ಪಟ್ಟಣದ ಪರಧಿಯಲ್ಲಿ ಅಪಘಾತಗಳನ್ನು ತಡೆಯಲು ಬೈಪಾಸ್ ರಸ್ತೆ ನಿರ್ಮಿಸುವಂತೆ ಆಗ್ರಹ…
ಪಾವಗಡ: ಪಟ್ಟಣದಲ್ಲಿ ದಿನೇ ದಿನೇ ವಾಹನಗಳ ಓಡಾಟ ಹೆಚ್ಚಾಗಿದ್ದು ರಸ್ತೆ ಅಪಘಾತಗಳು ಸಹ ಹೆಚ್ಚಾಗಿವೆ , ವಾಹನಗಳ ಅಪಘಾತ ತಡೆಯುವ ನಿಟ್ಟಿನಲ್ಲಿ ಪಾವಗಡ ಪಟ್ಟಣಕ್ಕೆ ಬೈ – ಪಾಸ್ ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ವೆಂಕಟಾಪುರ ಪಂಚಾಯತಿಯ ಶ್ರೀನಿವಾಸ ಪುರ ಗ್ರಾಮದ ಯುವಕ ಶ್ರೀನಿವಾಸ್ ಟೊಲ್ ಗೇಟ್ ಬಳಿಯಿರುವ ಅಂಬೇಡ್ಕರ್ ವೃತ್ತದ ಬಳಿ ಧರಣಿ ಸತ್ಯಾಗ್ರಹ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು .
ಧರಣಿ ನಿರತ ಯುವಕ ಶ್ರೀನಿವಾಸ್ ಮಾತಾಡಿ, ತಾಲೂಕಿನಲ್ಲಿ ಇತ್ತೀಚೆಗೆ ವಾಹನ ಸಂಚಾರ ದಟ್ಟಣೆಯಾಗಿದ್ದು, ಅನೇಕ ಅಪಘಾತಗಳು ಸಹ ಸಂಭವಿಸಿವೆ, ತಾಲ್ಲೂಕು ಹಲವು ಪ್ರೇಕ್ಷಣೀಯ ಸ್ಥಳಗಳಾದ ಶ್ರೀ ಶನಿದೇವರ ದೇವಸ್ಥಾನ, ಸೋಲಾರ್ ಪಾಕ್೯ ಮುಂತಾದ ಅಂಶಗಳಿಂದಾಗಿ ಪ್ರಸಿದ್ಧಿ ಹೊಂದಿದ್ದು, ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನಡಿತಿದ್ದು, , ಶಿರಾ ಅಮರಾಪುರ ರಸ್ತೆ ಪಕ್ಕದಲ್ಲಿ ಶನಿದೇವರ ದೇವಸ್ಥಾನ ವಿದ್ದು , ಅಲ್ಲಿನ ರಸ್ತೆ ಅತ್ಯಂತ ಕಿರಿದಾದ ರಸ್ತೆ ಆಗಿದೆ, ವಾಹನ ದಟ್ಟನೆ ವೀಪರೀತವಾಗಿದೆ, ಪಟ್ಟಣದ ನಾಲ್ಕು ಭಾಗಗಳಲ್ಲಿಯೂ ವಾಹನಗಳ ಒಡಾಟ ಜಾಸ್ತಿಯಾಗಿದೆ , ಆದ್ದರಿಂದ ಶೀಘ್ರವಾಗಿ ಬೈಪಾಸ್ ರಸ್ತೆ ಕಾಮಗಾರಿ ಕೈಗೊಳ್ಳಬೇಕು ಇಲ್ಲವಾದರೆ ಸಂಘಟನೆಗಳ ನೆರವು ಪಡೆದು ಇನ್ನೂ ಹೆಚ್ಚಿನ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಶಿಲ್ದಾರ್ ವರದರಾಜು, PWD A E E ಅನಿಲ್ ರವರು ಸ್ಥಳಕ್ಕೆ ಧಾವಿಸಿ ಯುವಕನಿಂದ ಮನವಿ ಪತ್ರ ಪಡೆದು ಸರ್ಕಾರದ ಗಮನಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದರು
ಕಿಸಾನ್ ರೈತ ಸಂಘದ ನಾಗಭೂಷಣ ರೆಡ್ಡಿ , ಇನ್ನಿತರ ಮುಖಂಡರು ಹಾಜರಿದ್ದರು