IMG 20211002 WA0028

ಪಾವಗಡ: ಗಾಂಧಿಜಯಂತಿ ಆಚರಣೆ…!

DISTRICT NEWS ತುಮಕೂರು

ಪಾವಗಡ ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳಲ್ಲಿ  ಇಂದು ಗಾಂಧಿ  ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಬಹಳ ಸರಳವಾದ ರೀತಿಯಲ್ಲಿ ಆಚರಿಸಲಾಯಿತು.

ವಿ ಎಸ್ ಪಬ್ಲಿಕ್ ಶಾಲೆ ಯಲ್ಲಿ ಗಾಂಧಿ ಜಯಂತಿ 

ವಿ ಎಸ್ ಪಬ್ಲಿಕ್ ಶಾಲೆ ಪಾವಗಡ ಟೌನ್ ಈ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಸರಳವಾದ ರೀತಿಯಲ್ಲಿ ಆಚರಿಸಲಾಯಿತು  ಕಾರ್ಯಕ್ರಮದಲ್ಲಿ  ಮುಖ್ಯ ಶಿಕ್ಷಕರಾದ ಶ್ರೀನಿವಾಸಲು ಎ ಹಾಗೂ ಇತರೆ ಸಿಬ್ಬಂದಿ ವರ್ಗದವರು ಹಾಜರಿದ್ದರು ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು ಮಾತನಾಡುತ್ತಾ ಗಾಂಧೀಜಿ ಯವರು ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ ಮಹಾತ್ಮ ಗಾಂಧಿಯವರ ಬಗ್ಗೆ ಮಾತನಾಡುತ್ತಾ ಪ್ರಪಂಚ ಕಂಡಂತಹ ಅತ್ಯುತ್ತಮ ಶ್ರೇಷ್ಠ ವ್ಯಕ್ತಿ ಮಹಾತ್ಮಾ ಗಾಂಧೀಜಿ ಅವರ ಗುಣ ಆದರ್ಶಗಳನ್ನು  ಪ್ರತಿಯೊಬ್ಬ ಭಾರತೀಯ ಪ್ರಜೆಯ ಸಹ ಅನುಸರಿಸಬೇಕೆಂದು ತಿಳಿಸಿದರು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯ  ಬಗ್ಗೆ ಮಾತನಾಡುತ್ತಾ  ದೇಶ ಕಂಡಂತಹ ಪ್ರಮುಖ ಪ್ರಧಾನಮಂತ್ರಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು  ಸಹ ಒಬ್ಬರೆಂದು ಹಾಗೂ ರೈತರ ಬಗೆಗಿನ ಹೆಚ್ಚಿನ ಕಾಳಜಿಯನ್ನು ಹೊಂದಿರತಕ್ಕಂಥ ಲಾಲ್ ಬಹಾದುರ್ ಶಾಸ್ತ್ರಿಯವರು ಸೈನಿಕನು ಯಾವ ರೀತಿ ದೇಶ ಕಾಯುವುದರಲ್ಲಿ  ಪ್ರಮುಖ ಪಾತ್ರವಹಿಸುತ್ತಾನೆ ಅದೇ ರೀತಿಯಲ್ಲಿ ದೇಶದ ಅಭಿವೃದ್ಧಿಗೆ   ರೈತರು   ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಜೈ ಜವಾನ್ ಜೈ ಕಿಸಾನ್ ಎಂಬ ಧ್ಯೇಯವಾಕ್ಯದೊಂದಿಗೆ ಬಹಳ ಅದ್ಭುತವಾದ ರೀತಿಯಲ್ಲಿ ಸೈನಿಕ ಹಾಗೂ ರೈತರ ಕೆಲಸವನ್ನು ಕೊಂಡಾಡಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು IMG 20211002 WA0029

ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೊಡುಗೇನಹಳ್ಳಿ 

ಗಾಂಧಿ ಜಯಂತಿ  ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿಯನ್ನು  ಈ ಶಾಲೆಯಲ್ಲಿ ತುಂಬಾ ಸರಳವಾಗಿ ಆಚರಿಸಲಾಯಿತು .ಈ ಸಂದರ್ಭದಲ್ಲಿ  ಪ್ರಾಂಶುಪಾಲರಾದ  ಶ್ರೀಯುತ ತಿಪ್ಪೇಸ್ವಾಮಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು .ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಯುತ  ತಿಪ್ಪೇಸ್ವಾಮಿ ಸರ್  ಅವರು ಮಕ್ಕಳಿಗೆ  ಸ್ವಚ್ಚತಾ ಕಾರ್ಯಕ್ರಮವನ್ನು ಯಾಕೆ ಮಾಡ್ಬೇಕು ಗಾಂಧೀಜಿಯವರ ಕನಸುಗಳು ಏನಾಗಿತ್ತು ನಾವು ಆದರ್ಶವಂತರಾಗಿ ಯಾವ ರೀತಿ ಜೀವನವನ್ನ ನಡೆಸಬೇಕು .ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಹೇಳುತ್ತಾ ದೇಶಕ್ಕೆ ಸೈನಿಕನು ಎಷ್ಟು ಮುಖ್ಯವೋ ದೇಶಕ್ಕೆ ರೈತನು ಸಹ ಅಷ್ಟೇ ಮುಖ್ಯ ಎಂಬುದನ್ನು  ಮಕ್ಕಳಲ್ಲಿ ಅರಿವನ್ನು ಮೂಡಿಸಿದರು

IMG 20211002 WA0017

ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಪಳವಳ್ಳಿ ಯಲ್ಲಿ ಗಾಂಧಿ ಜಯಂತಿ ಆಚರಣೆ

ಪಾವಗಡ ತಾಲ್ಲೂಕು ಈ ಶಾಲೆಯಲ್ಲಿ ಅಕ್ಟೋಬರ್ ಎರಡ ರಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹಾದುರ್ ಶಾಸ್ತ್ರಿ ಜಯಂತಿಯನ್ನು ಬಹಳ ಸರಳ ರೀತಿಯಲ್ಲಿ ಮಕ್ಕಳೊಂದಿಗೆ ಆಚರಿಸಲಾಯಿತು ಈ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಲತಾ ಹಾಗೂ ವಿಜ್ಞಾನ ಶಿಕ್ಷಕಿ  ಶ್ವೇತಾ ಹಾಗೂ ಇತರೆ ಸಿಬ್ಬಂದಿ ವರ್ಗದವರು ಹಾಜರಿದ್ದರು .ಈ ಕಾರ್ಯಕ್ರಮವನ್ನು ಕುರಿತು ವಿಜ್ಞಾನ ಶಿಕ್ಷಕಿ ಶ್ವೇತಾ ರವರು ಮಾತನಾಡುತ್ತಾ  ಮಕ್ಕಳಲ್ಲಿ ಗಾಂಧೀಜಿಯವರ ಪರಿಕಲ್ಪನೆಗಳನ್ನು ಹಾಗೂ ಆದರ್ಶ ಗುಣಗಳನ್ನು  ಯಾವ ರೀತಿ ನಾವು ಬೆಳೆಸಿಕೊಳ್ಳಬೇಕೆಂದು ಸವಿವರವಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು ಹಾಗೂ ಲಾಲ್ ಬಹಾದುರ್ ಶಾಸ್ತ್ರಿ ಯ ಬಗ್ಗೆ ಮಾತನಾಡುತ್ತಾ ಲಾಲ್ ಬಹದ್ದೂರ್  ಶಾಸ್ತ್ರಿಯವರು ಮಾಜಿ ಪ್ರಧಾನಮಂತ್ರಿ ಗಳಾಗಿದ್ದು  ದೇಶದ ಉನ್ನತಿಗಾಗಿ ಶ್ರಮಿಸಿದ ವ್ಯಕ್ತಿಗಳಲ್ಲಿ ಅವ್ರು ಒಬ್ಬರಾಗಿದ್ದರೆಂದು ಹಾಗೂ ರೈತರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿದ ಪ್ರಧಾನಿಯಾಗಿದ್ದು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಸಹ ಮಾಡಿದ ವ್ಯಕ್ತಿಯಾಗಿದ್ದರು ಎಂಬುದನ್ನ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ  ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು

ವರದಿ: ಶ್ರೀನಿವಾಸಲು