ಸಿ ಇ ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹೆಲ್ಪ್ ಸೊಸೈಟಿ ಸನ್ಮಾನ
ಪಾವಗಡ ಸೆ 23 ಐ ಎ ಎಸ್, ಕೆ ಎ. ಎಸ್ ಪದವಿ ಪಡೆದು ಉನ್ನತ ಮಟ್ಟದ ಅಧಿಕಾರಿಗಲಾಗಿ ಜನಸೇವೆ ಮಾಡುವ ಅಭಿಲಾಸೆ ಹೊಂದುವಂತೆ ಡಿ. ಸಿ. ಸಿ. ಬ್ಯಾಂಕ್ ನಿರ್ದೇಶಕ ಟಿ.ನರಸಿಂಹಯ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೆರೇಪಿಸಿದರು.
ಪಾವಗಡ ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷರಾದ ಮಾನಂ ವೆಂಕಟಸ್ವಾಮಿ ನಿವಾಸದ ಆವರಣದಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ವ ಲ್ಲೂರು ನಿವಾಸಿಗಳಾದ ಸತೀಶಬಾಬು ಪುತ್ರ ಸಿ. ಇ. ಟಿ. ಅಗ್ರಿಕಲ್ಚರ್ ಪರೀಕ್ಷೆಯಲ್ಲಿ 110 ನೆ ರಾಂಕ್ ಪಡೆದ ಪವನ್ ಕುಮಾರ್ ಹಾಗೂ 168 ನೆ ರಾಂಕ್ ಪಡೆದ ಕೃಷ್ಣಪ್ಪ ಪುತ್ರ ಚರಣ್ ಸಾಯಿ ರವರನ್ನು ಸನ್ಮಾನಿಸಿ ಮಾತನಾಡಿದ ಟಿ. ನರಸಿಂಹಯ್ಯ ಇಂದಿನ ಸ್ಮರ್ದರ್ಥ ಕ ಶೈಕ್ಷಣಿಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ತೆಗುದುಕೊಂಡು ಉನ್ನತ ಮಟ್ಟದ ಅಧಿಕಾರಿಗಳಗಿ ಜನಸೇವೆ ಜೊತೆಗೆ ಬಡವರ ಸೇವೆಯನ್ನು ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾನಂ ವೆಂಕಟಸ್ವಾಮಿ ಮಾತನಾಡುತ್ತ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡ ಹಲವಾರು ಜನಸೇವೆ ಕಾರ್ಯಕ್ರಮಗಳ ಜೊತೆಗೆ ಪ್ರತಿಭವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಪ್ರೇರಿಫೀಸುತ್ತಿರುವದನ್ನು ಶ್ಲಾಗಿಸಿದರು
ಈ ಸರಳ ಕಾರ್ಯಕ್ರಮದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೊಗಡು ವೆಂಕಟೇಶ್, ಮೈಲಾರರೆಡ್ಡಿ,ವೈದ್ಯ ಶ್ರೀಕಾಂತ್ ಪುವ್ವಡಿ,ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್,ಅಕ್ಕಳಪ್ಪನಾಯ್ಡು, ಗಂಗಾಧರ್ ನಾಯ್ಡು,ಗೊರ್ತಿ ನಾಗರಾಜ,ಯುವ ಮುಖಂಡ ಅನಿಲ್,ನಾಗೇಂದ್ರ, ರೋಟರಿ ಅಧ್ಯಕ್ಷ ಶ್ರೀಧರ್ ವೀರಮ್ಮನಹಳ್ಳಿ ಲೋಕೇಶ್, ನಾಗೇಂದ್ರ, ಗೋವಿಂದ, ಸತೀಶ್, ಸಾಗರ್, ಚಿರು, ತೇಜ, ಶ್ರೀಧರ್, ಸುಬ್ರಮಣಿ , ಗುಪ್ತ, ಕಾರ್ಯದರ್ಶಿ ಸತ್ಯ ಲೋಕೇಶ್, ಹೆಲ್ಪ್ ಸೊಸೈಟಿ ಪದಾಧಿಕಾರಿಗಳದ ಬೇಕರಿ ನಾಗರಾಜ, ರಾಕೇಶ್, ಸಾಯಿ, ಶಶಿಕಲಾ ಇನ್ನು ಮುಂತಾದವರಿದ್ದರು
ವರದಿ: ಸತೀಶ್