ಬಿಸಿ ಊಟದಲ್ಲಿ ಹುಳು, ಆತಂಕದಲ್ಲಿ ವಿದ್ಯಾರ್ಥಿಗಳು.
ಪಾವಗಡ : ಹಳೆಯ ಗೋಧಿ ಮತ್ತು ಬೆಳೆಯನ್ನು ಬಿಸಿಯೂಟ ತಯಾರಕರು ಅಡಿಗೆಗೆ ಬಳಸಿದ್ದರಿಂದ ಮುದ್ದೆ ಮತ್ತು ಸಾರಿನಲ್ಲಿ ಹುಳುಗಳು ಕಂಡುಬಂದಿವೆ ಎಂದು ತಾಲ್ಲೂಕಿನ ಜಾಜುರಾಯನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ..
ಊಟದಲ್ಲಿ ಆಗಾಗ ಹುಳುಗಳು ಇರುವುದು ಕಂಡುಬರುತ್ತವೆ ಎಂದು ಈ ಬಗ್ಗೆ ಶಿಕ್ಷಕರಿಗೆ ತಿಳಿಸಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದರು.
ವಿಷಯದ ತಿಳಿದ ನಂತರ ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶಂಕರಪ್ಪ ಶಾಲೆಗೆ ಭೇಟಿ ನೀಡಿ ಆಹಾರ ಧಾನ್ಯಗಳನ್ನು ಪರಿಶೀಲಿಸಿ ಅಡುಗೆ ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡರು.
ಸೆಪ್ಟೆಂಬರ್ ತಿಂಗಳಲ್ಲಿ ನೀಡಿರುವಂತಹ ಬೇಳೆ ಮತ್ತು ಗೋಧಿ ಆಹಾರ ಪದಾರ್ಥಗಳಿಗೆ ಹುಳುಗಳು ಬಿದ್ದಿರುವುದನ್ನು ಪರಿಶೀಲಿಸಿ ತಕ್ಷಣವೇ ಆಹಾರ ಪದಾರ್ಥಗಳನ್ನು ಬದಲಾಯಿಸಿ ಕೊಡುವುದಾಗಿ ಭರವಸೆ ನೀಡಿದರು.
ಆಹಾರ ಧಾನ್ಯಗಳನ್ನು ಯಾವ ರೀತಿ ಶೇಖರಣೆ ಮಾಡಬೇಕು ಎಂಬುದರ ಬಗ್ಗೆ ಅಡುಗೆ ಸಿಬ್ಬಂದಿ ಅವರಿಗೆ ಈಗಾಗಲೇ ತರಬೇತಿ ನೀಡಿರುವುದಾಗಿ, ಆದರೆ ಸಿಬ್ಬಂದಿಗಳು ಹಳೆಯ ಬೇಳೆ ಮತ್ತು ಗೋದಿ ಬಳಸಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದರು.
ವರದಿ. ಶ್ರೀನಿವಾಸಲು. A