ವೈ ಎನ್ ಹೊಸಕೋಟೆ ಹೋಬಳಿ 2 ನೇ ವಿಕೇಟ್ ಪತನ: ಸಿದ್ದಾಪುರ ಗ್ರಾಮ ಪಂಚಾಯತಿ ಪಿಡಿಒ ಅಮಾನತ್ತು…
ಪಾವಗಡ:- ವೈ ಎನ್ ಹೊಸಕೋಟೆ ಹೋಬಳಿ ಸಿದ್ದಾಪುರ ಗ್ರಾಮ ಪಂಚಾಯತಿ ಯ ಅಭಿವೃದ್ಧಿ ಅಧಿಕಾರಿ ( ಪಿಡಿಒ) ಶ್ರೀರಾಮಪ್ಪ ಅವರು ಕರ್ತವ್ಯಲೋಪವೆಸಗಿರುವುದು ಕಂಡುಬಂದ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಕೆ.ವಿಧ್ಯಾಕುಮಾರಿ ಅವರು ಅಮಾನತು ಮಾಡಿದ್ದಾರೆ. ಇದರೊಂದಿಗೆ ವೈ ಎನ್ ಹೊಸಕೋಟೆ ಹೋಬಳಿಯ ಎರಡನೇ ಪಿಡಿಒ ಅಮಾನತ್ತು ಅದಂತೆ ಆಗಿದೆ ಈ ಹಿಂದೆ ವೈ ಎನ್ ಹೊಸಕೋಟೆಯ ಗ್ರಾಮಪಂಚಾಯತಿ ಪಿಡಿಒ ಕೆಂಪರಾಜು ಅಮಾನತ್ತು ಗೊಂಡಿದ್ದರು
ಶ್ರೀರಾಮಪ್ಪ ನವರು ದ್ವಿತೀಯ ದರ್ಜೆ ಸಹಾಯಕರಾಗಿದ್ದು ಪ್ರಭಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಭಾರತದ ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಆಯ್ದ ೭೫೦ ಗ್ರಾಮ ಪಂಚಾಯತಿಗಳನ್ನು ಸರ್ಕಾರ ಆಯ್ಕೆ ಮಾಡಿದ್ದ ಪಂಚಾಯತಿಗಳಲ್ಲಿ, ಸಿದ್ದಾಪುರ ಗ್ರಾಮ ಪಂಚಾಯತಿ ಆಯ್ಕೆ ಮಾಡಲಾಗಿತ್ತು. ಈ ಯೋಜನೆಯ ಮೂಲ ಉದ್ದೇಶ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವುದು,ಈ ಯೋಜನೆ 2020-21 ಸಾಲಿನದ್ದು. ಎಲ್ಲಾ ಕಾಮಗಾರಿಗಳನ್ನು ಮಾರ್ಚ್ 31 ರೊಳಗೆ ಮುಕ್ತಾಯ ಗೊಳಿಸಿ, ಆಗಸ್ಟ್ 15. 2022 ರ ಒಳಗೆ ಅಂತಿಮ ವರದಿ ನೀಡಲು ಸರ್ಕಾರ ಅದೇಶಿಸಿರುತ್ತದೆ.
ಪಿಡಿಒ ಕರ್ತವ್ಯ ಲೋಪ ಅಂಶಗಳು
1 ಸಿದ್ದಾಪುರ ಗ್ರಾಮ ಪಂಚಾಯತಿ ಯ ಅಮೃತ ಗ್ರಾಮ ಪಂಚಾಯತಿ ಯೋಜನೆಯ ಕಾಮಗಾರಿಗಳ ಕ್ರಿಯಾ ಯೋಜನೆಗೆ ಜಿಲ್ಲಾ ಪಂಚಾಯತಿಯಿಂದ ಅನುಮತಿ ನೀಡಿದ್ದು ತುರ್ತಾಗಿ ಅಮೃತ ಗ್ರಾಮ ಪಂಚಾಯತಿ ಯೋಜನೆಯ ಕಾಮಗಾರಿಗಳನ್ನು ಪೂರ್ಣ ಗೊಳಿಸುವಂತೆ ಹಲವಾರು ಬಾರಿ ಪ್ರಗತಿ ಪರಿಶೀಲನಾ ಸಭೆ ತಿಳಿಸಿದ್ದರು ಕಾಮಗಾರಿಗಳನ್ನು ಪೂರ್ಣ ಗೊಳಿಸಿಲ್ಲ.
2 ಘನ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಹಲವಾರು ಬಾರಿ ಪ್ರಗತಿ ಪರಿಶೀಲನಾ ಸೂಚಿಸಿದ್ದರು ಸಹಾ ಇದುವರೆವಿಗೂ ಕಾಮಗಾಗಿಗಳನ್ನು ಪೂರ್ಣ ಗೊಳಿಸದೆ ಇರುವುದು ಮತ್ತು ಘನ ತ್ಯಾಜ್ಯ ವಿಲೇವಾರಿ ವಾಹನ ಖರೀದಿ ಮಾಡದೆ ಇರುವುದು ಕಂಡುಬಂದಿರುತ್ತದೆ.
3 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶೇ 100% ಮಾನವ ದಿನಗಳನ್ನು ಸೃಜನೆ ಮಾಡುವಲ್ಲಿ ವಿಫಲರಾಗಿರುವುದು
ಪಾವಗಡ ತಾಲ್ಲೂಕಿನ ೩೪ ಗ್ರಾಮಪಂಚಾಯತಿ ಗಳ ಆಡಳಿತ ವ್ಯವಸ್ಥೆ ಬ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರಂತೆ ಗ್ರಾಮ ಪಂಚಾಯತಿಗಳು ಕೆಲಸ ಮಾಡುತ್ತಿಲ್ಲ. ವಾರ್ಡ್-ಗ್ರಾಮ ಸಭೆಗಳು, ಮಾಡದೆ ಕಾನೂನನ್ನು ಗಾಳಿಗೆ ತೂರಿ ಪಂಚಾಯತಿ ರಾಜ್ಯಭಾರ ನಡೆಯುತ್ತಿವೆ
ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾಕ್ಟರ್ ಕೆ ವಿಧ್ಯಾಕುಮಾರಿಯವರು ಗಮನಹರಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.