ಚಿಕ್ಕದಾಳವಾಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶಂಕರ್ ಪ್ರಜ್ವಲ್…..
ಮಧುಗಿರಿ ತಾಲೂಕು ಐಡಿ ಹಳ್ಳಿ ಹೋಬಳಿ ಚಿಕ್ಕದಾಳವಾಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯಿಂದ ತೆರವುಕೊಂಡಿತ್ತು.
ಇಂದು ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಗೆ ಯಾರೂ ಕೂಡ ನಾಮಪತ್ರ ಸಲ್ಲಿಸದೆ ಒಬ್ಬರೇ ಅಭ್ಯರ್ಥಿಯಾದ ಶಂಕರ್ ಪ್ರಜ್ವಲ್ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವುದರಿಂದ ಶಂಕರ್ ಪ್ರಜ್ವಲ್ ಅವಿರೋಧವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ. ತಹಶೀಲ್ದಾರ್ ಟಿ. ಜಿ .ಸುರೇಶ ಆಚಾರ್ ಘೋಷಣೆ ಮಾಡಿದರು.
ನೂತನವಾಗಿ ಆಯ್ಕೆಯಾಗಿರುವ ಶಂಕರ್ ಪ್ರಜ್ವಲ್ ಅವರು ಮಾತನಾಡಿ ನಾನು ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕರಿಸಿದ ಗ್ರಾಮ ಪಂಚಾಯತಿ ಎಲ್ಲಾ ಸದಸ್ಯರುಗಳಿಗೂ ಹಾಗೂ ಮುಖಂಡರುಗಳು ನನ್ನ ಹಿತೈಷಿಗಳಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ .ಮುಂದೆ ನಾನು ಪಕ್ಷಭೇದ ಮರೆತು ಪ್ರಾಮಾಣಿಕವಾಗಿ ಸಾರ್ವಜನಿಕರ ಕೆಲಸಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚು ಶ್ರಮಿಸುತ್ತೇನೆ ಮತ್ತು ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಚರಂಡಿ ವ್ಯವಸ್ಥೆ ಇನ್ನಿತರೆ ಏನೇ ಸಮಸ್ಯೆಗಳಿದ್ದರೂ ಕೂಡ ನಾವು ಮತ್ತು ಪಂಚಾಯಿತಿಯ ಸದಸ್ಯರುಗಳು ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಆದಷ್ಟು ಬೇಗನೆ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಶ್ರಮಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೆಂಕಟೇಶ್ ರೆಡ್ಡಿ ಉಪಾಧ್ಯಕ್ಷರಾದ ಗಂಗಾದೇವಿ . ಪಂಚಾಯತಿ ಅಭಿವೃದ್ಧಿ ಅಧಿಕಾರಿನವೀನ್ ಕುಮಾರ್.ಗ್ರಾಮ ಪಂಚಾಯತಿ ಸದಸ್ಯರುಗಳಾದ. ನರಸಪ್ಪ. ದೊಡ್ಡಕ್ಕ. ನಾಗರತ್ನಮ್ಮ. ನರಸಮ್ಮ. ಆಶಾ ರಾಣಿ. ಚಿಕ್ಕ ನರಸಿಂಹಯ್ಯ. ಹನುಮಂತರಾಯಪ್ಪ ಮಂಜುನಾಥ್ ನರಸಿಂಹಯ್ಯ. ಹಾಗೂ ಮುಖಂಡರಗಳಾದ ಚಿನ್ನಪ್ಪಯ ನ್ಯಾಯಬೆಲೆ ಅಂಗಡಿ ಮಾಲೀಕರಾದ ನಾರಾಯಣಪ್ಪ. ಡಿಕೆ ನರಸಿಂಹಪ್ಪ. ನಾರಾಯಣಪ್ಪ. ಎಂ ಡಿ ಮೂರ್ತಿ. ಆನಂದ. ಲಕ್ಷ್ಮೀನಾರಾಯಣ. ರಂಗನಾಥ ಡಿ ಎನ್. ಲೋಕೇಶ್ ಇನ್ನು ಮುಂತಾದವರು ಹಾಜರಿದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.