IMG 20210309 WA0005

ಪಾವಗಡ: ಸರ್ವೆಯರ್ ಸೇವಾ ಭದ್ರತೆ ಒದಗಿಸಲು ಆಗ್ರಹ…!

DISTRICT NEWS ತುಮಕೂರು

ಸುಪ್ರೀಂ ಕೋರ್ಟ್ ಆದೇಶದಂತೆ ಸರ್ವೆಯರ್ ಗಳಿಗೆ ಸೇವಾ ಭದ್ರತೆ ಒದಗಿಸಿ ಖಾಯಂಗೊಳಬೇಕು.

ಪಾವಗಡ: –    ಕರ್ನಾಟಕ ರಾಜ್ಯಾದ್ಯಂತ ಭೂ ಮಾಪನ ಪರವಾನಗಿ ಪಡೆದು ಸರ್ವೇ ಇಲಾಖೆಯಲ್ಲಿ ಸರ್ವೇಯರ್ ಗಳಾಗಿ ಕಳೆದ 19 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 2500 ನೌಕರರು ಸೇವಾ ಭದ್ರತೆಯನ್ನು ಒದಗಿಸಲು ಮತ್ತು ಕಾಯಂಗೊಳಿಸಲು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ

ಪಾವಗಡ ತಾಲೂಕಿನ ಸರ್ವೆಯರ್ ಗಳಿಗೆ ಬೆಂಬಲವಾಗಿ ಕರ್ನಾಟಕ ರಾಜ್ಯ ಕಾರ್ಮಿಕ ಹಕ್ಕುಗಳ ವೇದಿಕೆಯ ರಾಷ್ಟ್ರೀಯ ಸಂಚಾಲಕರು ಹಾಗೂ ಹೈಕೋರ್ಟ್ ವಕೀಲರಾದ ಪಾವಗಡ ಶ್ರೀರಾಮ್ ರವರು ಬೆಂಬಲ ವ್ಯಕ್ತಪಡಿಸಿದರು

ಪಾವಗಡ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು ಸುಪ್ರೀಂ ಕೋರ್ಟ್ ಆದೇಶದಂತೆ ಸರ್ವೆಯರ್ ಗಳಿಗೆ ಸೇವಾ ಭದ್ರತೆ ಒದಗಿಸಿ ಖಾಯಂಗೊಳಬೇಕು ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ರವರು ಪರವಾನಗಿ ಭೂಮಾಪಕರನ್ನು ಸೇವಾ ಭದ್ರತೆ ಒದಗಿಸಿ ಕನಿಷ್ಠ ವೇತನ ನೀಡಬೇಕು ಅವರಿಂದ ಸರ್ಕಾರದ ಖಜಾನೆಗೆ ಬಹಳಷ್ಟು ಆದಾಯವಿದೆ, 21000-00 ವೇತನವನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು

ಈ ಹಿಂದೆ  ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಿದಾಗ ಅಲ್ಲಿಗೆ ಬಂದಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರವಾನಗಿ ಪಡೆದ ಭೂಮಾಪಕರನ್ನು ಖಾಯಂ ಗೊಳಿಸಿ ಸೇವಾ ಭದ್ರತೆ ಒದಗಿಸಿ ಕೊಡುತ್ತೇವೆಂದು ಭರವಸೆ ನೀಡಿದ್ದರು ಆದರೆ ಸರ್ಕಾರ ಸುಮಾರು ವರ್ಷಗಳಿಂದ ಇಂದು ನಾಳೆ ಎಂದು ಹೇಳುತ್ತಾ ಚಳ್ಳೆ ಹಣ್ಣು ತಿನ್ನಿಸುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶವನ್ನು ಹೊರಹಾಕಿದರು ಇದೆ ರೀತಿ ಮುಂದುವರೆದರೆ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು

ಈ ಸಂದರ್ಭದಲ್ಲಿ ರಾಜ್ಯ ಸದಸ್ಯರು ಬಂಡಪ್ಪ . ತಾಲ್ಲೂಕು ಅಧ್ಯಕ್ಷರಾದ ತಿಮ್ಮರಾಯಪ್ಪ. ಉಪಾಧ್ಯಕ್ಷ ರಾಮಚಂದ್ರ. ಖಜಾಂಚಿ ವೆಂಕಟೇಶ್. ಲಕ್ಷ್ಮೀ ಮೂರ್ತಿ. ಭೂ ಮಾಪಾಕರಾದ ಹನುಮಂತಪ್ಪ ರಾಯಪ್ಪ.ಗಂಗಾಧರ ಸುರೇಶ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು