IMG 20220919 WA0001

ಮಧುಗಿರಿ:ಶವ ಸಂಸ್ಕಾರ ಮಾಡಲು ಸ್ಥಳವಿಲ್ಲದೆ ರಸ್ತೆಯಲ್ಲಿ ಶವವನ್ನು ಇಟ್ಟು ಪ್ರತಿಭಟಿಸಿದ ಗ್ರಾಮಸ್ಥರು…!

DISTRICT NEWS ತುಮಕೂರು

*ಶವ ಸಂಸ್ಕಾರ ಮಾಡಲು ಸ್ಥಳವಿಲ್ಲದೆ ರಸ್ತೆಯಲ್ಲಿ ಶವವನ್ನು ಇಟ್ಟು ಪ್ರತಿಭಟಿಸಿದ ಗ್ರಾಮಸ್ಥರು*….

ಮಧುಗಿರಿ ತಾಲೂಕಿನ ಬಿಜವರ ಗ್ರಾಮದಲ್ಲಿ ದಲಿತ ಮಹಿಳೆಯಾದ ಸುಮಾರು 75 ವರ್ಷ ವಯಸ್ಸುಳ್ಳಹನುಮಕ್ಕ ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ ಮೃತ ದೇಹದ ಅಂತ್ಯ ಸಂಸ್ಕಾರ ಮಾಡಲು ಗ್ರಾಮದಲ್ಲಿ ಸ್ಥಳಾವಕಾಶವಿಲ್ಲದೆ ಹಾಗೂ ಸರ್ಕಾರಿ ರುದ್ರ ಭೂಮಿ ಇಲ್ಲದೆ ಇರುವದರಿಂದ ಗ್ರಾಮಸ್ಥರು ಹನುಮಕ್ಕನ ಮೃಹ ದೇಹ ಅಂತ್ಯ ಸಂಸ್ಕಾರ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಗ್ರಾಮಸ್ಥರು ಹಲವಾರು ಬಾರಿ ತಾಲೂಕ್ ಆಡಳಿತಕ್ಕೆ ಮನವಿ ಸಲ್ಲಿಸಿದರು ಕೂಡ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ಬೇಜವಾಬ್ದಾರಿತನ ಮತ್ತು ನಿರ್ಲಕ್ಷತೋರಿದ್ದಾರೆ ಆದ್ದರಿಂದ ಹನುಮಕ್ಕ ನ.ಮೃತ ದೇಹದ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶವಿಲ್ಲದೆ ಇರುವುದರಿಂದ ಮನ ನೋಂದಂತಹ ಗ್ರಾಮಸ್ಥರು ರಸ್ತೆಯಲ್ಲಿಯೇ ಶವ ಇಟ್ಟುಪ್ರತಿಪಟಿಸಿದರು.

ಮಧುಗಿರಿ ತಾಲೂಕು ಕಸಬಾ ಹೋಬಳಿ, ಬಿಜವರ ಗ್ರಾಮದಲ್ಲಿ ಸುಮಾರು 350ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸ ಮಾಡುತ್ತಿದ್ದು ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಅಂತ್ಯ ಸಂಸ್ಕಾರ ಮಾಡಲು ಕೂಡ ಅಂಗೈಯ ಅಗಲಜಾಗವಿಲ್ಲದ ಪರಿಸ್ಥಿತಿ ಇದೆ. ಅತಿಹೆಚ್ಚಿನದಾಗಿ ಕಡುಬಡುವರು ವಾಸ ಮಾಡುತ್ತಿದ್ದಾರೆ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾದ.ತಾಲೂಕ್ ಆಡಳಿತ ವತಿಯಿಂದ ನಡೆಯುವ ಸಭೆಗಳು ಕಾಟಾಚಾರಕ್ಕೆ ನಡೆಸುತ್ತಿದ್ದಾರೆ .ಸಭೆಗಳಲ್ಲಿ ಈಗಾಗಲೇ ಹಲವು ಬಾರಿ ರುದ್ರ ಭೂಮಿಗಳು ಮಂಜೂರು ಮಾಡುವಂತೆ ಮನವಿ ಮಾಡಿದರುಕೂಡ. ರುದ್ರ ಭೂಮಿ ಮಂಜೂರು ಮಾಡದೆ ದಲಿತರ ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ.ಎಚ್ಚರವಹಿಸಿ ತಾಲ್ಲೂಕಿನಲ್ಲಿ ಇರುವ ಎಲ್ಲಾ ಗ್ರಾಮಗಳಿಗೆ ದಲಿತರ ಸ್ಮಶಾನ ಗಳಿಗೆ ಜಮೀನು ಮಂಜೂರು ಮಾಡುವಂತೆ.ತಾಲೂಕಿನ ದಲಿತ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಹನುಮಂತರಾಜು , ಆಕ್ರೋಶ
ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆಯ ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಟಿ .ಜಿ. ಸುರೇಶ್ ಆಚಾರ್. ಗ್ರಾಮದ ದಲಿತರ ರುದ್ರ ಭೂಮಿ ಸ್ಥಳ ಗುರುತಿಸಿ
ಮೃತ ಹನುಮಕ್ಕನ ಅಂತ್ಯ ಸಂಸ್ಕಾರಕ್ಕೆಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಗ್ರಾಮಸ್ಥರು ಇನ್ನು ಮುಂದೆ ಇದೆ ಸ್ಥಳದಲ್ಲಿ ಅ
ಅಂತ್ಯಸಂಸ್ಕಾರ ಮಾಡುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾರಾಜ ಆದಿ ಜಾಂಬವ ಮಹಾಸಭಾ ರವಿಕುಮಾರ್ ಗ್ರಾಮದ ಮುಖಂಡರುಗಳು ಸ್ಥಳದಲ್ಲಿ ಹಾಜರಿದ್ದು ಹನುಮಕ್ಕನ ಕುಟುಂಬಕ್ಕೆ ಬೆಂಬಲ ಸೂಚಿಸಿದರು.

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.