ನಾಗೇಂದ್ರ ಉಚಿತ ಕ್ಯಾಂಟಿನ್ ಆರಂಭ
ಪಾವಗಡ: – ಹಣವಿಲ್ಲದೇ ಚಿಕಿತ್ಸೆ ಪಡೆಯದೇ ರೋಗದಿಂದ ನರಳುತ್ತಿರುವವರಿಗೆ, ಹಸಿದ ಕುಟುಂಬಗಳಿಗೆ ತನ್ನಿಂದ ಏನಾದರೂ ಉಪಕಾರ ಮಾಡಬೇಕೆಂಬ ಕನಸು ಹೊತ್ತು ಅದನ್ನು ನನಸು ಮಾಡಿದ ಸಮಾಜ ಸೇವಕರು ನೇರಳೆ ಕುಂಟೆ ನಾಗೇಂದ್ರ
.ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಾಗೇಂದ್ರ ಉಚಿತ ಅನ್ನದಾನ ಕಾರ್ಯಕ್ರಮ ಹಾಗೂ ಬಿಸಿ ನೀರು ಹಾಲು ಉಚಿತವಾಗಿ ನಿಡುವ ಕಾರ್ಯಕ್ರಮವನ್ನು ಆರಂಭಿಸಿದರು.
ನಂತರ ಮಾತನಾಡಿದ ಅವರು ಕೊವಿಡ್ ಸೋಂಕಿನಿಂದ ತೀವ್ರ ಸ್ವರೂಪದಿಂದ ಬಳಲುತ್ತಿರುವ ವರೊಂದಿಗೆ ಆಸ್ಪತ್ರೆ ಸಮೀಪ ಬರುತ್ತಿರುವವರು ಮತ್ತು ಕೊವಿಡ್ ಪರೀಕ್ಷೆಗೆ ಬರುತ್ತಿರುವವರಿಗೆ ಪಟ್ಟಣ ಪ್ರದೇಶಗಳಲ್ಲಿ ಊಟ ತಿಂಡಿ ಮಾತಿರಲಿ ಕುಡಿಯೋದಕ್ಕೆ ನೀರೂ ಕೂಡ ಸಿಗುತ್ತಿಲ್ಲ ಹಳ್ಳಿಗಳಿಂದ ಕೊವಿಡ್ ಪರೀಕ್ಷೆಗೆ ಬರುತ್ತಿರುವ ನೂರಾರು ಜನರು ತಿಂಡಿ ಊಟಗಳಿಲ್ಲದೆ ಹಸಿವಿನಿಂದ ಪರದಾಡುವಂತೆ ಮಾಡಿತ್ತು. ಇಂತಹ ಸ್ಥಿತಿಯನ್ನುಇದನ್ನು ಮನಗಂಡು ನಾನು ಈ ಸೇವೆಗೆ ಮುಂದಾಗಿದ್ದೇನೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹರೆಡ್ಡಿ. ಮಾಜಿ ಪುರಸಭಾ ಅಧ್ಯಕ್ಷ ಮಾನಂ ವೆಂಕಟಸ್ವಾಮಿ. ಮರದಾಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಂತಲ ರೆಡ್ಡಿ. ಹೆಲ್ಪ್ ಸೋಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್. ಕಿರಣ್. ಸುಮಂತ್. ವಂಶಿ. ಗೋವರ್ಧನ್. ನರಸಿಂಹ. ರಾಜು .ಇನ್ನು ಮುಂತಾದವರು ಉಪಸ್ಥಿತರಿದ್ದರು
ವರದಿ- ಬುಲೆಟ್ ವೀರಸೇನಯಾದವ್