ಪಾವಗಡ:- ವಿ.ಎಸ್.ಎಸ್.ಎನ್ ಅಧ್ಯಕ್ಷರ ಆಯ್ಕೆ ವೈ.ಎನ್.ಹೊಸಕೋಟೆ : ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಗುರುವಾರದಂದು ಚುನಾವಣೆ ನಡೆಯಿತು. ಒಟ್ಟು ೧೧ ನಿರ್ದೇಶಕರನ್ನು ಒಳಗೊಂಡ ಸಮಿತಿಯ ಅಧ್ಯಕ್ಷ ಮತ್ತು ಉಪಾದ್ಯಕ್ಷ ಸ್ಥಾನಗಳಿಗೆ ಒಬ್ಬೊಬ್ಬರನ್ನು ಹೊರತಾಗಿ ಮತ್ತಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಷಂಷುದ್ದೀನ್ ಮತ್ತು ಉಪಾಧ್ಯಕ್ಷರಾಗಿ ಹೆಚ್.ಓ.ಗೋಪಾಲ್ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಸ್.ಸೌಮ್ಯ ಘೋಶಿಸಿದರು. ಈ ಸಂದರ್ಭದಲ್ಲಿ ಉಳಿದ ನಿರ್ದೇಶಕರು ಮತ್ತು ಮುಖಂಡರು ಹಾಜರಿದ್ದರು. ಬೆಂಬಲಿಗರು ಆಯ್ಕೆಯಾದ ಅಭ್ಯರ್ಥಿಗಳಿಗೆ ಪುಷ್ಪಮಾಲೆ ಹಾಕಿ ಸಂಭ್ರಮಿಸಿದರು