*ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಸ್ವಯಂ ಉದ್ಯೋಗ ಮಾಹಿತಿ ಮತ್ತು ಪ್ರೇರಣಾ ಕಾರ್ಯಗಾ ಸಮಾರಂಭ*
ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಲೈಫ್ ಟಚ್ ಫೌಂಡೇಶನ್ NGO ಸಂಸ್ಥೆಧಾರವಾಡ ಮತ್ತು ಕಲಾ ಕೃತಿ ತಿಪಟೂರು ಇವರ ಸಹಯೋಗದಲ್ಲಿ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ಸ್ವಯಂ ಉದ್ಯೋಗ ಮಾಹಿತಿ ಮತ್ತು ಪ್ರೇರಣ ಕಾರ್ಯಗಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಹಕಾರ ಸಚಿವ ಕೆ .ಎನ್. ರಾಜಣ್ಣನವರು ನಾನು ಮೊದಲಿಗೆ ಪತ್ರಿಕಾ ಭವನಕ್ಕೆ ಬಂದಾಗ ಸಂವಾದ ಕಾರ್ಯಕ್ರಮ ಎಂದುಕೊಂಡು ನಾನು ಬಂದೆ ನನ್ನನ್ನು ಪ್ರಶ್ನೆ ಕೇಳಬಹುದು ಆದರೆ ಇಲ್ಲಿ ನೋಡಿದರೆ ಪತ್ರಕರ್ತರಿಗೆ ಒಂದು ವಿಶೇಷವಾದ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಸಂತೋಷಕರ ಎಂದರು. ರಾಜ್ಯದಲ್ಲಿ ಹಲವಾರು ಪತ್ರಕರ್ತ ಸಂಘಗಳು ನೋಂದಣಿ ಆಗುತ್ತಿರುವುದರಿಂದ ನಮಗೆ ತುಂಬಾ ಬೇಸರ ತಂದಿದೆ ಎಂದು ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ್ ತಗಡೂರು ತಿಳಿಸಿದ್ದಾರೆ. ಅದರಂತೆ ನಾನು ಸಹಕಾರ ಸಚಿವರಾಗಿರುವುದರಿಂದ ಇಲಾಖೆಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.
ಇನ್ನು ಪತ್ರಕರ್ತರನ್ನು ಯಶಸ್ವಿನಿ ಯೋಜನೆ ಅಡಿಯಲ್ಲಿ ತಂದು ಅವರಿಗೂ ಸಹ ಯಶಸ್ವಿನಿ ಕಾರ್ಡ್ ವಿತರಿಸಬೇಕು ಎಂದು ಬೇಡಿಕೆಯನ್ನು ಸಹ ಇಟ್ಟಿದ್ದೀರಿ ಅದನ್ನು ಸಹ ಮುಂದಿನ ದಿನಗಳಲ್ಲಿ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು. ಈಗಾಗಲೇ ಪತ್ರಕರ್ತರ ನಿಧಿಯನ್ನು ಸ್ಥಾಪನೆ ಮಾಡಿದ್ದೀರಾ ನಾನು ವೈಯಕ್ತಿಕವಾಗಿ ಆ ಪತ್ರಕರ್ತರ ನಿಧಿಗೆ 1 ಲಕ್ಷ ರೂಪಾಯಿಗಳನ್ನು ನೀಡುತ್ತೇನೆ ಎಂದು ತಿಳಿಸಿದರು. ನಾನು ಯಾವುದೇ ಪತ್ರಿಕಾಗೋಷ್ಠಿ ಕರೆಬೇಕಾದರೆ ಬೇರೆ ಎಲ್ಲಿಯೂ ಕೂಡ ನಾನು ಪತ್ರಿಕಾಗೋಷ್ಠಿ ಕರೆಯದೆ ಜಿಲ್ಲಾ ಕಾರ್ಯನಿರ್ವ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಿಕೆಗೋಷ್ಠಿಯನ್ನು ಕರೆಯುತ್ತೇನೆಎಂದು ಹೇಳಿದರು. ಪತ್ರಕರ್ತರು ತಮ್ಮ ಕಚೇರಿ ಇನ್ನೆತರೆ ಚಟುವಟಿಕೆಗಳಿಗೂ ಕೂಡ ಸಾಲ ಬೇಕಾದಲ್ಲಿ ನಾನು ಡಿ.ಸಿ.ಸಿ .ಬ್ಯಾಂಕಿನಿಂದ ಸಾಲ ಮಂಜೂರು ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಕಾರ್ಯಗಾರವನ್ನು ಕುರಿತು ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ ದಿನ ಬೆಳಗಾದರೆ ಹತ್ತು ಹಲವಾರು ಸಂಘಗಳು ನೋಂದಣಿಯಾಗುತ್ತಿರುವುದು ದುರಾದೃಷ್ಟಕರ ಸಂಗತಿ ಸಂಘದಲ್ಲಿ ನಮಗೆ ಸದಸ್ಯತ್ವ ಸ್ಥಾನ ಸಿಗಲಿಲ್ಲವೆಂದು ಬೇರೊಂದು ಸಂಘ ಹುಟ್ಟಿ ಹಾಕುತ್ತಿರುವುದು ಶೋಚನೀಯ ಸಂಗತಿ. ಇಡೀ ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸಂಘ ಯಾವುದಾದರೂ ಇದ್ದರೆ ಅದು ಕರ್ನಾಟಕ ಕಾರ್ಯ ನಿರತಪತ್ರಕರ್ತರ ಸಂಘ ಎಂದರು.
ಇನ್ನು ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ಪಾಸ್ ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು ಈ ದಿನ ಲೈಫ್ ಟಚ್ ಫೌಂಡೇಶನ್ NGO. ಸಂಸ್ಥೆ ಧಾರವಾಡ ಮತ್ತು ಕಲಾ ಕೃತಿ ತಿಪಟೂರು ಆಯೋಜನೆ ಮಾಡಿರುವ ಈ ಕಾರ್ಯಗಾರ ಪತ್ರಕರ್ತರಿಗೆ ಬಹಳ ಪ್ರಯೋಜನಕಾರಿ ಆಗಲಿಇದರಿಂದ ಹೆಚ್ಚಿನ ಉಪಯೋಗ ಪತ್ರಕರ್ತರಿಗೆ ಸಿಗಲಿ ಎಂದು ಆಶಿಸುತ್ತೇನೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಿ.ನಿ ಪುರುಷೋತ್ತಮ್ ರವರು ಮಾತನಾಡಿ ಪತ್ರಿಕಾ ಭವನದಲ್ಲಿ ಈಗಾಗಲೇ ಹತ್ತು ಹಲವಾರು ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ ಆದರೆ ಸಮಾರಂಭಗಳು ನಡೆಯುವಾಗ ಕರೆಂಟ್ ಹೋದರೆ
ಯು.ಪಿ.ಎಸ್ ವ್ಯವಸ್ಥೆ ಇಲ್ಲವೆಂದು ಮಹಾನಗರ ಪಾಲಿಕೆ ಅವರಿಗೆ ಸಾಕಷ್ಟು ಬಾರಿ ಮನವಿಯನ್ನು ಸಹ ಮಾಡಿದ್ದೇವೆ ಆದರೆ ಇನ್ನೂ ಕೂಡ ಅದು ನೆರವೇರಿಲ್ಲ ಕೂಡಲೇ ಅವರು ಯು.ಪಿ.ಎಸ್ ಅಳವಡಿಸಿಕೊಡಬೇಕೆಂದು ಸೂಚಿಸಿದರು. ಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆದಿರುವ ರೈತರು ಮರಣ ಹೊಂದಿದಲ್ಲಿ ಅವರ ಪಡೆದಿರುವ ಸಂಪೂರ್ಣ ಸಾಲವನ್ನು ತುಮಕೂರು ಡಿ.ಸಿ.ಸಿ ಬ್ಯಾಂಕಿನ ವತಿಯಿಂದ ಮನ್ನಾ ಮಾಡಲಾಗುತ್ತಿದೆ ಅದರಂತೆ ಈಯೋಜನೆ ರಾಜ್ಯದಾದ್ಯಂತ ವಿಸ್ತಾರವಾಗಬೇಕು ತಾವು ಸಹಕಾರ ಸಚಿವರು ಆಗಿರುವುದರಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಡಾಕ್ಟರ್ ಸುರೇಶ್ ಕಂಬಾರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವ ಯಾವ ಸಾಲ ಸೌಲಭ್ಯಗಳು ದೊರೆಯುತ್ತವೆ ಅವುಗಳನ್ನು ನಾವು ಯಾವ ರೀತಿ ಉಪಯೋಗಿಸಿಕೊಂಡು ಮುನ್ನಡೆ ಬೇಕು ಮತ್ತು ಯಾವುದೇ ರೀತಿಯಲ್ಲಿ ನಿಮಗೆ ಸಾಲ ಸೌಲಭ್ಯಗಳು ಬೇಕಾದಲ್ಲಿ ಅರ್ಜಿ ಸಲ್ಲಿಸಿ ನನಗೆ ತಿಳಿಸಿದಲ್ಲಿ ನಾನು ಸಂಬಂಧ ಪಟ್ಟವರ ಮಾತನಾಡಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಸಾಲ ಸೌಲಭ್ಯವನ್ನು ಮಂಜೂರಾತಿ ಮಾಡಿಸಿ ಕೊಡುತ್ತೇನೆ ಎಂದು ತಿಳಿಸಿದರು. ಈ ಕಲ್ಪತರು ಜಿಲ್ಲೆ ಕಲ್ಪತರು ನಾಡು ಆಗಬೇಕು ಈ ಜಿಲ್ಲೆಯಲ್ಲಿ ತೆಂಗು ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ತೆಂಗು ಬೆಳೆಯಿಂದ ತೆಂಗು ಪಾನೀಯ ತಯಾರು ಮಾಡಬೇಕು ಮತ್ತು ಇನ್ನು ಅನೇಕ ಪ್ರಯೋಜನಗಳು ಈ ಕಾರ್ಯಗಾರದಿಂದ ತಾವು ಪಡೆಯಬೇಕು ತಾವುಗಳು ಇದರ ಬಗ್ಗೆ ಮಾಹಿತಿ ಪಡೆಯಲು ತಾವುಗಳು ಯಾವುದೇ ಸಮಯದಲ್ಲಿ ತಮ್ಮ ನಂಬರ್ ಗೆ ಫೋನ್ ಮಾಡಿದರೆ ಅದರ ಬಗ್ಗೆ ತಿಳಿಸಿಕೊಡುತ್ತೇನೆ ಎಂದು ಸಭೆಯಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಚಿ.ನಿ ಪುರುಷೋತ್ತಮರವರ ವಹಿಸಿಕೊಂಡಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಚಿವರಾದ ಕೆ ಎನ್ ರಾಜಣ್ಣನವರು ನೆರವೇರಿಸಿ ಕೊಟ್ಟರು ಮುಖ್ಯ ಅತಿಥಿಗಳಾಗಿ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು. ಹಾಗೂ ಈ ಕಾರ್ಯಕ್ರಮದ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾದ ಡಾಕ್ಟರ್ ಸುರೇಶ್ ಕಂಬಾರ್. ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕರಾದ ಲಿಂಗರಾಜು. ಮಹಾನಗರ ಪಾಲಿಕೆಯ ಆಯುಕ್ತರಾದ ವಿವಿ ಅಶ್ವಿಜಾ. ಪ್ರಜಾ ಪ್ರಗತಿ ದಿನಪತ್ರಿಕೆ ಸಂಪಾದಕರಾದ ಎಸ್ ನಾಗಣ್ಣ. ಅಶೋಕಹಾಜರಿದ್ದರು. ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾದ ರಘುರಾಮ್. ಪ್ರಾರ್ಥನೆಯನ್ನು ಮಾಡಿದ ಜಯಣ್ಣ. ಕಾರ್ಯದರ್ಶಿಯಾದ ಸತೀಶ್ ಹಾರೋಗೆರೆ. ತಿಪಟೂರ್ ಕೃಷ್ಣ. ಉಪಾಧ್ಯಕ್ಷರಾದ ಚಿಕ್ಕಿ ರಪ್ಪ ಹಾಗೂ ಜಿಲ್ಲೆಯ ಎಲ್ಲಾ ಪತ್ರಕರ್ತರ ಹಾಗೂ ನಿರ್ದೇಶಕರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ ಲಕ್ಷ್ಮಿಪತಿ ದೊಡ್ಡ ಯ ಲ್ಕೂರು