30.ynh .01 scaled

ಪಾವಗಡ: ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ನೂತನ ಅಧ್ಯಕ್ಷರ ಆಯ್ಕೆ…!

DISTRICT NEWS ತುಮಕೂರು

ನೂತನ ಅಧ್ಯಕ್ಷರ ಆಯ್ಕೆ
ವೈ.ಎನ್.ಹೊಸಕೋಟೆ : ಗ್ರಾಮದ ಗ್ರಾಮಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಲೀಲಾವತಿ ತಿಪ್ಪೇಸ್ವಾಮಿಯವರು ಸೋಮವಾರ ಅವಿರೋದವಾಗಿ ಆಯ್ಕೆಯಾದರು.
ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು, ಜೆಡಿಎಸ್ ಬೆಂಬಲಿತ ಸದಸ್ಯೆ ಲೀಲಾವತಿ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ವರದರಾಜು ತಿಳಿಸಿದರು

.

ವೈ ಎನ್ ಹೊಸಕೋಟೆ ಗ್ರಾಮ ಪಂಚಯತಿ ಅಧ್ಯಕ್ಷ ಸ್ಥಾನ ಎಸ್ ಟಿ ಮಹಿಳೆಗೆ ಮೀಸಲಾಗಿತ್ತು, ಜೆಡಿ ಎಸ್ ಬೆಂಬಲಿತ ಮೂರು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲವು ಸಾದಿಸಿದ್ದರಿಂದ ಮೂವರಿಗೆ ಕೆಲ ತಿಂಗಳು ಅಧ್ಯಕ್ಷ ಹುದ್ದೆಯನ್ನು ಹೈಕಮಾಂಡ್ ನವರು ಹಂಚಿಕೆ‌ಮಾಡಿದ್ದರು. ಈ ನಿಯಮ ದಂತೆ ಕಳೆದ ಬಾರಿ ಅಧ್ಯಕ್ಷರಾಗಿದ್ದ ಹನುಮಕ್ಕ ನವರು ಇತ್ತೀಚೆಗೆ ರಾಜಿನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು ಇಂದು ಚುನಾವಣೆ ನಡೆದು ಲೀಲಾವತಿ ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಜಿ.ಬಿ.ಸತ್ಯನಾರಾಯಣ, ಗ್ರಾಮಪಂಚಾಯಿತಿ ಸದಸ್ಯರು ಮತ್ತು ಇತರರು ಇದ್ದರು.

ವರದಿ: ರಾಮಚಂದ್ರ