ಪಾವಗಡ: ಸನ್ಮಾನ ಕಾರ್ಯಕ್ರಮ ಪಟ್ಟಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ `75 ವರ್ಷ ಪೂರ್ಣಗೊಂಡ ಹಿರಿಯರಿಗೆ ಸನ್ಮಾನ,
ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ವೆಂಕಟರವಣಪ್ಪ ಮಾತನಾಡುತ್ತಾ. ಸರ್ಕಾರಿ ನೌಕಕರಿಗೆ ನಿವೃತ್ತಿ ಇದೆ. ಆದರೆ ಸಮಾಜ ಸೇವೆ, ಹೋರಾಟ, ರಾಜಕಾರಣದಲ್ಲಿ ನಿವೃತ್ತಿ ಕಷ್ಟ ಸಾಧ್ಯ. ಜೀವನ ಪರ್ಯಂತ ಸೇವೆ ಮುಂದುವರೆಸಲೇ ಬೇಕು. ಜೀವ ಇರುವವರೆಗೆ ಪ್ರತಿಯೊಬ್ಬರು ಬದುಕಲು ಹೋರಾಟ ಮುಂದುವರೆಸಬೇಕು ಎಂದರು.
ಸರ್ಕಾರಿ ನೌಕರರು ನಿವೃತ್ತಿಯ ನಂತರ ಕೈಲಾದ ಅಳಿಲು ಸೇವೆ ಮಾಡಬೇಉ. ಹಿರಿಯ ನಾಗರಾರೀಕರನ್ನು ಪ್ರತಿಯೊಬ್ಬರು ಗೌರವಿಬೇಕು ಎಂದು ಕರೆ ನೀಡಿದರು. ಜಿಲ್ಲಾ ಘಟದ ಅಧ್ಯಕ್ಷೆ ಬಾ.ಹಾ. ರಮಾಕುಮಾರಿ, ನಿವೃತ್ತ ನೌರರಿಗೆ ಸರ್ಕಾರ ಆರೋಗ್ಯ ಕಾರ್ಡ್ ನೀಡಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು. ಮುಖಂಡ ನೇರಳೆಕುಂಟೆ ನಾಗೇಂದ್ರ ಕುಮಾರ್, ಹಿರಿಯರ ಮಾರ್ಗದರ್ಶನ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ. ವಯಸ್ಸಾದ ತಂದೆ ತಾಯಿಯರನ್ನು ಪ್ರೀತಿಯಿಂದ ಪೋಷಿಸಬೇಕು ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಮೈಲಪ್ಪ, ನಿವೃತ್ತ ನೌಕರರ ಸಂಘದ ಭವನಕ್ಕಾಗಿ ಪುರಸಭೆಯಿಂದ ನಿವೇಶನ ಕೊಡಿಸಬೇಕು ಎಂದು ಶಾಸಕರನ್ನು ಒತ್ತಾಯಿಸಿದರು. ಪುರಸಭೆ ಅಧ್ಯಕ್ಷೆ ಗಂಗಮ್ಮ, ಸದಸ್ಯ ಸುದೇಶ್ ಬಾಬು, ವಿ.ಎನ್.ರವಿಕುಮಾರ್, ಸಂಘದ ಕಾರ್ಯದರ್ಶಿ ಜಿ.ಲಕ್ಷ್ಮಿನರಸಯ್ಯ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ ಮಾತನಾಡಿದರು. ಕಾರ್ಯದರ್ಶಿ ಆರ್.ಸತ್ಯನಾರಾಯಣ್, ಸಣ್ಣನಾಗಪ್ಪ, ವಡಸಲಪ್ಪ, ಕಾರನಾಗಪ್ಪ, ಬೋರಣ್ಣ ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸುಲು ಎ