IMG 20200626 WA0036

ಬಿಸಿ ಊಟ ಸಿಬ್ಬಂದಿಗೆ ಆಹಾರ ಧಾನ್ಯ ದ ಕಿಟ್…!

DISTRICT NEWS ತುಮಕೂರು

 

ಪಾವಗಡ:ಬಿಸಿ ಊಟ ಸಿಬ್ಬಂದಿಗೆ ಆಹಾರ ಧಾನ್ಯ ದ ಕಿಟ್…! ವಿತರಣೆ

ಕಲಿಯುಗದ* ಭಗವಾನ್ ಶ್ರೀ ಜಪಾನಂದ* *ಸ್ವಾಮೀಜಿಗಳು- ಎಂದ ಪಾವಗಡ  ದಂಡಾಧಿಕಾರಿ.

ಪಾವಗಡ: –  ತಾಲ್ಲೂಕಿನ ಕಲಿಯುಗದ ದೈವಿ ಸ್ವರೂಪಿ ಜಪಾನಂದ ಸ್ವಾಮೀಜಿ ಎಂದು ತಾಲ್ಲೂಕು ದಂಡಾಧಿಕಾರಿ ವರದರಾಜುರವರು ತಿಳಿಸಿದರು.
ಪಾವಗಡ ಪಟ್ಟಣದ ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ಬಿಸಿಯೂಟ ತಯಾರಿಸುವ 600 ಸಿಬ್ಬಂಧಿಗಳಿಗೆ ಆಹಾರ ದವಸ ಧಾನ್ಯಗಳ ಕಿಟ್ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ
ಮಾತನಾಡಿದ ಅವರು
ಶಾಲಾ ಮಕ್ಕಳಿಗೆ ತಮ್ಮ ಮಕ್ಕಳೆಂದು ಭಾವಿಸಿ ಅಡುಗೆ ಸಿಬ್ಬಂಧಿಗಳು ಬಿಸಿಯೂಟವನ್ನು ಉಣಬಡಿಸುತ್ತ ಬಂದಿರುವ ಎಲ್ಲ ಸಿಬ್ಬಂಧಿಗಳು ಕೋರೊನಾ ಹಿನ್ನೆಲೆ ಬದುಕು ನಡೆಸುವುದು ದುಸ್ಥರವಾಗಿದೆ. ಆ ಹಿನ್ನೆಲೆಯಲ್ಲಿ ರಾಮಕೃಷ್ಣ ಸೇವಾಶ್ರಮ ಮಾಡುತ್ತಿರುವ ಸಹಾಯದ ಸೇವಾ ಪಾತ್ರ ಅಗಣ್ಯವಾಗಿದೆ. ಸಾವಿರಾರು ಸಂಖ್ಯೆಗಳಲ್ಲಿ ತಾಲ್ಲೂಕಿನ ಎಲ್ಲಾ ವರ್ಗದ ಜನರಿಗೂ ಆಹಾರ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸುತ್ತಾ ಬಂದಿರುವ ಸ್ವಾಮೀಜಿಯವರು ಕಲಿಯುಗದ ದೈವಿ ಸ್ವರೂಪಿ ಎಂದರೆ ತಪ್ಪಾಗಲಾರದು ಎಂದು ಸ್ವಾಮೀಜಿಯವರ ಮಹಾನ್ ಕಾರ್ಯವನ್ನು ಶ್ಲಾಘಿಸಿ ಗೌರವ ಸೂಚಿಸಿದರು.

IMG 20200626 WA0037

ಪೂಜ್ಯ ಜಪಾನಂದ ಸ್ವಾಮೀಜಿ ಆಶೀರ್ವದಿಸುತ್ತ ಅಡುಗೆ ಸಿಬ್ಬಂದಿಗಳ ನಿಸ್ವಾರ್ಥಯುಳ್ಳ ಕಾಳಜಿ ಪ್ರತಿಯೊರ್ವರು ಮೆಚ್ಚಲೇ ಬೇಕು. ಜೊತೆಗೆ
ಕೊರೊನಾ ನಿಯಂತ್ರಿಸುವ ಸಲುವಾಗಿ ಸರ್ಕಾರ ಸೂಚಿಸಿರುವ ತಡೆಗಟ್ಟುವ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಹನುಮಂತರಾಯಪ್ಪ ಮಾತನಾಡುತ್ತ ಸ್ವಾಮೀಜಿ ಕೊಡುಗೈ ದಾನಿಯಾಗಿರುವ ನಡೆದಾಡುವ ಪೂಜ್ಯ ಮನೋಭಾವನೆಯುಳ್ಳವರು ನಮಗೆ ಸಿಕ್ಕಿರೋದು ಅದೊಂದು ಅದೃಷ್ಟ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಪಬ್ಲಿಕ್ ಪ್ರಾಸಿಕ್ಯೂಟರ್ ಮಂಜುನಾಥ್ ಅವರು ಮಾತನಾಡುತ್ತ ಕೋರೊನಾ ಅನ್ನುವ ಮಹಾಮಾರಿ ಯಾರನ್ನು ಬಿಟ್ಟಿಲ್ಲ ಪ್ರತಿಯೊಬ್ಬರನ್ನು ಆತಂಕಕ್ಕೆ ದೂಡಿದೆ ಹೆದರುವ ಅಗತ್ಯತೆಯಿಲ್ಲ ಎಂದು ವಿಶ್ವಾಸ ತುಂಬಿದರು.
ಇದೇ ವೇಳೆ ಬಿಸಿಯೂಟ ಅಡುಗೆ ಸಿಬ್ಬಂಧಿಗಳಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.

IMG 20200626 WA0035

ಈ ಸಂದರ್ಭದಲ್ಲಿ , ಪ್ರಭಾರ ಬಿಇಒ.ಪವನ್ ಕುಮಾರ್ ರೆಡ್ಡಿ, ದೈಹಿಕ ಶಿಕ್ಷಣ ಪರಿವೀಕ್ಷಕರು ಬಸವರಾಜು, ಆರ್. ಐ .ರಾಜ್ ಗೋಪಾಲ್, ಆಶ್ರಮ ಸಿಬ್ಬಂದಿ ಪ್ರಕಾಶ್, ಹಾಗೂ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಪದಾಧಿಕಾರಿಗಳು ರಮೇಶ್, ಕೃಷ್ಣಾರೆಡ್ಡಿ,ನವೀನ್, ಮಂಜುನಾಥ್ ಸೇರಿದಂತೆ ಹಲವರಿದ್ದರು.

ವರದಿ: ನವೀನ್ ಕಿಲಾರ್ಲಹಳ್ಳಿ