ಪಾವಗಡದ ಅಭಿವೃದ್ಧಿಯಲ್ಲಿ ರೋಟರಿ ಸಂಸ್ಥೆಯ ಪಾತ್ರ………
ಪಾವಗಡ: – ಬರದ ನಾಡಾದ ಪಾವಗಡ ತಾಲೂಕನ್ನು ಮಲೆನಾಡಿನಂತೆ ಸಸ್ಯಶಾಮಲ ವಾಗಿ ಕಾಣ ಬೇಕೆನ್ನುವುದು ರೋಟರಿಯ ಆಶಯ ವೆಂದು ರೋಟರಿ 31 90 ಡಿಸ್ಟ್ರಿಕ್ಟ್ ಗವರ್ನರ್ ಆದ ಫಜಲ್ ಮಹಮ್ಮದ್ ತಿಳಿಸಿದರು……… ಪಾವಗಡ ತಾಲೂಕು ಕೃಷ್ಣಗಿರಿ ಪಕ್ಕದಲ್ಲಿರುವ ಜೂಲಯ್ಯನ ಹಟ್ಟಿ ಬಳಿ ಎರಡು ಮತ್ತು ಕೊತ್ತನೂರಿನ ಬಳಿ ಒಂದು ಚೆಕ್ ಡ್ಯಾಮ್ ಅನ್ನು ಸದಾಶಿವನಗರ ಅಂತರಾಷ್ಟ್ರೀಯ ಭಾಗೀದಾರರಾದ ಅಮೇರಿಕಾದ ರೋಟರಿಕ್ಲಬ್ ಆಫ್ ಹೋಲಿಸ್ ಬುಕ್ ಲೈನ್, ರೋಟರಿ ಬೂತ್ ಬೇ, ಹಾರ್ಬರ್ ರೋಟರಿ ಕೋಪನ್ ಹೇಗನ್ ಮಾರ್ನಂಗ್ ಹಾಗೂ ರೋಟರಿ ಪಾವಗಡ ವತಿಯಿಂದ ಸುಮಾರು 35 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು ಅವುಗಳ ಉದ್ಘಾಟನೆಗೆ ಆಗಮಿಸಿದ ಫಜಲ್ ಮಹಮ್ಮದ್ ಅವರು ಮಾತನಾಡುತ್ತಾ ಪಾವಗಡ ತಾಲೂಕಿನಲ್ಲಿ ಮಳೆಯು ತುಂಬಾ ಕಡಿಮೆ ಇದ್ದು. ಬರುವ ಮಳೆಯ ನೀರನ್ನು ಶೇಖರಿಸಲು ಆಗದೆ ಅಂತರ್ಜಲ ಮಟ್ಟ ಕುಸಿದು ಫಲವತ್ತತೆಯಿಂದ ಕೂಡಿದ ಕೃಷಿ ಭೂಮಿಯು ಸಹ ಬರಡು ನೆಲ ವಾಗುತ್ತದೆ. ಇದಕ್ಕೆ ಸೂಕ್ತ ವೆಂದರೆ ನೀರು ಹರಿಯುವ ಜಾಗದಲ್ಲಿ ಚಡ್ಡಿ ನಿರ್ಮಿಸಿದರೆ ನೀರಿನ ಸೆಲೆ ಹೆಚ್ಚಾಗಿ ಅಂತರ್ಜಲ ಹೆಚ್ಚುತ್ತದೆ ಎಂದು ರೋಟರಿ ವತಿಯಿಂದ ಇಲ್ಲಿಯವರೆಗೂ 8 ಚೆಕ್ ಡ್ಯಾಮ್ ನಿರ್ಮಿಸಿದ್ದು ಮುಂದಿನ ವರ್ಷ ಇನ್ನು ನಾಲ್ಕು ಚೆಕ್ ಡ್ಯಾಮ್ ನಿರ್ಮಿಸುತ್ತೇವೆ ಎಂದರು. ರೋಟರಿ ಸಂಸ್ಥೆಯಲ್ಲಿ ಚೆಕ್ ಡ್ಯಾಮ್ ಪಿತಾಮಹ ಎಂದೇ ಹೆಸರಾದ ರೋಟರಿಯ ಸ್ಪೆಷಲ್ ಪ್ರಾಜೆಕ್ಟ್ ಡೈರೆಕ್ಟರ್ ರೋಟರಿ ಸುರೇಶ್ ಅಂಬಲಿ ಮಾತನಾಡುತ್ತಾ ರೋಟರಿ ಸಮಾಜದ ಎಲ್ಲಾ ಸ್ತರದ ಜನರಿಗೂ ಅನುಕೂಲವಾಗುವಂತಹ ಅನೇಕ ಸೇವಾಕಾರ್ಯಗಳನ್ನು ಮಾಡುತ್ತಿದ್ದು, ಪಲ್ಸ್ ಪೋಲಿಯೋವನ್ನು ಭಾರತದಿಂದ ಹಿಮ್ಮೆಟ್ಟಿಸಿದೆ ಅದೇ ರೀತಿ ಬರವನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದೆ ಎಂದರು ಚೆಕ್ ಡ್ಯಾಮ್ ನಿಂದ ಸಾವಿರಾರು ರೈತರ ಬೋರ್ವೆಲ್ ಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಚಳಿಗಾಲ ವಾಗಿರುವುದರಿಂದ 10000 ಬಡವರಿಗೆ ಕಂಬಳಿ ನೀಡುವ ಯೋಜನೆಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸದಾಶಿವ ನಗರದ ರೋಟರಿ ಅಧ್ಯಕ್ಷರಾದ ರೋಟರಿ ನರ್ಮದಾ ನಾರಾಯಣ, ರೋಟರಿ ವಸಂತ ಚಂದ್ರ ಡಿಸ್ಟ್ರಿಕ್ಟ್ ಸೆಕ್ರೆಟರಿ ರೋಟರಿ ಕೇಶವ್, ರೋಟರಿ ಶ್ರೀನಿವಾಸ್, ರೋಟರಿ ಶಶಿಕಾಂತ್, ಕಮಲ್ ಬಾಬು ,ಲೋಕೇಶ್, ಕಟ್ಟಾ ನರಸಿಂಹಮೂರ್ತಿ, ಗುತ್ತಿಗೆದಾರರಾದ ವೆಂಕಟಾಚಲಪತಿ, ಮಧುಗಿರಿ ರೋಟರಿ ಅಧ್ಯಕ್ಷರಾದ ರೋಟರಿ ಜಯರಾಮಯ್ಯ ಇತರೆ ಸದಸ್ಯರು ಭಾಗವಹಿಸಿದ್ದರು
ವರದಿ ಶ್ರೀನಿವಾಸುಲು ಎ