ವೈ ಎನ್ ಹೊಸಕೋಟೆಯಲ್ಲಿ ಸುಮಾರು ಎರಡು ವರ್ಷ ಪಿ ಎಸ್ ಐ ಆಗಿ ಕರ್ತವ್ಯನಿರ್ವಹಿಸಿದ್ದ ಕಿರಣ್ ಕುಮಾರ್ ಚನ್ನರಾಯಪಟ್ಟಣ ದಲ್ಲಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ.
ಚನ್ನರಾಯಪಟ್ಟಣದ ಪಿಎಸ್ಐ ಆತ್ಮಹತ್ಯೆಗೆ ಶರಣಾಗಿದ್ದು ಏಕೆ?ಕ ಳೆದ 2ದಿನಗಳಿಂದ ನಡೆದ ಕೊಲೆಗೂ ಪಿಎಸ್ಐ ಆತ್ಮಹತ್ಯೆಗೂ ಇದ್ಯಾ ಸಂಬಂಧ?
ಇಂದು ಬೆಳಿಗ್ಗೆ ಸ್ನೇಹಿತರಿಗೆ, ಮನೆಯವರಿಗೆ,ರಾಜಕಾರಣಿಗಳ ಜೊತೆ ಪೋನ್ ಮಾಡಿ ಮಾತ್ನಾಡಿದ್ರು…ಅದ್ರೇ ಕೆಲ ಹೊತ್ತಿನಲ್ಲೆ ಮನೆಯಲ್ಲಿ ಸಮವಸ್ರ್ತದ ಸಮೇತ ಪ್ಯಾನೆಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ್ರು ಈ ಪ್ರಮಾಣಿಕ ಹಾಗೂ ದಕ್ಷ ಅಧಿಕಾರಿ..ಪಿ ಎಸ್ ಐ ಸಾವಿನ ಸುದ್ದಿ ಕೇಳಿದ ತಕ್ಷಣ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳು ನೀರವ ಮೌನ!!! ಹಾಗಾದ್ರೆ ಪೊಲೀಸ್ ಅಧಿಕಾರಿ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ
ಹೀಗೆ ಸಮವಸ್ತ್ರ ಧರಿಸಿಕೊಂಡೆ ಆತ್ಮ ಹತ್ಯೆ ಮಾಡಿಕೊಂಡಿರುವ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಗರ ಠಾಣೆ ಪಿಎಸ್ಐ ಕಿರಣ್…ಇಂದು ಅವರ ಸಾವು ಇಡಿ ಹಾಸನ ಜಿಲ್ಲೆ ಪೊಲೀಸರು ಹಾಗೂ ಜನರಿಗೆ ಒಂದ್ ರೀತಿ ಶಾಕ್ ಆಗಿದ್ದೆಂತು ಸತ್ಯ…ಯಾವಾಗ ಪಿಎಸ್ ಕಿರಣ್ ಆತ್ಮ ಹತ್ಯೆ ಆಗುತ್ತಿದ್ದಂತೆ ಕೆಲ ಗಾಸೀಪ್ಗಳು ಹಬ್ಬತೊಡಗಿದ್ದವು……
ಕಳೆದ ಎರಡು ದಿನಗಳ ಹಿಂದೆ ಪಟ್ಟಣದಲ್ಲಿ ಎರಡು ಕೊಲೆ ನೆಡದಿತ್ತು..ಈ ವಿಷಯಕ್ಕೆ ಸಂಭಂದ ರಾಜಕಾರಣಿಗಳ ಒತ್ತಡ ಇರಬಹುದು? ಇಲ್ಲಂದ್ರೆ ಮೇಲಾಧಿಕಾರಿಗಳ ಒತ್ತಡ ಇದ್ದರು ಇರಬಹುದು ಅನ್ನೂ ಮಾತುಗಳು ಅಲ್ಲಲ್ಲಿ ಗುಸು ಗುಸು ಪಿಸು ಪಿಸು?? ಇದರಿಂದ ಮನನೊಂದು ಪಿ ಎಸ್ ಐ ಕಿರಣ್ ಆತ್ಮಹತ್ಯೆ ಮಾಡಿಕೊಂಡ್ರ? ಎಂಬ ಅನು ಮಾನ ಕಾಡತೋಡಗಿದೆ…
ಈ ಸಂಬಂಧ ಕಿರಣ್ ಪತ್ನಿ ಆಸ್ಪತ್ರೆಗೆ ದಾಖಲು ಆಗಿದ್ದಾರೆ ಇತ್ತ ಚಿಕ್ಕ ಮಕ್ಕಳು ತಂದೆಯನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ.ಕುಟುಂಬದಿಂದಿಗೆ ಅದೆಷ್ಟೋ ಕನಸು ಕಂಡಿದ್ದ ಕಿರಣ್ ಪತ್ನಿಯ ಸಿಂದೂ ಕನಸು ಛಿದ್ರ ಛಿದ್ರವಾಗಿದೆ…
ಇನ್ನು ಘಟನೆ ಸಂಭಂದ ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ ನನಗೆ ತುಂಬ ನೋವು ತಂದಿದೆ.ಆತ್ಮಹತ್ಯೆ ಬಗ್ಗೆ ಯಾರು ಕೂಡ ದೂರುಕೊಟ್ಟಿಲ್ಲ,ತನಿಖೆ ಆರಂಭ ಮಾಡಿದ್ದೆವೆ ಯಾಕೇ ಆತ್ಮಹತ್ಯೆ ಮಾಡಿಕೊಂಡ್ರು ಎಂಬುದರ ವಿಚಾರ ಮಾಡುತ್ತಿದ್ದೆವೆ..ದಯವಿಟ್ಟು ನೀವುಗಳು ನಮ್ಮ ಜೊತೆ ಸಹಕರಿಸಿ ಎಂದು ಮನವಿ ಮಾಡಿದ್ರು…
ಇನ್ನು ಪಿಎಸ್ ಐ ಸಾವಿನ ಬಗ್ಗೆ ತನಿಖೆ ಮಾಡಬೇಕು.ಈ ಘಟನೆಯಲ್ಲಿ ನಾನೇ ಸೇರಿದಂತೆ ಯಾರೇ ಒತ್ತಡವಿದ್ರು ಬಿಡದೆ ತನಿಖೆ ಮಾಡಲಿ ಅಂತ ಹಾಸನ ಎಂಎಲ್ ಸಿ ಗೋಪಾಲ್ ಸ್ವಾಮಿ ಒತ್ತಯಾ ಮಾಡಿದ್ರು..ಇನ್ನು ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ರೇವಣ್ಣ ಪಿ ಎಸ್ ಐ ಕಿರಣ್ ಸಾವಿಗೆ ಆಕ್ರೋಶ ವ್ಯಕ್ತ ಪಡಿಸಿದ್ರು..ಕಿರಣ್ ಮೊಬೈಲ್ ಯಾಕೇ ಕಿತ್ತುಕೊಂಡ್ರು! ಅವರ ಮೊಬೈಲ್ ಬಳಿ ಡಿಟೈಲ್ ತೆಗೆದರೆ ವಿಚಾರ ಸ್ಪಷ್ಟವಾಗಿ ಸಿಗುತ್ತೆ, ಈ ವಿಷಯವನ್ನು ಸಿಬಿಐ ತನಿಖೆ ಮಾಡಬೇಕು ಇಲ್ಲದಿದ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ರು.
ಪಿ ಎಸ್ ಐ ಕಿರಣ್ ಸಾವಿಗೆ ಮೈಸೂರು ವಲಯ ಐಜಿಪಿ ವಿಪುಲ್ ಕುಮಾರ ಬೇಟಿ ನೀಡಿ ಕುಟುಂಬಸ್ಥರಿಗೆ ಸಂತ್ವಾನದ ಜೊತೆಗೆ ವಿಚಾರ ಕೂಡ ಮಾಡಿದ್ರು..ದಯವಿಟ್ಟು ಕಿರಣ್ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಬೇಡಿ..ನಾವುಗಳು ಸಮಸ್ಯೆಗಳ ಒಳಗೆ ಕೆಲಸ ಮಾಡುತ್ತಿದ್ದಿವೆ ತನಿಕಾ ಹಂತದಲ್ಲಿ ಇರೋಬೇಕಾದ್ರೆ ಏನನ್ನು ಹೇಳುವುದಕ್ಕೆ ಆಗುವುದಿಲ್ಲ ಅಂದ್ರು…
ಒಟ್ಟಾರೆ ಪಿಎಸ್ ಐ ಕಿರಣ್ ಸಾವಿನ ತನಿಕೆ ಚುರುಕುಗೊಂಡಿದೆ..ಆತ್ಮ ಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ..ನ್ಯಾಯ ನೀಡಬೇಕಾದ ಪೊಲೀಸರೇ ಹೀಗೆ ಆತ್ಮಹತ್ಯೆ ಮಾಡಿಕೊಂಡ್ರೆ ಸಾಮಾನ್ಯ ಜನರ ಪಾಡೇನು ಎಂಬ ಪ್ರಶ್ನೆ ಮೂಡುತ್ತೆ….