IMG 20210721 WA0001

ಪಾವಗಡ: ಆದರ್ಶ ಶಾಲೆ ಸ್ಥಳಾಂತರಕ್ಕೆ ಆಗ್ರಹ….!

DISTRICT NEWS ತುಮಕೂರು

ಪಾವಗಡ : ಪಟ್ಟಣದಲ್ಲಿ ಶಿಥಿಲಗೊಂಡಿರುವ ಆದರ್ಶ ಶಾಲೆಯನ್ನು ಅರಸೀಕೆರೆ ಗ್ರಾಮದ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಿರುವ    ಸುಸಜ್ಜಿತವಾದ ಆದರ್ಶ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು  ಒತ್ತಾಯಿಸಿ ಮಂಗಳವಾರ ಕರ್ನಾಟಕ ರಣಧೀರ ಪಡೆಯ   ಜಿಲ್ಲಾಧ್ಯಕ್ಷರಾದ ಮರಿದಾಸನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ತಹಶಿಲ್ದಾರರ ನಾಗರಾಜುರವರಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು.

ನಂತರ ಮಂಜುನಾಥ್ ನವರು ಮಾತನಾಡುತ್ತಾ , ಪಟ್ಟಣದಲ್ಲಿರುವ ಆದರ್ಶ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರಿಸುವುದನ್ನು ಪ್ರಶ್ನಿಸಿ ಕೆಲವು ಪೋಷಕರು 11-02- 2015 ರಂದು ನ್ಯಾಯಾಲಯದ ಮೊರೆ ಹೋಗಿದ್ದರು. 06-09-2018 ರಂದು ನ್ಯಾಯಾಲಯವು ಈ ಪ್ರಕರಣವನ್ನು ಕೈಗೆತ್ತಿಕೊಂಡು ಸಾಕ್ಷಿಗಳ ವಿಚಾರಣೆಯನ್ನು ನಡೆಸಿದ ನಂತರ 17-06-2020 ರಂದು ತಡೆಯಾಜ್ಞೆಯನ್ನು ವಜಾಗೊಳಿಸಿತು.
ನಂತರ ಆರಂಭವಾಗಬೇಕಿದ್ದ ಆದರ್ಶ ಶಾಲೆಯನ್ನು ಲೋಕಸಭಾ ಸದಸ್ಯರಾದ ನಾರಾಯಣಸ್ವಾಮಿ ಅವರು ತಾತ್ಕಾಲಿಕ ತಡೆ ನೀಡಿದರು. ಇದಾದ ನಂತರ ದಿನಗಳಲ್ಲಿ ಶಿಕ್ಷಣ ಸಚಿವರಾದಂತಹ ಸುರೇಶ್ ಕುಮಾರ್ ರವರು ಒಂದು ವಾರದ ತಾತ್ಕಾಲಿಕ ತಡೆಯನ್ನು ಮಧುಗಿರಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕರು ಆದೇಶಿಸಿರುತ್ತಾರೆ. ಎಲ್ಲಾ ತಾತ್ಕಾಲಿಕ ತಡೆ ಒಂದು ವಾರ ಅಥವಾ ಹತ್ತು ದಿನಗಳ ಮಟ್ಟಿಗೆ ಆಗಿದ್ದು ಇಲ್ಲವೇ ತಿಂಗಳು ಆಗಿರುತ್ತವೆ. ಇಲ್ಲಿಯವರೆಗೂ ಈ ಶಾಲೆ ಸ್ಥಳಾಂತರಗೊಳ್ಳದೆ ಇರುವುದು ವಿಪರ್ಯಾಸ. ಕಾಣದ ಕೈಗಳ ಕೈಚಳಕದಿಂದ ಮೂಲಭೂತ ಸೌಕರ್ಯಗಳಿಲ್ಲದ ಹಾಗೂ ಸ್ವಂತ ಕಟ್ಟಡವು ಸಹ ಇಲ್ಲದ ಶಿಥಿಲಗೊಂಡಿರುವ ಕಟ್ಟಡದಲ್ಲಿ ಮಕ್ಕಳು ಪಾಠ ಕೇಳುವ ದುಸ್ಥಿತಿ ಒದಗಿರುವುದು ಖಂಡನೀಯ. ಆದ್ದರಿಂದ ತಕ್ಷಣವೇ ಆದರ್ಶ ಶಾಲೆಯನ್ನು ಅರಸೀಕೆರೆ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತವಾದ ಕಟ್ಟಡ ಹೊಂದಿರುವ ಶಾಲೆಗೆ ವರ್ಗಾಯಿಸಬೇಕು ಇಲ್ಲದಿದ್ದರೆ ಇನ್ನು ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷರಾದ ಪೂಜಾರಪ್ಪ , ಸದಸ್ಯರಾದ ಶಿವರಾಜ್, ಅನ್ನಪೂರ್ಣಮ್ಮ , ಕರ್ನಾಟಕ ರಣಧೀರ ಪಡೆ ಉಪಾಧ್ಯಕ್ಷ ಅಕ್ಕಲಪ್ಪ, ಕಾರ್ಯದರ್ಶಿ ಯಶವಂತ್ ಸಂಘಟನಾ ಕಾರ್ಯದರ್ಶಿಯಾದ ಹನುಮಂತ ಪದಾಧಿಕಾರಿ ಸಿದ್ದೇಶ್ವರ ಬಿಎಸ್ಪಿ ಮಂಜುನಾಥ್ ಹಾಗೂ ಅರಸೀಕೆರೆಯ ನೂರಾರು ಗ್ರಾಮಸ್ಥರು ಹಾಜರಿದ್ದರು.

ವರದಿ: ಬುಲೆಟ್ ವೀರಸೇನಯಾದವ್