IMG 20220506 WA0004

ಪಾವಗಡ: ಕನ್ನಡಕ್ಕೆ ನಾವು ಮುಖ್ಯ ಅಲ್ಲ, ನಮಗೆ ಕನ್ನಡ ಮುಖ್ಯ….!

DISTRICT NEWS ತುಮಕೂರು

ಕನ್ನಡಕ್ಕೆ ನಾವು ಮುಖ್ಯ ಅಲ್ಲ, ನಮಗೆ ಕನ್ನಡ ಮುಖ್ಯ ಕನ್ನಡ ಪ್ರಾಧ್ಯಾಪಕ ಕೆ.ವಿ ಮುದ್ದವೀರಪ್ಪ

ಪಾವಗಡ………. ಪಟ್ಟಣದ ಗುರುಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜ್ಯೋತಿ ಬೆಳಗಿಸಿ ಕನ್ನಡ ಪ್ರಾಧ್ಯಾಪಕ ಕೆ. ವಿ ಮುದ್ದರಪ್ಪ ಮಾತನಾಡುತ್ತಾ, ಕನ್ನಡ ಮನಸ್ಸುಗಳ ಬೇಸಗೆಯ ಕೊಂಡಿ ಸಾಹಿತ್ಯ ಪರಿಷತ್. ಕನ್ನಡದ ಕೆಲಸಗಳು ಹಳ್ಳಿಹಳ್ಳಿಗೆ ಮುಟ್ಟುತ್ತಿವೆ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಯುವಜನತೆಗೆ ಕನ್ನಡದ ಕಾರ್ಯಕ್ರಮಗಳು ರೂಪುಗೊಳ್ಳುತ್ತಿದೆ ಎಂದು, ಪುಸ್ತಕ ಪ್ರಕಟಣೆ ಭಾಷಾ ಬೆಳವಣಿಗೆ ಪ್ರಶಸ್ತಿಗಳನ್ನು
ನೀಡುವುದು ,ಭಾಷೆಗಾಗಿ ಹೋರಾಟ ಸಂಸ್ಕೃತಿ , ಪ್ರೋತ್ಸಾಹ , ಬರಹಗಾರರಿಗೆ ಉತ್ತೇಜನ, ಕಾರ್ಯಕ್ರಮಗಳು ಗಡಿಭಾಗದಲ್ಲಿ ನಡೆಯಬೇಕೆಂದು. ತಾಲೂಕು ಕನ್ನಡ ಪರಿಷತ್ ಅಧ್ಯಕ್ಷರುಗಳು ನಿರಂತರ ಶ್ರಮವಹಿಸಿ ಕನ್ನಡ ಕಟ್ಟುವ ಕಾರ್ಯವನ್ನು ಮಾಡುತ್ತಿದ್ದಾರೆ, ಎಂದರು. ನಂತರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಟ್ಟ ನರಸಿಂಹಮೂರ್ತಿ ಮಾತನಾಡುತ್ತಾ, 1915 ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ ಇಂದಿಗೂ ಹೆಚ್ಚಿನ ಉತ್ಸಾಹದಿಂದ ಕನ್ನಡ ಕಾರ್ಯಕ್ರಮಗಳನ್ನು ಮಾಡುತ್ತಿದೆಯೆಂದು, ಮುಖ್ಯವಾಗಿ ಗಡಿನಾಡು ಪ್ರಾಂತ್ಯದಲ್ಲಿ ಕನ್ನಡ ಭಾಷೆಯ ಜೊತೆಗೆ ಸಾಹಿತ್ಯಾಭಿರುಚಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು, ಗಡಿನಾಡಿನಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಮಾಡುವಲ್ಲಿ ಕನ್ನಡ ಸಂಘಗಳ ಜೊತೆ ಕನ್ನಡ ಸಾಹಿತ್ಯ ಪರಿಷತ್ ಕೈಜೋಡಿಸಿ ಉತ್ತಮ ಕನ್ನಡ ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಇ.ವಿ ಶ್ರೀಧರ್, ಗೌರವ ಕಾರ್ಯದರ್ಶಿ ಕೆ. ರಂಗಪ್ಪ, ಗೌರವ ಕೋಶಾಧ್ಯಕ್ಷ ಕೆಎಂ ಪ್ರಭಾಕರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ, ಅಂಜುಬ ರಾಮನಾಥ್, ತುಮಕೂರು ಕನ್ನಡ ಪ್ರಾಧ್ಯಾಪಕ ಕೆ.ವಿ ಮುದ್ದ ವೀರಪ್ಪ ಉಪಸ್ಥಿತರಿದ್ದರು.

ವರದಿ; ಶ್ರೀನಿವಾಸಲು ಎ