IMG 20230122 WA0004

ಮಧುಗಿರಿ: ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಬಂದಾಗ ಸೌಜನ್ಯಯು ತವಾಗಿ ವರ್ತಿಸಿ ಎಂದು ಸೂಚನೆ…!

DISTRICT NEWS ತುಮಕೂರು

ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಬಂದಾಗ ಸೌಜನ್ಯಯು ತವಾಗಿ ವರ್ತಿಸಿ ಎಂದು ಸೂಚನೆ ಕೊಟ್ಟ ಶಾಸಕ ಎಂ.ವಿ.ವೀರಭದ್ರಯ್ಯ….

ಮಧುಗಿರಿ.ಐ .ಡಿ .ಹಳ್ಳಿ. ಹೋಬಳಿ ಚಿಕ್ಕದಾಳವಾಟ ಗ್ರಾಮದಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಎಂ. ವಿ. ವೀರಭದ್ರಯ್ಯನವರು ವಹಿಸಿಕೊಂಡು ಮಾತನಾಡಿದ ಅವರು ಸಹ ತಹಸೀಲ್ದಾರಾದ ಸುರೇಶ ಆಚಾರ್ ರವರು ಬೆಳಗ್ಗೆಯಿಂದಲೂ ಇಲಾಖೆ ಅಧಿಕಾರಿಗಳ ಜೊತೆ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಹತ್ತು ಹಲವಾರು ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಸಾರ್ವಜನಿಕರಿಗೆ ಹಾಗೂ ರೈತಾಪಿ ವರ್ಗದವರಿಗೆ ಸಂಬಂಧಪಟ್ಟ ಇಲಾಖೆಗಳಿಂದಏನೇನು ಅನುಕೂಲಗಳನ್ನು ಪಡೆಯಬಹುದು ಎನ್ನುವುದರ ಬಗ್ಗೆ ತಿಳಿಸಿಕೊಡುತ್ತಾ .

ಅರ್ಹ ಫಲಾನುಭವಿಗಳಿಗೆ ಪಿಂಚಣಿಗಳಾದ ವೃದ್ಧಾಪ್ಯ ವೇತನ ಅಂಗವಿಕಲರ ವೇತನ ವಿಧವಾ ವೇತನ ವಿತರಣೆ ಮಾಡುತ್ತಾ ಇನ್ನೂ ಯಾರಿಗೆ ಕೂಡ ಪಿಂಚಣಿ ಸೌಲಭ್ಯಗಳು ಸಿಗುತ್ತಿಲ್ಲ ಅಂತಹವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಾವುಗಳು ದಾಖಲಾತಿಗಳನ್ನು ಕೊಟ್ಟು ಪಿಂಚಣಿಗಳನ್ನು ಪಡೆಯಬಹುದೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನಡೆದಿದ ಈ ಕಾರ್ಯಕ್ರಮದಿಂದ ಹಲವಾರು ಪ್ರಯೋಜನಗಳು ಪಡೆದುಕೊಂಡಿದ್ದೀರಾ ಎಂದರು..

IMG 20230122 WA0005

ತಹಶೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ಮಾತನಾಡುತ್ತಾ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಬಂದಂತಹ ಅರ್ಜಿಗಳನ್ನು ಎಲ್ಲಾ ಇಲಾಖೆಗಳಿಗೆ ರವಾನೆ ಮಾಡಿರುತ್ತೇವೆ ಆಡಳಿತವನ್ನು ಜನತೆಯೊಂದಿಗೆ ಹಂಚಿಕೊಂಡು ಕಂದಾಯ ಇಲಾಖೆಯಲ್ಲಿ ಪಿಂಚಣಿ ಸಮಸ್ಯೆಗಳನ್ನು ನಿವಾರಣೆ ಮಾಡಿರುತ್ತೇವ. ಪಾವತಿ ಖಾತೆ ಬಗರುಹುಕಂ ಸಾಗುವಳಿ ಗಳನ್ನು 97 ಅರ್ಹ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ನೀಡಿದ್ದು ಇನ್ನು ಉಳಿದ ಅರ್ಜಿಗಳನ್ನು ಎರಡನೇ ಹಂತದಲ್ಲಿ ನಿವಾರಣೆ ಮಾಡುತ್ತೇವೆ ಎಂದರೆ.

ಪಿಂಚಣಿ ವ್ಯವಸ್ಥೆಯಲ್ಲಿ ಸಹಾಯವಾಣಿ ಸಂಖ್ಯೆ 1554ಕ್ಕೆ ಮಿಸ್ ಕಾಲ್ ಕೊಟ್ಟರೆ ನೋಂದಣಿ ಯಾಗಿ ಸೂಕ್ತ ದಾಖಲಾತಿಗಳೊಂದಿಗೆ ನಿಮ್ಮ ಮನೆ ಹತ್ತಿರಗ್ರಾಮ ಲೆಕ್ಕಾಧಿಕಾರಿ ಪಡೆದು ಆದೇಶ ಪ್ರತಿಯನ್ನು ನೀಡುತ್ತಾರೆ. ಸಾಗುವಳಿ ಚೀಟಿ ನೀಡಿರುವ ಫಲಾನುಭವಿಗಳುಖಾತೆ ಪಹಣಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಶಿಕ್ಷಣ ಇಲಾಖೆಯಲ್ಲಿ ಉಚಿತ ಶಿಕ್ಷಣ .ಉಚಿತ ಪಠ್ಯಪುಸ್ತಕ. ಶೂ. ಹಾಗೂ28 ಕ್ಲಸ್ಟರ್ ಗಳಲ್ಲಿ ಕಲಿಕಾ ಹಬ್ಬ. ಸರ್ಕಾರಿ ಪ್ರೌಢ ಶಾಲೆಗಳ ಮಂಜೂರು ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿಕೊಟ್ಟರು.

ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಯಂತ್ರೋಪಕರಣಗಳ ಸಹಾಯಧನ ಹಾಗೂ ಸಾಲದ ಬಾಧೆಯಿಂದ ರೈತರು ಮೃತಪಟ್ಟರೇ 5 ಲಕ್ಷ ಸಹಾಯಧನ ಹಾವು ಕಡಿದರೆರೈತರಿಗೆ 2 ಲಕ್ಷ ಸಹಾಯಧನ ನೀಡಲಾಗುವುದುಬೆಳೆ ಸಮೀಕ್ಷೆ ರೈತರೇ ತಮ್ಮ ಮೊಬೈಲ್ ನಲ್ಲಿ ಆಫ್ ಅಳವಡಿಸಿಕೊಂಡು ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು ಎಂದು ತಿಳಿಸಿಕೊಟ್ಟರು. ಬೇಟಿ ಬಚಾವ್ ಬೇಟಿ ಪಡಾವೋ ಯೋಜನೆ ಅಡಿ.ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವೈದ್ಯಕೀಯ. ಇಂಜಿನಿಯರಿಂಗ್ .ತಾಂತ್ರಿಕ ಕೋರ್ಸ್ ಗಳಿಗೆ ಪ್ರತಿಜ್ಞಾ ಬೋರ್ಡ್ ಇವೆಲ್ಲದರಲ್ಲಿಯೂ ಕೂಡ ತಾವುಗಳುಅನುಕೂಲ ಪಡೆದುಕೊಳ್ಳಬಹುದೆಂದು ತಿಳಿಸಿದರು.

ರೇಷ್ಮೆ ಇಲಾಖೆ ಅಧಿಕಾರಿಗಳು ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ ರೈತರು ತಮ್ಮ ಜಮೀನಿನಲ್ಲಿ ರೇಷ್ಮೆ ನಾಟಿ ಮಾಡಿಕೊಳ್ಳಲು ಸಹಾಯಧನ ಕೊಡುತ್ತೇವೆ ಹಾಗೂ ಶೆಡ್ ನಿರ್ಮಾಣ ಮಾಡಿಕೊಳ್ಳಲು ಸಹ ಸಹಾಯಧನ ಸರ್ಕಾರದ ವತಿಯಿಂದ ದೊರೆಯುತ್ತದೆ. ಔಷಧಿ ಸಿಂಪಡಣೆ ಸಲಕರಣೆಗಳಿಗೆ ಸಹ ಸಹಾಯಧನ ದೊರೆಯುತ್ತದೆ. ಮತ್ತು ರೇಷ್ಮೆ ಮೊಟ್ಟೆ ಪಡೆಯಲು ಸಹ ಸಹಾಯಧನ ನೀಡುತ್ತೇವೆ ಎಂದು ತಿಳಿಸಿದರು.

ಪಶು ಪಾಲನೆ ಇಲಾಖೆಯಲ್ಲಿ ಪಶುಗಳಿಗೆ ವಿಮಾ ಸೌಲಭ್ಯ ದೊರೆಯುತ್ತದೆ
ಮೇವು ಯಂತ್ರ. ರಬ್ಬರ್ ನೆಲಹಾಸು ಸೌಲಭ್ಯ. ಮುಖ್ಯಮಂತ್ರಿ ಅಮೃತ ಯೋಜನೆ ಅಡಿಯಲ್ಲಿಯೂ ಸಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸಹಾಯಧನ ದೊರೆಯುತ್ತದೆ ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ತಿಳಿಸಿದರು.
ಇನ್ನೂ ಅನೇಕ ಸವಲತ್ತುಗಳ ಇಲಾಖೆವಾರು ಸೌಲಭ್ಯಗಳನ್ನು ಪಡೆಯಬಹುದೆಂದು ಸಭೆಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕದಾಳವಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಂಕರ್ ಪ್ರಜ್ವಲ್ ತಹಶೀಲ್ದಾರ್ರಾದ ಟಿ. ಜಿ. ಸುರೇಶ ಚಾರ್ ಗ್ರೇಡ್ .ಟು ತಹಶೀಲ್ದಾರ್ರಾದ ತಿಪ್ಪೇಸ್ವಾಮಿ ತಾಲೂಕು ಪಂಚಾಯಿತಿ ಸಹಾಯಕ ಅಭಿವೃದ್ದಿ ಅಧಿಕಾರಿ ಗುರುಮೂರ್ತಿ

ವಲಯಅರಣ್ಯ ಅಧಿಕಾರಿಯಾದ ರವಿ. ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರಾದ.ಲಕ್ಷ್ಮೀನರಸಯ್ಯ. ಪಿಡಬ್ಲ್ಯೂಡಿ ಎ ಇ ಇ. ಎಸ್.ಸಿ.ರಾಜಗೋಪಾಲ್. ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಅನಿತಾ. ಅಬಕಾರಿ ಇನ್ಸ್ಪೆಕ್ಟರ್ರಾದ ರಾಮಮೂರ್ತಿ. ಗ್ರಾಮೀಣ ಕುಡಿಯುವ ನೀರಿನ ಎ ಇ ಇ. ರಾಮದಾಸ್. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ. ಎ ಇ ಇ ಮಂಜುನಾಥ್. ಆಹಾರ ಶಿ ರಸ್ತೆದಾರ್ ಗಣೇಶ್ ಸಾಮಾಜಿಕ ಅರಣ್ಯ ಅಧಿಕಾರಿ .ಮಂಜುನಾಥ್. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಶ್ವನಾಥ್ ಗೌಡ. ಪಶುಪಾಲನ ಮತ್ತು ಪಶು ವೈದ್ಯಕೀಯ ಸಹಾಯಕ ನಿರ್ದೇಶಕರಾದ ಗಿರೀಶ್ ಬಾಬು ರೆಡ್ಡಿ ಉಪ ತಹಶೀಲ್ದಾರರಾದ ಇನಾಯ್ತು ಉಲ್ಲಾ. ಟಿ.ಎಚ್.ಒ. ರಮೇಶ್ ಬಾಬು. ಕಂದಾಯ ತನಿಖಾಧಿಕಾರಿಗಳಾದ ನಾರಾಯಣಪ್ಪ. ಮೀನುಗಾರಿಕಾ ಇಲಾಖೆ ಅಧಿಕಾರಿ
ರಂಗಸ್ವಾಮಿ.
ಪಿಡಿಒ ನವೀನ್ ಕುಮಾರ್ ಗ್ರಾಮ ಲೆಕ್ಕಿಗರಾದ ರವಿಕುಮಾರ್ ಜಗದೀಶ್ ಕಿರಣ್. ಬೆಸ್ಕಾಂ ಇಲಾಖಾಧಿಕಾರಿ ಗಳು ಹಾಗೂ
ಗ್ರಾಮ ಪಂಚಾಯತಿ ಸದಸ್ಯರುಗಳಾದ ನರಸಪ್ಪ .ನರಸಿಂಹಮೂರ್ತಿ. ವೆಂಕಟೇಶ್ ರೆಡ್ಡಿ . ಸಾರ್ವಜನಿಕರುಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು