IMG 20210721 WA0012

ಪಾವಗಡ: ಬಕ್ರೀದ್ ಹಬ್ಬ ಆಚರಣೆ….!

DISTRICT NEWS ತುಮಕೂರು

ಪಾವಗಡ. ಬಕ್ರೀದ್ ಹಬ್ಬ ಅಂಗವಾಗಿ ಪಾವಗಡ ಪಟ್ಟಣದ ಮುಸ್ಲಿಂ ಭಾಂದವರು ಸರಳವಾಗಿ ಪವಿತ್ರವಾದ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು. ಕೊವಿಡ್ ಕಾರಣದಿಂದ ಸರಳ ಹಬ್ಬವನ್ನು ಜಾಮೀಯಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಮುತುವಲ್ಲಿ ಮಹ್ಮಮದ್ ಫಜುಲುಲ್ಲಾ ಸಾಬ್ ಮಾತನಾಡಿ.
ಸುಮಾರು 4,000 ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ.

ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್‌ ಅವರಿಗಿಂತ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸಿ ಇಂದಿಗೂ ಹಬ್ಬದ ದಿನ ಅಥವಾ ನಂತರದ ಮೂರು ದಿನಗಳಲ್ಲಿ ಜಾನುವಾರು ಬಲಿ ಅರ್ಪಿಸಲಾಗುತ್ತದೆ. ಆರ್ಥಿಕವಾಗಿ ಸಬಲರಾಗಿರುವ ಪ್ರತಿಯೊಬ್ಬರೂ ಪ್ರಾಣಿಬಲಿ ನೀಡಬೇಕು. ಬಲಿ ಅರ್ಪಿಸಿದ ಪ್ರಾಣಿಯಿಂದ ಲಭಿಸಿದ ಮಾಂಸವನ್ನು ಸಮನಾಗಿ ಮೂರು ಪಾಲು ಮಾಡಬೇಕು. ಅದರಲ್ಲಿ ಒಂದು ಅಂಶವನ್ನು ಸ್ವತಃ ಬಳಸಿಕೊಳ್ಳಬಹುದು. ಇನ್ನೆರಡು ಪಾಲುಗಳನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚಬೇಕು ಬಕ್ರೀದ್ ಹಬ್ಬದ ಪ್ರಯುಕ್ತ ಕೊವಿಡ್ ಕಾರಣದಿಂದ ಮುಸ್ಲಿಂ ಬಾಂ ಬಾಂಧವರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾ ರ್ಥನೆ ಸಲ್ಲಿಸಿ, ಶೀಘ್ರವಾಗಿ ಕೊವಿಡ್ ಸೋಂಕು ನಿವಾರಣೆಯಾಗುವಂತೆ ಹಾಗೂ ಕೊರೋನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನರು ಬೇಗ ಗುಣವಾಗಿ ಬರ್ಬೇಕು ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಮಸೀದಿಯಾ ಗುರುಗಳಾದ ಇಮಾಮ್. ಮುತುವಲ್ಲಿ ಮಹ್ಮಮದ್ ಫಜುಲುಲ್ಲಾ ಸಾಬ್. ಪುರಸಭೆ ಸದಸ್ಯ ಮಹಮ್ಮದ್ ಇಮ್ರಾನ್. ಆರ್ ಟಿ ಖಾನ್. ರಿಜ್ವಾನ್. ಷಾ ಬಾಬು. ಹೋಟೆಲ್ ಸಾದಿಕ್ ಸಾಬ್. ರಿಯಾಜ್. ಶಾಫಿ. ಸಿಕಿದರ್. ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು

ವರದಿ: ಬುಲೆಟ್ ವೀರಸೇನಯಾದವ್