IMG 20220928 WA0000

ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ…!

DISTRICT NEWS ತುಮಕೂರು

60 ವರ್ಷದ ವಯೋವೃದ್ಧ ಹತ್ಯೆ

ಪಾವಗಡ.. ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿದೆ ಆಂಧ್ರ‌ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿ ಆಂಧ್ರ ಪ್ರದೇಶಕ್ಜೆ ಹೊಂದಿಕೊಂಡಿರುವ ತಿರುಮಣಿ ಪೋಲಿಸ್ ಠಾಣೆ ವ್ಯಾಪ್ತಿಯ ತಪ್ಪಗಾನದೊಡ್ಡಿಯ ಗೇಟ್ ಬಳಿ ಬಿಸಾಕಿ ಹೋಗಿದ್ದಾರೆ ಎನ್ನಲಾಗಿದೆ.

ಮಾಣಿಕ್ಯಂ ಭಾಷಾ ( 60) ಆಂಧ್ರಪ್ರದೇಶದ ಅನಂತಪುರ ನಗರದ ವಾಸಿ ಹತ್ಯೆಗೀಡಗಿದ್ದಾರೆ. ಮಾಣಿಕ್ಯಂ ಭಾಷಾ ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ಮನೆಯವರಿಗೆ ತಿಳಿಸಿ, ಮಂಗಳವಾರ ಬೆಳಗಿನ ಜಾವ 5:30ರ ವೇಳೆಗೆ ಅನಂತಪುರ ನಗರವನ್ನು ಬಿಟ್ಟಿದ್ದರು ಎಂದು ಕುಟುಂಬಸ್ಥರಿಂದ ಮಾಹಿತಿ ತಿಳಿದು ಬಂದಿದೆ.

ಮೃತ ವ್ಯಕ್ತಿ ಗುಲ್ಬರ್ಗ ಜಿಲ್ಲೆಯ ಹುಮ್ನಾಬಾದ್ ನಲ್ಲಿ ವಾಸಿಸುವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು ಎಂದು, ಮೃತ ವ್ಯಕ್ತಿಯ ಮೊಮ್ಮಗ ತಿರುಮಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಿರುಮಣಿ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ವರದಿ:ಶ್ರೀನಿವಾಸಲು ಎ