15 7 21 Masks handing over DDPI Madhugiri 4

ಪಾವಗಡ: SSLC ವಿದ್ಯಾರ್ಥಿ ಗಳಿಗೆ ಮಾಸ್ಕ್, ಕುಡಿಯುವ ನೀರು ವಿತರಣೆ….

DISTRICT NEWS ತುಮಕೂರು

ಪಾವಗಡ:  ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ರೇವಣ ಸಿದ್ದಪ್ಪ ರವರು ಹಾಗೂ ಪಾವಗಡ ತಾಲ್ಲೂಕಿನ ಶಿಕ್ಷಣಾಧಿಕಾರಿಗಳಾದ ಶ್ರೀ ಅಶ್ವತ್ಥನಾರಾಯಣ ಹಾಗೂ ಇತರ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮಾಸ್ಕ, ಕುಡಿಯುವ ನೀರು ವಿತರಣೆ ಕಾರ್ಯಕ್ರಮ ನಡೆಯಿತು.

ಪೂಜ್ಯ ಸ್ವಾಮಿ ಜಪಾನಂದಜೀ ರವರು ಈ ವರ್ಷದ ಸರಿಸುಮಾರು 3200 ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮುಖಗವಸು (ಮಾಸ್ಕ್) ಹಾಗೂ ಶುದ್ಧ ಕುಡಿಯುವ ನೀರಿನ ಪೊಟ್ಟಣಗಳನ್ನು ಹಸ್ತಾಂತರಿಸಿದರು.

ಕಳೆದ ವರ್ಷವೂ ಇದೇ ತೆರನಾಗಿ ಎಲ್ಲಾ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ವಿತರಿಸಿದ್ದನ್ನು ಉಪನಿರ್ದೇಶಕರಾದ ಶ್ರೀ ರೇವಣ ಸಿದ್ದಪ್ಪ ರವರು ಸ್ಮರಿಸಿದರು. ತಮ್ಮ ಸ್ವೀಕೃತಿ ಭಾಷಣದಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ನಾಲ್ಕೂ ತಾಲ್ಲೂಕುಗಳಲ್ಲಿ ಅದರಲ್ಲಿಯೂ ಶಿಕ್ಷಣ ಇಲಾಖೆಗೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಸಹಾಯ ಹಸ್ತವನ್ನು ನಿರಂತರವಾಗಿ ನೀಡುತ್ತಿರುವುದನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಇಡೀ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ದೂರತರಂಗ ಶಿಕ್ಷಣದ ಯೋಜನೆಯನ್ನು ಮಧುಗಿರಿ, ಕೊರಟಗೆರೆ, ಶಿರಾ ಹಾಗೂ ಪಾವಗಡದಲ್ಲಿ ಆರಂಭಿಸಿ ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಆಧುನಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಶಿಕ್ಷಣವನ್ನು ನೀಡುವಂತಹ ಅದ್ಭುತವಾದ ಯೋಜನೆಯನ್ನು ಕೈಗೆತ್ತಿಕೊಂಡು ಈ ಯೋಜನೆಗೆ ತಾವೇ ದೂರ ತರಂಗ ಶಿಕ್ಷಣ ಎಂಬ ಹೆಸರನ್ನು ನೀಡಿ ರಾಜ್ಯದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದ್ದಾರೆ.

ಈ ವರ್ಷವೂ ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳ ಸುರಕ್ಷತೆಗಾಗಿ ಈ ರೀತಿಯ ಮಾಸ್ಕ್‍ಗಳನ್ನು ಇಡೀ ತಾಲ್ಲೂಕಿನಾದ್ಯಂತ ವಿತರಿಸಿರುತ್ತಾರೆ. ಹಾಗೆಯೇ ಶುದ್ಧ ಕುಡಿಯುವ ನೀರನ್ನೂ ಸಹ ನೀಡುತ್ತಿರುವುದು ಪೂಜ್ಯ ಸ್ವಾಮಿ ಜಪಾನಂದಜೀ ರವರು ವಿದ್ಯಾರ್ಥಿಗಳ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಭರವಸೆಯ ಒಂದು ಸೂಚ್ಯಕ ಎಂದು ಭಾವಿಸಬಹುದು. ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಗಳಾದ ಶ್ರೀ ಅಶ್ವತ್ಥನಾರಾಯಣ, ಶ್ರೀ ಬಸವರಾಜು ಮತ್ತಿತರರು ಪಾಲ್ಗೊಂಡಿದ್ದರು. ಆಶ್ರಮದ ಪರವಾಗಿ ಯೋಜನೆಗಳ ಸಂಯೋಜಕರಾಗಿರುವ ಶ್ರೀ ಸುದೇಶ್ ಬಾಬು ಹಾಗೂ ಶ್ರೀ ದೇವರಾಜ್ ಲೋಕೇಶ್ ರವರು ಪಾಲ್ಗೊಂಡಿದ್ದರು.