ತಾಲೂಕಿಗೆ ಪ್ರಥಮ ಸ್ಥಾನ. ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ…….
ಪಾವಗಡ….. 2021 -22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು. 1.ಪಟ್ಟಣದ ಗುರುಕುಲ ಶಾಲೆಯ ವಿದ್ಯಾರ್ಥಿ ಪ್ರಜ್ವಲ್ ಚೌದರಿ 625 ಅಂಕಗಳಿಗೆ 624 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದ ಹಿನ್ನೆಲೆ ಇಂದು ಗುರುಕುಲ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿ ಪ್ರಜ್ವಲ್ ಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು. ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ. ಪಿ.ಇ.ಒ ಚಿದಾನಂದ ಸ್ವಾಮಿ. ಗುರುಕುಲ ಶಾಲೆಯ ಕಾರ್ಯದರ್ಶಿ ಎನ್ ಸಿ ನಾಗಭೂಷಣ್ . ಮುಖ್ಯಶಿಕ್ಷಕ ಮೈಲಾರ ರೆಡ್ಡಿ ವಿದ್ಯಾರ್ಥಿಗೆ ಸನ್ಮಾನಿಸಿ ಶುಭಕೋರಿದರು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ ಮಾತನಾಡುತ್ತಾ, ಪ್ರತಿಭೆ ಎಂಬುದು ಸಾಧಕನ ಸ್ವತ್ತಾಗಿರುತ್ತದೆ, ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಗುರಿಯನ್ನು ಹೊಂದಿರಬೇಕು, ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಪೋಷಕರಿಗೆ ಹಾಗೂ ಶಾಲಾ ಆಡಳಿತ ಮಂಡಳಿ ಅವರಿಗೆ ಶಿಕ್ಷಕ ವರ್ಗದವರಿಗೆ ಒಳ್ಳೆಯ ಹೆಸರನ್ನು ತರುವ ಕೆಲಸವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಮಾಡಬೇಕೆಂದರು. 2. ಸಹನಾ ಆಂಗ್ಲ ಶಾಲೆ… ಇಂದು ಕೋಟ ಗುಡ್ಡದ ಸಹನಾ ಆಂಗ್ಲ ಶಾಲೆಯಲ್ಲಿ 2021-22 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಚಿನ್ಮಯಿ ಯು 623 ಅಂಕ ಗಳಿಸಿ ತಾಲೂಕಿಗೆ ದ್ವಿತೀಯ ಸ್ಥಾನ ಹಾಗೂ ಜಿಲ್ಲೆಗೆ ಮೂರನೇ ಸ್ಥಾನ ಕಳಿಸಿದ್ದು. ಗಾನವಿ ಎ 621 ಅಂಕ ಗಳಿಸಿದ್ದು, ಸಹನಾ ಆರ್ ಪಿ 619 ಅಂಕ ಪಡೆದಿದ್ದರಿಂದ ಇಂದು ಸಹನಾ ಆಂಗ್ಲ ಶಾಲೆಯ ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ, ಶಿಕ್ಷಣ ಸಂಯೋಜಕ ವೇಣುಗೋಪಾಲ ರೆಡ್ಡಿ. ದೈಹಿಕ ಶಿಕ್ಷಣ ಅಧಿಕಾರಿ ಚಿದಾನಂದ ಸ್ವಾಮಿ, ಸಹನಾ ಸಂಸ್ಥೆಯ ಆಡಳಿತಾಧಿಕಾರಿಯಾದ ಎನ್ ಶ್ರೀನಿವಾಸ್ , ಮುಖ್ಯಶಿಕ್ಷಕ ನರಸಿಂಹಪ್ಪ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡುತ್ತಾ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪಾವಗಡ ಪ್ರಥಮ ಗಳಿಸಿದ್ದು, ತುಂಬಾ ಹೆಮ್ಮೆಯ ವಿಷಯವಾಗಿದೆ. ತಾಲೂಕಿನ , ಸರ್ಕಾರಿ , ಅನುದಾನಿತ, ಮತ್ತು ಖಾಸಗಿ ಶಾಲೆಯ ಮಕ್ಕಳ ಪ್ರಯತ್ನದಿಂದಾಗಿ ತಾಲೂಕಿಗೆ ಉತ್ತಮ ಫಲಿತಾಂಶ ಬಂದಿದೆಯೆಂದು ತಿಳಿಸಿದರು.
ವರದಿ: ಶ್ರೀನಿವಾಸಲು ಎ