IMG 20210512 WA0001

ಪಾವಗಡ: ಮಾಸ್ಕ್ ದರಿಸಲು ಜನಜಾಗೃತಿ ಅಭಿಯಾನ…!

DISTRICT NEWS ತುಮಕೂರು

ಪಾವಗಡ. ಕೊರೊನಾ ವೈರಸ್ ನಿಯಂತ್ರಣ ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಇಂದು ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಕೊರೊನಾ 2 ಜಾಗೃತಿ ಅರಿವು ಮೂಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ರಾಜೇಶ್ ಮಾತನಾಡಿ ಕೊರೋನಾ 2 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲಿದೆ. ಇದರ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಕಾರ ಅಷ್ಟೇ ಮುಖ್ಯವಾಗಿರುತ್ತದೆ. ಮಾಸ್ಕ್ ಧರಿಸುವ ಮೂಲಕ ಜನರು ಕೊರೊನಾ ತಡೆಯಲು ಸಹಕರಿಸುವಂತೆ ಮನವಿ ಮಾಡಿದರು

ಕೋರೋನ 2 ಮಾರಾಣಾಂತಿಕ ವೈರಾಣು ಹರಡುವಿಕೆ ತಡೆಯಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕನಿಷ್ಠ 6 ಅಡಿಗಳ ಅಂತರ ಕಾಪಾಡಿಕೊಳ್ಳುವ ಜೊತೆಗೆ ಕೈಗೆ ಸೋಪು ಮತ್ತು ನೀರಿನಿಂದ ತೊಳೆಯುವ ಮೂಲಕ ಕೊರೊನಾ ವೈರಸ್‌ಗೆ ಕಡಿವಾಣ ಹಾಕಲು ಸಾಧ್ಯವೆಂದು ತಿಳಿಸಿದರು ಈ ಸಂದರ್ಭದಲ್ಲಿ
ಕರ್ನಾಟಕ ಸರ್ಕಾರ ಇಂದಿರಾ ಕ್ಯಾಂಟೀನ್​ನಲ್ಲಿ ಮೇ 24ರವರೆಗೆ ನಿರ್ಗತಿಕರು, ಕಾರ್ಮಿಕರು, ಬಡವರಿಗೆ ಉಚಿತವಾಗಿ ಊಟ-ತಿಂಡಿ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರುIMG 20210512 WA0000
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ ಪುರಸಭೆ ಸದಸ್ಯರಾದ ಸುದೇಶ್ ಬಾಬು. ವಿಜಿಕುಮಾರ್. ಪುರಸಭೆ ಸಿಬ್ಬಂದಿ ವರ್ಗದವರಾದ ಸಮುದಾಯ ಅಧಿಕಾರಿ ಭಾಗ್ಯಮ್ಮ ಕಂದಾಯ ನಿರೀಕ್ಷಕರು ವೇಣುಗೋಪಾಲ್ . ಕಂದಾಯಅಧಿಕಾರಿ ನಾಗಭೂಷಣ್. ಜ್ಞಾನೇಶ್ ಮೋಹನ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು

ವರದಿ: ಬುಲೆಟ್ ವೀರಸೇನಯಾದವ್