ಮಧುಗಿರಿ: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅಮೃತ ಜ್ಯೋತಿ ಯೋಜನೆ ಯನ್ನು ಸದುಪಯೋಗಪಡಿಸಿಕೊಳ್ಳಲು ಬೆಸ್ಕಾಂಶಾಖಾಧಿಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಗ್ರಾಹಕರಿಗೆ ಕರೆ ನೀಡಿದ್ದಾರೆ…
ಮಧುಗಿರಿ ತಾಲೂಕುಐ.ಡಿ. ಹಳ್ಳಿ ಹೋಬಳಿಯ ಐ ಡಿ ಹಳ್ಳಿ ಗ್ರಾಮದ ಬೆಸ್ಕಾಂ ಇಲಾಖೆಯ ಶಾಖಾಧಿಕಾರಿ ಆದ ಪಿ. ಎಸ್.ವೀರೇಂದ್ರ ಕುಮಾರ್ ಮಾತನಾಡಿ. ಐ.ಡಿ. ಹಳ್ಳಿ ಶಾಖ ವ್ಯಾಪ್ತಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಎಲ್ಲಾ ಗೃಹಬಳಕೆಯ ಗ್ರಾಹಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಸರ್ಕಾರದ ಅಮೃತ್ ಜ್ಯೋತಿ ಯೋಜನೆಯ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯುತ್ ಬಳಕೆಯ ಗ್ರಾಹಕರಿಗೆ ವಿದ್ಯುತ್ ಬಿಲ್ ಕಟ್ಟುವುದು ಒರೆಯಾಗದಂತೆ ತಿಂಗಳಿಗೆ 75 ಯೂನಿಟ್ ಉಚಿತ ಅಮೃತ್ ಜ್ಯೋತಿ ವಿದ್ಯುತ್ ಯೋಜನೆಪಡೆಯಲು ತಾವುಗಳು ಆಧಾರ್ ಕಾರ್ಡ್ .ರೇಷನ್ ಕಾರ್ಡ್ .ಜಾತಿ ಪ್ರಮಾಣ ಪತ್ರ .ಹಾಗೂ ನಿಮ್ಮ ಬ್ಯಾಂಕ್ ನ ಉಳಿತಾಯ ಖಾತೆಯ ಜೆರಾಕ್ಸ್.ಪ್ರತಿಗಳನ್ನು ನಿಮ್ಮ ವ್ಯಾಪ್ತಿಗೆ ಬರುವ ಪವರ್ ಲೈನ್ ಮ್ಯಾನ್ ಗಳಿಗಾಗಲಿ ವಿದ್ಯುತ್ ಮಾಪನ ಮಾಡುವ ಜಿವಿಪಿಗಳಿಗಾಗಲಿ ಅಥವಾ ಐಡಿ ಹಳ್ಳಿ ಶಾಖಾ ಕಛೇರಿಯ ಶಾಖಾಧಿಕಾರಿಗೆ ಹಾಗೂ ಮಧುಗಿರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರ ಕಚೇರಿಗೆ ತಲುಪಿಸಿ. ಈ ಒಂದು ಯೋಜನೆಯನ್ನು ಸದುಪಯೋಗಪಡೆಯಬೇಕೆಂದು ಐ.ಡಿ .ಹಳ್ಳಿ ಬೆಸ್ಕಾಂ ಶಾಖಾಧಿಕಾರಿ ವ್ಯಾಪ್ತಿಗೆ ಬರುವ ಎಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಗ್ರಾಹಕರಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ ಎಂದು ಐ.ಡಿ ಹಳ್ಳಿಶಾಖಾಧಿಕಾರಿ ಪಿ.ಎಸ್. ವೀರೇಂದ್ರ ಕುಮಾರ್ ಅವರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಲಕ್ಷ್ಮಿಪತಿ ದೊಡ್ಡ ಯಲ್ಕೂರು