*6.5 ಕೋಟಿ ವೆಚ್ಚದ ಕಾಮಗಾರಿ ಗೆ ಅಸ್ತು.
* ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ.
* ನೂತನ ವಿದ್ಯುತ್ ಚಿತಾಗಾರ
* ಕೋವಿಡ್ ನಿಂದ ಮೃತ ಪಟ್ಟವರಿಗೆ 10 ಸಾವಿರ ಧನ ಸಹಾಯ
* ಆಶ ಕಾರ್ಯಕರ್ತರಿಗೆ 10ಸಾವಿರ ರೂಗಳ ಆರ್ಥಿಕ ನೆರವು
* ಕಾಡ ಅಗ್ರಹಾರದಲ್ಲಿ ಸ್ಮಶಾನ ನಿರ್ಮಾಣ
ಆನೇಕಲ್ ತಾಲ್ಲೂಕು ಯಮರೆ ಗ್ರಾಮ ಪಂಚಾಯತಿ ಯ 2021- 22 ನೇ ಸಾಲಿನ ಮೊದಲನೆ ಗ್ರಾಮ ಸಭೆ ಇಂದು ಯಮರೆ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆಯಿತು.
ಮೊದಲ ಸುತ್ತಿನ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಯಮರೆ ಗ್ರಾಮ ಪಂಚಾಯತಿ ಅಧ್ಯಕ್ಷ ರಾದ ಪವಿತ್ರಾ ಜಯಪ್ರಕಾಶ್ ಅವರು ವಹಿಸಿದ್ದರು.
ಸಭೆಯಲ್ಲಿ ಕೃಷಿ,ತೋಟಗಾರಿಕೆ,ಆರೋಗ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸರ್ಕಾರದ ಯೋಜನೆಗಳನ್ನು ಗ್ರಾಮ ಸಭೆಗೆ ವಿವರಿಸಿದರು.
ಯಮರೆ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಮೃತಪಟ್ಟವರಿಗೆ 10 ಸಾವಿರ ಸಹಾಯ ಧನವನ್ನು ನೀಡಲಾಯಿತು ಮತ್ತು ಆಶಾ ಕಾರ್ಯಕರ್ತೆ ಯರನ್ನು ಗುರುತಿಸಿ ಅವರಿಗೂ ಹತ್ತು ಸಾವಿರ ಧನ ಸಹಾಯವನ್ನು ನೀಡಲಾಗುತ್ತಿದೆ ,ಪ್ರಸಕ್ತ ಸಾಲಿನಲ್ಲಿ ಸುಮಾರು ಆರುವರೆ ಕೋಟಿ ರೂಗಳ ಕಾಮಗಾರಿ ಗಳನ್ನು ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಯಮರೆ ಗ್ರಾಮಪಂಚಾಯತಿ ಅಧ್ಯಕ್ಷ ರಾದ ಪವಿತ್ರಾ ಜಯಪ್ರಕಾಶ್ ಮಾಧ್ಯಮ ಗಳಿಗೆ ತಿಳಿಸುದರು.
ಘನತ್ಯಾಜ್ಯ ವಿಲೇವಾರಿ ಘಟಕ, ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ನಿರ್ಧಾರ ಕೈಗೊಂಡಿದ್ದೇವೆ.ಪ್ರಾಥಮಿಕ ಆರೋಗ್ಯ ಘಟಕದ ಉಪಕೇಂದ್ರ ಆರಂಭಿಸಿದ್ದೇವೆ. ಪಂಚಾಯತಿ ವ್ಯಾಪ್ತಿಯ ಎಲ್ಲರಿಗೂ ಕೊರೊನಾ ಲಸಿಕೆ ಕೊಡಿಸುವ ಕಾರ್ಯ ಹಾಗು T C ಪಾಳ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭ ಮಾಡಿದ್ದೇವೆ ಎಂದರು.
ಜಯಪ್ರಕಾಶ್ ಅವರು ಮಾತನಾಡಿ ಸಾರ್ವಜನಿಕರ ಕುಂದು ಕೊರತೆ ಬಗೆಹರಿಸುವ ಕಾರ್ಯಕ್ರಮ ಇದಾಗಿದ್ದು. ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸದಸ್ಯರ ಕುಂದುಕೊರತೆಗಳನ್ನು ಪರಿಹರಿಸಿದ್ದೇವೆ ಎಂದರು.
ಜಿಲ್ಲಾಧಿಕಾರಿ ಗಳಿಗೆ ಸರ್ಕಾರದ ಎರಡು ಎಕರೆ ಜಾಗವನ್ನು ನೀಡಲು ಮನವಿಮಾಡಿದ್ದೇವೆ. ಒಂದು ಎಕರೆ ಜಾಗದಲ್ಲಿ ಕಸವಿಲೇವಾರಿ ಘಟ,ಮತ್ತೊಂದು ಎಕರೆ ಜಾಗದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ತೀರ್ಮಾನ ಮಾಡಲಾಗಿದೆ .ಜಿಲ್ಲಾಧಿಕಾರಿ ಗಳು ಸಕಾರಾತ್ಮಕ ವಾಗಿ ಸ್ಪಂದಿಸಿದ್ದು ಕಂದಾಯ ಇಲಾಖೆಗೆ ಜಾಗ ಗುರುತಿಸಲು ತಿಳಿಸಿದ್ದಾರೆ. ಕಾಡ ಅಗ್ರಹಾರದ ಗೋಮಾಳಕ್ಕೆ ಸೇರಿದ ಅರ್ಧ ಎಕರೆ ಜಾಗವನ್ನು ಗುರುತಿಸಿ ಸ್ಮಶಾನಕ್ಕಾಗಿ ಪಂಚಾಯತಿ ಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿಸಿದರು..
ಯಮರೆ ಗ್ರಾಮ ಪಂಚಾಯತಿ ಯ 8 ಹಳ್ಳಿಗಳ 11 ವಾರ್ಡ್ ಗಳಲ್ಲಿ ರಸ್ತೆ, ಕುಡಿಯುವನೀರು,ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು6.5 ಕೋಟಿ ವೆಚ್ಚದಲ್ಲಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗೆ ಸೇರಿದ ಅಧಿಕಾರಿಗಳು, 30 ಮಂದಿ ಸದಸ್ಯರು,ಉಪಾಧ್ಯಕ್ಷೆ ಸುಲೋಚನ ರವಿಕುಮಾರ್, ಕಾರ್ಯದರ್ಶಿ ನಂಜಾರೆಡ್ಡಿ, ಪಿಡಿಓ ಮಹೇಶ್, ನಾರಾಯಣ ಸ್ವಾಮಿ ಹಾಗು ಪಂಚಾಯತಿ ಸಿಬ್ಬಂದಿ ಹಾಜರಿದ್ದರು.