿವಕುಮಾರ್, ಇಸಿಓ ರಂಗನಾಥ್, ಮತ್ತು ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಿದರು.. ಪರೀಕ್ಷಾ ಭದ್ರತೆಗಾಗಿ ಪೊಲೀಸ್ ಇಲಾಖೆಯ ನೆರವನ್ನು ಕೋರಲಾಗಿದೆ ಎಂದರು. ಜಪಾನಂದ ಸ್ವಾಮೀಜಿ ಎಲ್ಲಾ ಕೇಂದ್ರಗಳಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಣೆ ಮಾಡಿದ್ದಾರೆ ಎಂದರು.
ವರದಿ: ಶ್ರೀನಿವಾಸುಲು ಎ