IMG 20260828 WA0050

ಪಾವಗಡ : ನಾಡಬಾಂಬ್ ಸ್ಫೋಟ ಪ್ರಕರಣ : 8 ಜನರ ವಿರುದ್ಧ ಕೇಸ್ ದಾಖಲು…..!

DISTRICT NEWS ತುಮಕೂರು
  • ನಾಡಬಾಂಬ್ ಸ್ಫೋಟ : 8 ಜನರ ವಿರುದ್ಧ ಕೇಸ್ ದಾಖಲು…..!
  • ಪಾವಗಡ ತಾಲ್ಲೂಕಿನ ಕನಿಕಲಬಂಡೆ ಬಳಿ ನಾಡಬಾಂಬ್ ಸ್ಫೋಟ
  • .ಗ್ರಾಮಸ್ಥರಲ್ಲಿ ಆತಂಕ.

ಪಾವಗಡ:: ತಾಲ್ಲೂಕಿನ ಕನಿಕಲಬಂಡೆ ಗ್ರಾಮದ ಬಳಿ ಗಿರಿಯಣ್ಣ ಎಂಬುವವರ ತೋಟದಲ್ಲಿ ಒಂದು ನಾಡಬಾಂಬ್ ಶುಕ್ರವಾರ ಸ್ಫೋಟಗೊಂಡಿದ್ದು, ಮತ್ತೊಂದು ಜೀವಂತ ಬಾಂಬ್ ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.

ಪಾವಗಡ ಪೋಲೀಸ್‌ ಠಾಣೆ ಯಲ್ಲಿ 8 ಜನರ ವಿರುದ್ಧ ಕೇಸ್‌ ದಾಖಲು ಮಾಡಲಾಗಿದೆ, 

ಬಿಎನ್‌ ಎಸ್‌ ಕಾಯ್ದೆ ಕಲಂ -49, 351(2) 352 , SC/ST Act , Amd Act -2025 ಮತ್ತು ಸ್ಫೋಟಕ ಪದಾರ್ಥಗಳ ಅಧಿನಿಯಮ 1908 ಈ  ಮೂರು ಕಾಯ್ದೆಗಳ ಅನ್ವಯ ವೆಂಕಟೇಶ್‌,ಸಾವಿತ್ರಮ್ಮ, ವಂಶಿ, ಹರೀಶ,ಸ್ವಾತಿ,ಸಾವಿತ್ರಮ್ಮ,  ಗೌಡತಿಮ್ಮನ ಹಳ್ಳಿ ಯ ಉಪ್ಪಾರ ಜನಾಂಗ ದ ಮಾರುತಿ ಮತ್ತು ಬಿ ಅಚ್ಚಮ್ಮನಹಳ್ಳಿ ಯ ರಾಮಂಜಿ  ಸೇರಿ  ಎಂಟು ಜನರ ಮೇಲೆಪೋಲೀಸರು  ಕೇಸ್‌ ದಾಖಲು ಮಾಡಿದ್ದಾರೆ. ಎಂಟು ಜನರಲ್ಲಿ  ನಾಲ್ಕು ಜನರನ್ನು ಬಂಧಿಸಲಾಗಿದೆ ಎಂಬ ಅಂಶ ಪೋಲೀಸರ ಮೂಲಗಳಿಂದ ತಿಳಿದು ಬಂದಿದೆ.

 

IMG 20260828 WA0048

ಪಾವಗಡ ತಾಲ್ಲೂಕು ಐತಿಹಾಸಿಕವಾಗಿ ನಕ್ಸಲ್ ಪೀಡಿತ ಪ್ರದೇಶವೆಂದು ಗುರುತಿಸಲ್ಪಟ್ಟಿರುವುದರಿಂದ, ಈ ಬಾಂಬ್ ಪತ್ತೆಯಾಗಿರುವುದು ಹಳೆಯ ನಕ್ಸಲ್ ಚಟುವಟಿಕೆಗಳ ನೆನಪನ್ನು ಮರುಕಳಿಸಿದೆ.

IMG 20260828 WA0051
ತಾಲೂಕಿನಲ್ಲಿ ಮತ್ತೆ ನಾಡ ಬಾಂಬ್ ಪತ್ತೆಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಗಿರಿಯಣ್ಣ ಎಂಬುವವರ ಬೋರ್‌ವೆಲ್ ನ ಸ್ಟಾರ್ಟರ್ ನ ಪೈಪ್ ನಲ್ಲಿ ಒಂದು ನಾಡಬಾಂಬ್ ಸ್ಫೋಟಗೊಂಡಿದ್ದು, ಆ ಸಮಯದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲಿಸಿದಾಗ ಮತ್ತೊಂದು ಜೀವಂತ ನಾಡಬಾಂಬ್ ಪತ್ತೆಯಾಗಿದೆ. ಅಧಿಕಾರಿಗಳು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿದ್ದರು.

ಘಟನೆ ಬಗ್ಗೆ ರೈತ ಗಿರಿಯಣ್ಣ ಪ್ರತಿಕ್ರಿಯೆ :

ನನ್ನ ಮಗನನ್ನು ಸಾಯಿಸುವ ಉದ್ದೇಶದಿಂದಾಗಿ ನಕ್ಸಲ್ ವೆಂಕಟೇಶ ಬೋರ್ ಆನ್ ಮಾಡಿದ ತಕ್ಷಣ ಬ್ಲಾಸ್ಟ್ ಆಗುವಂತೆ ನಾಡ ಬಾಂಬನ್ನು ಸ್ಟಾರ್ಟರನ ವೈರಿಗೆ ಅಳವಡಿಸಿದ್ದರು. ವೆಂಕಟೇಶನಿಂದ ತನ್ನ ಕುಟುಂಬಕ್ಕೆ ಹಾನಿ ಇದೆ ಎಂದು ಕೂಡಲೇ ತಕ್ಷಣ ಪೊಲೀಸರು ವೆಂಕಟೇಶ್‌ ಮತ್ತು ಆತನ ಸಹಚರರನ್ಬು  ಬಂಧಿಸಬೇಕೆಂದು ಆಗ್ರಹಿಸಿದ್ದರು

IMG 20260828 WA0049
ಕನಿಕಲಬಂಡೆ ನಾಡಬಾಂಬ್ ಸ್ಫೋಟ ಪ್ರಕರಣ ಯಾವ ಉದ್ದೇಶದಿಂದ ಕೃತ್ಯ ನಡೆದಿದ ಎಂಬ ಅಂಶ  ಪೊಲೀಸರ ತನಿಖೆಯಿಂದ ಅಷ್ಠೆ ತಿಳಿಯಬೇಕಾಗಿದೆ

ಘಟನಾ ಸ್ಥಳಕ್ಕೆ ಪೋಲೀಸ್‌ ಹಿರಿಯ ಅಧಿಕಾರಿಗಳು. ಡಿ ವೈ ಎಸ್. ಪಿ ಮಂಜುನಾಥ್, ಇನ್ಸ್ಪೆಕ್ಟರ್ ಸುರೇಶ್, ಬಾಂಬ್ ನಿಕ್ರಿಯ ದಳ ಸಿಬ್ಬಂದಿ ಮುಂತಾದವರು ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.