IMG 20220325 WA0029

ಪಾವಗಡ:ಕೃಷ್ಣಮೃಗ ಮಾಂಸ ವಶ ಆರೋಪಿಗಾಗಿ ಬಲೆ…!

DISTRICT NEWS ತುಮಕೂರು

ಕೃಷ್ಣಮೃಗ ಮಾಂಸ ವಶ ಆರೋಪಿಗಾಗಿ ಬಲೆ..       

ಪಾವಗಡ.. ತಾಲೂಕಿನ ಕಡಮಲಕುಂಟೆ ಗ್ರಾಮದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ ಘಟನೆ ನಡೆದಿದೆ.          ಆರೋಪಿಯು ಕೃಷ್ಣಮೃಗ ವನ್ನು ಮಾಂಸ ಮಾರಾಟದ ಉದ್ಯೋಗಕ್ಕಾಗಿ ಕೊಂದಿರಬಹುದೆಂಬ ಶಂಕೆ ಇದ್ದು, ಕಡಮಲಕುಂಟೆ ಗ್ರಾಮದ ಜಮೀನಿನ ಗುಡಿಸಲಿನಲ್ಲಿ 10 ಕೆ.ಜಿ ಕೃಷ್ಣಮೃಗದ ಮಾಂಸ , ಕೃಷ್ಣಮೃಗದ ತಲೆ, ಕಾಲುಗಳು ಮತ್ತು ಚರ್ಮವನ್ನು , ಹಾಗೂ ಈ ಕೃತ್ಯಕ್ಕೆ ಬಳಸಲಾಗಿದೆ ಎಂಬ ಉಪಕರಣಗಳಾದ ಕಠಾರಿ, ಚಾಕು, ಕರೆಂಟ್ ಕೊಡಲು ಬಳಸಿದ ತಂತಿಗಳು, ಮತ್ತು ಆರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಾಲೂಕು ವಲಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.                       ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು, ಆರೋಪಿಯನ್ನು ಶೀಘ್ರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ತಿಳಿಸಿದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಮಾರ್ಗದರ್ಶದಲ್ಲಿ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಉಪ ವಲಯ ಅರಣ್ಯಾಧಿಕಾರಿ ಬಸವರಾಜು, ಶರತ್ ಕುಮಾರ್, ಅರಣ್ಯ ರಕ್ಷಕ ಕೇಶವ, ಹಸನ್ ಬಾಷ, ಗಂಗಾಧರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.    

ವರದಿ: ಶ್ರೀನಿವಾಸುಲು ಎ