ಸಂಕಷ್ಟದಲ್ಲಿ ಅನ್ನದಾತ
ಕುಸಿದ ಶೇಂಗಾ ಬೆಲೆ, ಮಲಗಿರುವ ಸರಕಾರ….!
ಪಾವಗಡ :- ರಾಜ್ಯದಲ್ಲಿ ಈ ಬಾರಿ ಸಕಾಲದಲ್ಲಿ ಮಳೆಯಾಗಿದ್ದರಿಂದ ಮತ್ತು ಕೊರೋನಾ ಸೋಂಕಿನ ಕಾರಣದಿಂದ ನಗರ ಜೀವನ ಬಿಟ್ಟು ಸ್ವಂತ ಊರುಗಳಿಗೆ ಹೋದ ಬಹಳಷ್ಟು ಮಂದಿ ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯಲು ಮುಂದಾದ ಕಾರಣ ಎಲ್ಲೆಡೆ ಬೆಳೆಗಳು ಪ್ರಮಾಣ ಹೆಚ್ಚಾಗಿದೆ.
ರಾಜ್ಯದಲ್ಲಿ ಹಲವೆಡೆ ಶೇಂಗಾ ಬೆಳೆ ಕಟಾವು ಹಾಗುತ್ತಿದೆ ಆದರೆ ಬೆಲೆಗಳು ಮಾತ್ರ ಕುಸಿದಿದೆ,ಕೇಂದ್ರ ಸರ್ಕಾರ 2020-21 ರ ಸಾಲಿನ ಶೇಂಗಾ ಬೆಳೆಯ ಮುಂಗಾರು ಕಟಾವಿನ ಬೆಂಬಲ ಬೆಲೆ ಘೋಷಿಸಿದ್ದರು ಖರೀದಿ ಕೇಂದ್ರಗಳನ್ನು ತೆರೆಯುವ ಗೋಜಿಗೆ ಹೋಗಿಲ್ಲ ಯಡಿಯೂರಪ್ಪ ನೇತೃತ್ವದ ಸರ್ಕಾರ. ರೈತರ ಪರ ಎಂದು ಪುಂಕಾನು-ಪುಂಕ ಭಾಷಣ ಮಾಡುತ್ತಾರೆ. ಇನ್ನು ನಮ್ಮ ಜನ ಪ್ರತಿನಿಧಿಗಳಿಗೆ ರೈತರ ನೋವು ಕಾಣಿಸುತ್ತಿಲ್ಲ.
ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ರಾಜ್ಯದಲ್ಲಿ ಹಾಗೂ ತುಮಕೂರು ಜಿಲ್ಲೆಯ ಪಾವಗಡ, ಶಿರಾ, ಚಿತ್ರದುರ್ಗದ ಚಳ್ಳಕೆರೆ ಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು ಈ ಬಾರಿ ವಾಡಿಕೆಯಂತೆ ಮಳೆಯಾದ ಕಾರಣ ಬೆಳೆಗಳು ರೈತರ ಕೈ ಗೆ ಬಂದಿದ್ದು ಕಟಾವು ಆರಂಭವಾಗಿದೆ.ಫ
ಸಲು ಹೆಚ್ಚಾಗಿ ಮಾರುಕಟ್ಟೆಗೆ ಬರಲಾರಂಭಿಸಿದೆ ಆದರೆ ಶೇಂಗಾ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.
ಮುಂಗಾರು ಬಿತ್ತನೆ ಸಂದರ್ಭದಲ್ಲಿ ಸರಕಾರದ ಕೃಷಿ ಇಲಾಖೆಯಿಂದ ಬಿತ್ತನೆ ನೀಡಿದ ಶೇಂಗಾ ಕ್ವಿಂಟಾಲ್ ಗೆ 7500 ರೂಪಾಯಿ ಯಂತೆ ವಿತರಣೆ ಮಾಡಿದ್ದರು. ಇನ್ನು ಖಾಸಗಿ ಶೇಂಗಾ ಮಿಲ್ ನವರು ಶೇಂಗಾ ಬೀಜವನ್ನು 6.500 ರೂ ರಿಂದ 10,000 ರೂ ಗರಿಷ್ಟ ವರೆಗೆ ರೈತರಿಗೆ ಮಾರಿದ್ದಾರೆ. ದುಬಾರಿ ಧರ ಕೊಟ್ಟು ಬಿತ್ತನೆ ಮಾಡಿದ್ದಾರೆ ರೈತರು.
ರೈತರು ಬೆಳೆದ ಶೇಂಗಾ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 2,259 ರಿಂದ 4,500 ಗರಿಷ್ಟ ಬೆಲೆ ಒಂದೆರಡು ಲಾಟ್ ಗಳಿಗೆ ನೀಡುತ್ತಿದ್ದರೆ. ಉಳಿದದೆಲ್ಲಾ 3,000 ರಿಂದ 4೦೦೦ ರೂಗೆ ಮಾರಾಟವಾದರೆ ಹೆಚ್ಚು ಎಂಬಂತಾಗಿದೆ. ಸತತ ಮಳೆ ಜೊತೆಗೆ ಕಳೆ, ರೋಗದ ಕಾಟದಿಂದ ಅಲ್ಪಸ್ವಲ್ಪ ಬೆಳೆದ ಶೇಂಗಾಕ್ಕೆ ರೈತರಿಗೆ ಸರಿಯಾದ ಬೆಲೆಯಿಲ್ಲದಂತಾಗಿದೆ.
ಕೇಂದ್ರಸರ್ಕಾರ ಶೇಂಗಾ ಕ್ಕೆ ಎಂಎಸ್ ಪಿ ( ಬೆಂಬಲ ಬೆಲೆ) 5275 ಧರ ನಿಗದಿಪಡಿಸಿದೆ ಆದರೆ ಈ ದರ ನೀಡಿ ಕೊಳ್ಳುವವರು ಯಾರು..? ರೈತರ ನೆರವಿಗೆ ಬಂದು ಖರೀದಿ ಕೇಂದ್ರ ತೆರೆಯಬೇಕಾದ ಸರ್ಕಾರ ಎಲ್ಲಿದೆ…?
ವರ್ತಕರ ಪಾಲಾಗಲಿದೆ ಯಾ ಬೆಂಬಲ ಬೆಲೆ…?
ವರ್ತಕರ ಪಾಲಗುತ್ತಿರುವ ಬೆಂಬಲ ಬೆಲೆ, ರಾಜ್ಯಸರ್ಕಾರ ಬೆಂಬಲ ಬೆಲೆ ನೀಡಿ ಶೇಂಗಾ ಖರೀದಿ ಮಾಡದ ಕಾರಣ ರೈತರು ವರ್ತಕರಿಗೆ ಕಡಿಮೆ ದರಗಳಿಗೆ ಮಾರುತ್ತಿದ್ದಾರೆ, ವರ್ತಕರು ಶೇಕಡ 50 ಕ್ಕೂ ಹೆಚ್ಚು ಬೆಳೆಗಳನ್ನು ಖರೀದಿಸಿ ದಾಸ್ತಾನು ಮಾಡಿಟ್ಟುಕೊಂಡು. ಸರಕಾರಕ್ಕೆ ಹೆಚ್ಚಿನ ಧರಕ್ಕೆ ಮಾರಟ ಮಾಡವಂತಾಗಿದೆ. ಕೇಂದ್ರಸರ್ಕಾರದ ಬೆಂಬಲ ಬೆಲೆ ವರ್ತರ ಪಾಲಾಗುತ್ತಿದೆ ಒರತು ರೈತರಿಗೆ ಇದರಿಂದ ಪ್ರಯೋಜನವಾಗುತ್ತಿಲ್ಲ.
ರೈತರ ಕೃಷಿ ವೆಚ್ಚ ಮತ್ತು ದೈನಂದಿನ ಖರ್ಚಿನಿಂದಾಗಿ ಬೆಳೆ ಬಂದ ತಕ್ಷಣ ರೈತರು ಬೆಳೆದ ಬೆಳೆಗಳನ್ನು ತಕ್ಷಣ ಮಾರಟ ಮಾಡುವ ಅನಿವಾರ್ಯತೆ ಇರುತ್ತೆ, ಜೊತೆಗೆ ಧರ ಬಿದ್ದು ಹೋಗುತ್ತೆ ಎಂಬ ಭೀತಿ ಹಿನ್ನೆಲೆಯಲ್ಲಿ ಮಾರಾಟಕ್ಕೆ ಮುಂದಾಗುತ್ತಾರೆ. ಕಡಿಮೆ ಧರ ಗಳಿಗೆ ವರ್ತಕರ ಗೋಡನ್ ಸೇರುತ್ತಿವೆ ರೈತರ ಬೆಳೆಗಳು.
ಬೆಲೆ ಯಲ್ಲೂ ಮೋಸ, ತೂಕದಲ್ಲೂ ವಂಚನೆ,
ಮತ್ತೊಂದು ಸಮಸ್ಯೆ ತೂಕದ್ದು, ರೈತರ ಬೆಳೆದ ಬೆಳೆಗಳ ತೂಕದ್ದಲ್ಲೂ ಬಹುದೊಡ್ಡ ಮೋಸವಾಗುತ್ತಿದೆ, ಖಾಸಗಿ ವರ್ತಕರು ರೈತರು ಸ್ಥಳಗಳಿಗೆ ತೆರಳಿ ಶೇಂಗಾ ಖರೀದಿಸುವ ಪರಿಪಾಠ ಹಲವೆಡೆ ಇದೆ, ಇಲ್ಲಿ ಅವರ ಮೋಸದ ಪರಿ ತೂಕದ ಮೂಲಕ ನಡೆಯುತ್ತೆ. ಎಪಿಎಂಸಿ ಮಾರುಕಟ್ಟೆ ಯಲ್ಲಿ ಒಂದು ಕ್ವಿಂಟಾಲ್ ಗೆ 2 ಕೆಜಿ ತೆಗೆದರೆ, ರೈತರ ಸ್ಥಳಗಳಿಗೆ ಬೆಳೆ ಖರೀದಿಸಲು ತೆರಳುವ ವರ್ತಕರು ಕ್ವಿಂಟಾಲ್ ಗೆ 5 ರಿಂದ 10 ಕೆಜಿ ಲೆಸ್ ಮಾಡುತ್ತಾರೆ.ಇದರ ವಿರುಧ್ಧ ದ ರೈತರ ಧ್ವನಿಗೆ ಬೆಲೆಯೇ ಇಲ್ಲ.
ಪ್ರತಿ ತಾಲ್ಲೂಕಿನಲ್ಲೂ ಖಾಸಗಿ ವರ್ತಕರು ಸಂಘ ಗಳನ್ನು ಮಾಡಿಕೊಂಡು ಬೆಲೆ/ತೂಕ ದ ವಿಷಯಗಳನ್ನು ಈ ಸಂಘ ದಲ್ಲಿ ನಿರ್ಧರಿಸುತ್ತಾರೆ.ಇವರ ಮೊಸದಾಟ ವಿರೂಧಿಸುವ ರೈತರ ಬೆಳೆಗಳನ್ನು ಯಾವ ವರ್ತಕರು ಖರೀದಿಸುವುದಿಲ್ಲ, ಅಷ್ಟರ ಮಟ್ಟಿಗೆ ಇದೆ ಅವರ ಹೊಗ್ಗಟ್ಟು. ರೈತರು ವರ್ತಕರ ಮೊಸದಾಟಕ್ಕೆ ಬಲಿಯಾಗುತ್ತಿದ್ದಾರೆ.
ಸರಕಾರದ ದಾಸ್ತಾನು ಕೇಂದ್ರ ಆರಂಭವಾದ ನಂತರ ರೈತರ ಪಾಹಣಿ ಪಡೆದು ಖರೀದಿ ಕೇಂದ್ರದ ಅಧಿಕಾರಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು, ರೈತರಿಂದ ಕಡಿಮೆ ದರ ಪಡೆದ ಬೆಲೆಗಳನ್ನು ಹೆಚ್ಚಿನ ದರ ಕ್ಕೆ ಮಾರಿ ಹಣ ಗಳಿಸುತ್ತಿದ್ದಾರೆ ವರ್ತಕರು.ಸಂಕಷ್ಟದಲ್ಲೇ ಅನ್ನದಾತನ ಬದಕು ಸಾಗುತ್ತಿದೆ….
ಪ್ರಸ್ತುತ ಒಂದೆಡೆ ಕೊರೋನಾ, ಮತ್ತೊಂದೆಡೆ ಬೆಳೆದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ,ಹೇಳಿಕೆಗಳಿಗೆ/ಪ್ರಚಾರಕ್ಕೆ ಸೀಮಿತ ವಾದ ಸರಕಾರ /ಜನಪ್ರತಿನಿಧಿಗಳ ನಡುವೆ ಹೈರಾಣಾಗಿದೆ ಅನ್ನದಾತನ ಬದುಕು….
ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿಯನ್ನು ಶುಕ್ರವಾರ ( 16-10-20) ಸಂಪರ್ಕಿಸಿ ಶಿರಾ ಮತ್ತು ಪಾವಗಡ ತಾಲ್ಲೂಕು ಶೇಂಗಾ ಬೆಳೆದ ರೈತರ ಸಂಕಷ್ಟದ ಬಗ್ಗೆ ಗಮನ ಸೆಳೆದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತನಾಡಿ ಖರೀದಿ ಕೇಂದ್ರ ತೆರೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.