ಮಧುಗಿರಿ. ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹ ಎಂಬ ಶೀರ್ಷಿಕೆ ವರದಿಗೆ ಫಲ ಶ್ರುತಿ
ಮಧುಗಿರಿ: ಪಟ್ಟಣದ 19 ವಾರ್ಡನಲಿ.ಶಾಸಕ ಎಂ.ವಿ ವೀರಭದ್ರಯ್ಯ ನವರು ಸುಮಾರು ಎಂಟು ಲಕ್ಷದ ಶುದ್ಧ ನೀರಿನ ಘಟಕವನ್ನು ಉದ್ಘಾಟನೆ ಮಾಡಿದರು. ಆದರೆ ಶುದ್ಧ ನೀರಿನ ಘಟಕ ನೋಡಿಕೊಳ್ಳುವವರು ಯಾರು ಇಲ್ಲದ, ಕಾರಣ ಸುತ್ತಮುತ್ತ ನಿಂತಿರುವ ಕೊಚ್ಚೆ ನೀರು ತೊಟ್ಟಿಗೆ ಬಂದು ಅದೇ ನೀರು ಶುದ್ಧವಾಗಿ ಬರುತ್ತಿತ್ತು. ಆದರೆ ಆ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಸಾರ್ವಜನಿಕರು ಯಾರು ಸಹನೀರನ್ನೂ ಕುಡಿಯುತ್ತಿರಲಿಲ್ಲ. ಇದನ್ನು ಮನಗಂಡ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಸ್ವತಃ ಸ್ಥಳಕ್ಕೆ ಹೋಗಿ ನೀರನ್ನು ಕುಡಿದು ಪರೀಕ್ಷಿಸಿದಾಗ ನೀರು ಅಶುದ್ಧಿಯಾಗಿ ಬರುವುದು ಕಂಡುಬಂದಿತು.ಇದರಿಂದ ಆಕ್ರೋಶಗೊಂಡ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಪುರಸಭೆಯ ಕಾರ್ಯ ವೈಖರಿ ಬಗ್ಗೆಆಕ್ರೋಶ ವ್ಯಕ್ತಪಡಿಸಿದರು ಮತ್ತು ಈ ವಿಚಾರವಾಗಿಸ್ಥಳೀಯ ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಣೆಯಾಗಿತ್ತು
ಸಪ್ತಸ್ವರ ದಲ್ಲಿ ಸುದ್ದಿ ಬಿತ್ತರಿಸಿದ ನಂತರ ಎಚ್ಚೆತ್ತುಕೊಂಡ ಪುರಸಭೆಯ ಅಧಿಕಾರಿಗಳು ಕೇವಲ ಐದು ದಿನಗಳಲ್ಲಿ ಶುದ್ಧ ನೀರಿನ ಘಟಕ ರಿಪೇರಿ ಮಾಡಿಸಲು ಮುಂದಾದರು ಪುರಸಭಾ ಮುಖ್ಯಾಧಿಕಾರಿ ಮತ್ತು ಪುರಸಭೆ ಇಂಜಿನಿಯರ್ ಶುದ್ಧ ಕುಡಿಯುವ ಘಟಕ ವತಿಯಿಂದ ಬರುವ ನೀರು ಕುಡಿದು ನೀರು ಕುಡಿಯಲು ಯೋಗ್ಯವಾಗಿದೆ. ನೀರು ಬೋರ್ ವೆಲ್ ಇಂದ ನೇರವಾಗಿ ಬರುತ್ತಿದ.ಟಿ.ಡಿ.ಎಸ್ 24 ಇದೆ.ಸಾರ್ವಜನಿಕರು ನೀರಿನು ಉಪಯೋಗಿಸಿಕೊಳ್ಳಬಹುದು ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಎಂ ಎಸ.ರಾಘವೇಂದ್ರ ಕನ್ನಡ ಜಾಗೃತಿ ವೇದಿಕೆಯಿಂದ 19 ನಲ್ಲಿ ಉದ್ಘಾಟನೆಗೊಂಡ ಶುದ್ಧ ನೀರಿನ ಘಟಕದಲ್ಲಿ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ನಮ್ಮ ಸಂಘಟನೆಯಿಂದ ಸ್ವತಃ ನೀರು ಕುಡಿದು ನೋಡಿದಾಗ ನೀರು ಅಶುದ್ದಿಯಾಗಿತ್ತು. ಇದನ್ನು ನಾವು ಮಾಧ್ಯಮಗಳ ಮೂಲಕ ಅಧಿಕಾರಿಗಳಿಗೆ ಮುಟ್ಟಿಸಿದೆವು, ಕೂಡಲೇ ಎಚ್ಚೆತ್ತುಕೊಂಡ
ಅಧಿಕಾರಿಗಳು ಶುದ್ಧ ನೀರಿನ ಘಟಕವನ್ನು ಸರಿಪಡಿಸಿದ್ದಾರೆ,
ಈ ನೀರನ್ನು .ಸಾರ್ವಜನಿಕರೆಲ್ಲರೂ ಕುಡಿಯಲು ಉಪಯೋಗಿಸಿ ಕೊಳ್ಳಬಹುದು.ಎಂದು ತಿಳಿಸಿದರು
ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು