IMG 20220815 WA0021

ಆನೇಕಲ್ :75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ…!

DISTRICT NEWS ಬೆಂಗಳೂರು

75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ: ಆನೇಕಲ್ ಶಾಸಕ ಬಿ.ಶಿವಣ್ಣರಿಂದ ರಾಷ್ಟ್ರ ಧ್ವಜಾರೋಹಣ

ಆನೇಕಲ್: ಸ್ವಾತಂತ್ರ್ಯ ದಿನಾಚರಣೆ ಆನೇಕಲ್ ಪುರಸಭೆಯ ಎ ಎಸ್ ಬಿ ಶಾಲಾ ಮೈದಾನದಲ್ಲಿ ಶಾಸಕ ಬಿ.ಶಿವಣ್ಣ ಪುರಸಭೆ ಅಧ್ಯಕ್ಷ ಎನ್.ಎಸ್ ಪದ್ಮನಾಭ ತಹಶಿಲ್ದಾರ್ ಪಿ.ದಿನೇಶ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.
ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯದ ದಿನಾಚರಣೆ ನಡೆಯಿತು. ಶಾಲಾ ಕ್ರೀಡಾಂಗಣದಲ್ಲಿ ನಡೆದ 72ನೇ ಸ್ವಾತಂತ್ರೋತ್ಸವ ಸಂದೇಶ ನೀಡಿದ ಶಾಸಕ ನೂರಾರು ವರ್ಷಗಳ ಬ್ರಿಟೀಷರ ದಾಸ್ಯದಿಂದ ಹೊರ ಬಂದು ನಮ್ಮ ದೇಶ ಸ್ವಾತಂತ್ರ್ಯ ಹೊಂದಿದ ದಿನ.
ಈ ಸ್ವಾತಂತ್ರ್ಯದ ಹೋರಾಟದ ಹಿಂದೆ ಸಾವಿರಾರು ಮಂದಿಯ ಬಲಿದಾನವಿದೆ. ಮಾನ್ಯರಾದ ಮಹಾತ್ಮಗಾಂಧಿ, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಲಾಲಾಲಜಪತ್‌ರಾಯ್, ಜವಾಹರಲಾಲ್ ನೆಹರು, ಸುಭಾಶ್ಚಂದ್ರ ಬೋಸ್, ಸರೋಜಿನಿ ನಾಯ್ಡು ಸೇರಿದಂತೆ ಸಹಸ್ರಾರು ಮಂದಿಯ ಕೆಚ್ಚೆದೆಯ ಹೋರಾಟದ ಫಲ ಈ ಸಾಧನೆಗೆ ಕಾರಣರಾದ ಎಲ್ಲಾ ಮಹನೀಯರ
ನಮ್ಮ ಹಿರಿಯರ ತ್ಯಾಗ, ಬಲಿದಾನಗಳನ್ನು ಸ್ಮರಿಸುತ್ತಾ, ಬಲಿಷ್ಟ ಭಾರತವನ್ನು ರೂಪಿಸಲು ಸದಾ ಶ್ರಮಿಸೋಣವೆಂದು ಎಂದು ಶಾಸಕ ಬಿ.ಶಿವಣ್ಣ ಕರೆ ನೀಡಿದರು.
ಆನೇಕಲ್ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಪ್ರಮುಖ ಅಂಶಗಳೊಂದಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎನ್.ಎಸ್ ಪದ್ಮನಾಭ ನಗರದ ಎ ಎಸ್ ಬಿ ಶಾಲಾ ಮೈದಾನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ರಾಷ್ಟ್ರ ಧವಜಾರೋಹಣಗೈದು ಅಧ್ಯಕ್ಷರು ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು ಅಲ್ಲದೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಸಂಗ್ರಾಮ ಗೀತ ಕಥನ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಬಿ.ಶಿವಣ್ಣ ಪುರಸಭಾ ಅಧ್ಯಕ್ಷ ಎನ್.ಎಸ್ ಪದ್ಮನಾಭ ತಹಶಿಲ್ದಾರ ಪಿ.ದಿನೇಶ್ ಆನೇಕಲ್ ಉಪ ವಿಭಾಗದ ಡಿ ವೈ ಎಸ್ ಪಿ ಲಕ್ಷ್ಮೀನಾರಾಯಣ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಲಕ್ಷ್ಮೀನಾರಾಯಣ ಸ್ವಾಮಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ ಶಿವಣ್ಣ ತಾಲೂಕಿನ ನಗರಸಭೆ ,ಪುರಸಭೆ ಗ್ರಾಮ ಪಂಚಾಯಿತಿಗಳ ಎಲ್ಲಾ ಜನಪ್ರತಿನಿಧಿಗಳು, ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಮತ್ತು ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.: ವರದಿ ಹರೀಶ್ ಗುರುಮೂರ್ತಿ ಆನೇಕಲ್