IMG 20220919 WA0011

ಕೊರಟಗೆರೆ: ಜೂನಿಯರ್ ಕಾಲೇಜಿನಲ್ಲಿ ಕನ್ನಡ ಭಾಷಾ ಕಲಿಕಾ ಶಿಬಿರ ಆಯೋಜನೆ…!

DISTRICT NEWS ತುಮಕೂರು

*ಕೊರಟಗೆರೆಯ ಜೂನಿಯರ್ ಕಾಲೇಜಿನಲ್ಲಿ ಕನ್ನಡ ಭಾಷಾ ಕಲಿಕಾ ಶಿಬಿರವನ್ನು ಆಯೋಜಿಸಲಾಗಿತ್ತು…*

ಕೊರಟಗೆರೆ : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಗೌತಮ ಬುದ್ಧ ಸಾಮಾಜಿಕ-ಶೈಕ್ಷಣಿಕ-ಸಾಂಸ್ಕೃತಿಕ ಟ್ರಸ್ಟ್ (ರಿ)ವತಿಯಿಂದ ಕನ್ನಡ ಭಾಷಾ ಕಲಿಕಾ ಶಿಬಿರವನ್ನು ಆಯೋಜಿಸಲಾಗಿತ್ತು…

ಕೊಡಗೆ ತಾಲೂಕಿನ ಕಸ್ಬಾ ಹೋಬಳಿ ಮತ್ತು ಚೆನ್ನರಾಯನದುರ್ಗ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಕಲಿಕಾ ಉತ್ತೇಜನದ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು..

ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ವ್ಯವಸ್ಥಾಪಕರು ಮತ್ತು ಪ್ರಧಾನ ಕಾರ್ಯದರ್ಶಿಗಳು ಕನ್ನಡ ಭಾಷಾ ಕಲಿಕಾ ಶಿಬಿರದ ಆಯೋಜನೆಯನ್ನು ವಹಿಸಿಕೊಂಡಿದ್ದರು..

ಕನ್ನಡ ಭಾಷಾ ಕಲಿಕಾ ಶಿಬಿರದ ಕಾರ್ಯ ಕ್ರಮದ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್ ಆರ್ ನಾಗರಾಜು ,ಉಪನ್ಯಾಸಕರಾದ ನಂಜುಂಡಪ್ಪ ಸುಗ್ಗಯ್ಯ,ಡಾ. ರವಿಕುಮಾರ್,ವೀಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ಶ್ರೀ ಗೌತಮ ಬುದ್ಧ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್(ರಿ) ನ ಪ್ರಧಾನ ಕಾರ್ಯದರ್ಶಿ ಶಿಕ್ಷಣ ಪ್ರೇಮಿ,ಸರಸ್ವತಿ ಪುತ್ರರಾದ ಡಾ.ನಾಗರಾಜು ಎನ್.ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕನ್ನಡ ಕೆಲವೊಂದಷ್ಟು ಪಾಠಗಳನ್ನು ಮಾಡುವುದರ ಮೂಲಕ ಕನ್ನಡ ಭಾಷೆಯ ಬಗ್ಗೆ ಅಭಿಮಾನ ತುಂಬುವ ಕೆಲಸವನ್ನು ಶ್ರದ್ಧಾಪೂರ್ವಕವಾಗಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಟ್ರಸ್ಟ್ ನ ನಿರ್ದೇಶಕರಾದ ದೇವರಾಜು ಖಜಾಂಚಿಯಾದ ಹರೀಶ್ ಕುಮಾರ್ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಲಕ್ಷ್ಮಿಪುತ್ರ, ಕೋಟೆ ಕಲ್ಲಯ್ಯ,ಧರ್ಮೇಂದ್ರ ಪ್ರಸಾದ್,ಹನುಮಂತರಾಯಪ್ಪ ನರಸಮ್ಮ,ನರಸಿಂಹಮೂರ್ತಿ,
ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿಕಾರ್ಜುನಯ್ಯ ಎಂ ಟಿ, ಶಶಿಕುಮಾರ್ ಹಾಜರಿದ್ದರು.

ವರದಿ – ದೇವರಾಜ್ ಕೆ.ಎನ್. ಕೊರಟಗೆರೆ