IMG 20231006 WA0002

ಪಾವಗಡ : ಜಿಲ್ಲಾ ಮಟ್ಟದ ಕ್ರೀಡಾಕೂಟ ಮುಕ್ತಾಯ…!

DISTRICT NEWS ತುಮಕೂರು

ಪಾವಗಡ ಜಿಲ್ಲಾ ಮಟ್ಟದ ಕ್ರೀಡಾಕೂಟ ಮುಕ್ತಾಯ.

ಪಾವಗಡ : ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯಿತು.

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿರಾ, ಕೊರಟಗೆರೆ, ಮಧುಗಿರಿ, ಪಾವಗಡದ ಕ್ರೀಡಾಪಟುಗಳು ಭಾಗವಹಿಸಿದ್ದರು.

ಬಾಲಕಿಯರ ವಿಭಾಗದ ಡಿಸ್ಕ್ ಕ್ರೀಡೆಯಲ್ಲಿ ಶಿರಾ ತಾಲ್ಲೂಕಿನ ಶಿಲ್ಪ ಪ್ರಥಮ, ಶಿರಾ ತಾಲ್ಲೂಕಿನ ವರ್ಷಿಣಿ ದ್ವಿತೀಯ.
ಹ್ಯಾಮರ್ ಕ್ರೀಡೆಯಲ್ಲಿ ಶಿರಾ ತಾಲ್ಲೂಕಿನ ಲಾವಣ್ಯ ಪ್ರಥಮ, ಶಿರಾ ತಾಲ್ಲೂಕಿನ ಲಕ್ಷ್ಮಿ ದ್ವಿತೀಯ.
ಲಾಂಗ್ ಜಂಪ್ ಕ್ರೀಡೆಯಲ್ಲಿ ಪಾವಗಡ ತಾಲ್ಲೂಕಿನ ರಮಾದೇವಿ ಪ್ರಥಮ, ಕೊರಟಗೆರೆ ತಾಲ್ಲೂಕಿನ ಅನನ್ಯ ದ್ವಿತೀಯ.
ಹೈಜಂಪ್ ಕ್ರೀಡೆಯಲ್ಲಿ ಮಧುಗಿರಿ ತಾಲ್ಲೂಕಿನ ಹರ್ಷಿತ ಪ್ರಥಮ, ಶಿರಾ ತಾಲ್ಲೂಕಿನ ಮೀನಾಕ್ಷಿ ದ್ವಿತೀಯ.

100 ಮೀಟರ್ ಓಟದ ಸ್ಪರ್ಧೆಯಲ್ಲಿ ಕೊರಟಗೆರೆ ತಾಲ್ಲೂಕಿನ ಗಂಗಮ್ಮ ಪ್ರಥಮ, ಪಾವಗಡ ತಾಲ್ಲೂಕಿನ ಸಂಧ್ಯಾ ದ್ವಿತೀಯ.
200 ಮೀಟರ್ ಓಟದ ಸ್ಪರ್ಧೆಯಲ್ಲಿ ಪಾವಗಡ ತಾಲ್ಲೂಕಿನ ಜ್ಯೋತಿ ಪ್ರಥಮ, ಶಿರಾ ತಾಲ್ಲೂಕಿನ ಲಕ್ಷ್ಮೀ ದ್ವಿತೀಯ.
400 ಮೀಟರ್ ಓಟದ ಸ್ಪರ್ಧೆಯಲ್ಲಿ ಮಧುಗಿರಿ ತಾಲ್ಲೂಕಿನ ಜ್ಯೋತಿ ಪ್ರಥಮ, ಕೊರಟಗೆರೆ ತಾಲ್ಲೂಕಿನ ಭಾಗ್ಯ ದ್ವಿತೀಯ.
800 ಮೀಟರ್ ಓಟದ ಸ್ಪರ್ಧೆಯಲ್ಲಿ ಮಧುಗಿರಿ ತಾಲ್ಲೂಕಿನ ಲಾವಣ್ಯ ಪ್ರಥಮ, ಪಾವಗಡ ತಾಲ್ಲೂಕಿನ ಅಮೂಲ್ಯ ದ್ವಿತೀಯ.
1500 ಮೀಟರ್ ಓಟದ ಸ್ಪರ್ಧೆಯಲ್ಲಿ ಮಧುಗಿರಿ ತಾಲ್ಲೂಕಿನ ಕವಿತಾ ಪ್ರಥಮ, ಪಾವಗಡ ತಾಲ್ಲೂಕಿನ ಮಾಧವಿ ದ್ವಿತೀಯ.

IMG 20231006 WA0003


ಬಾಲಕರ ವಿಭಾಗ.
ಡಿಸ್ಕ್ ಕ್ರೀಡೆಯಲ್ಲಿ ಶಿರಾ ತಾಲ್ಲೂಕಿನ ಹರ್ಷಿತ್ ಪ್ರಥಮ, ಕೊರಟಗೆರೆ ತಾಲ್ಲೂಕಿನ ಅಂಜನ್ ದ್ವಿತೀಯ.
ಜಾವೆಲಿನ್ ಕ್ರೀಡೆಯಲ್ಲಿ ಕೊರಟಗೆರೆ ತಾಲ್ಲೂಕು ಪ್ರಥಮ ಮತ್ತು ದ್ವಿತೀಯ.
ಹ್ಯಾಮರ್ ಕ್ರೀಡೆಯಲ್ಲಿ ಶಿರಾ ತಾಲ್ಲೂಕಿನ ಓಂಕಾರ್ ನಾಯ್ಕ್ ಪ್ರಥಮ, ಮುಜಮಿಲ್ ಪಾಷಾ ದ್ವಿತೀಯ.
ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಪಾವಗಡ ತಾಲ್ಲೂಕಿನ ಪವನ್ ಪ್ರಥಮ, ಕೊರಟಗೆರೆ ತಾಲ್ಲೂಕಿನ ಹರ್ಷವರ್ಧನ್ ದ್ವಿತೀಯ.
ಹೈ ಜಂಪ್ ಸ್ಪರ್ಧೆಯಲ್ಲಿ ಕೊರಟಗೆರೆ ತಾಲ್ಲೂಕಿನ ಅಕ್ಷಯ್ ಪ್ರಥಮ, ಮಧುಗಿರಿ ತಾಲ್ಲೂಕಿನ ಪ್ರಜ್ವಲ್ ದ್ವಿತೀಯ.
100 ಮೀಟರ್ ಓಟದ ಸ್ಪರ್ಧೆಯಲ್ಲಿ ಶಿರಾ ತಾಲ್ಲೂಕಿನ ಕೋಮಲ್ ಪ್ರಥಮ, ಮಧುಗಿರಿ ತಾಲ್ಲೂಕಿನ ಅತಿಕ್ ಅಹ್ಮದ್ ದ್ವಿತೀಯ.
200 ಮೀಟರ್ ಓಟದ ಸ್ಪರ್ಧೆಯಲ್ಲಿ ಕೊರಟಗೆರೆಯ ಹರ್ಷವರ್ಧನ್ ಪ್ರಥಮ, ಶಿರಾದ ಸೈಯದ್ ಮೆಹರನ್ ದ್ವಿತೀಯ.
400 ಮೀಟರ್ ಓಟದ ಸ್ಪರ್ಧೆಯಲ್ಲಿ ಮಧುಗಿರಿ ತಾಲ್ಲೂಕಿನ ಅತಿಕ್ ಅಹಮದ್ ಪ್ರಥಮ, ಸಾಗರ್ ದ್ವಿತೀಯ.
800 ಮೀಟರ್ ಓಟದ ಸ್ಪರ್ಧೆಯಲ್ಲಿ ಮಧುಗಿರಿ ತಾಲ್ಲೂಕಿನ ಅಖಿಲ ಪ್ರಥಮ, ಕೊರಟಗರೆ ತಾಲ್ಲೂಕಿನ ಸಿದ್ದರಾಜು ದ್ವಿತೀಯ.

IMG 20231006 WA0004 1


1500 ಮೀಟರ್ ಓಟದ ಸ್ಪರ್ಧೆಯಲ್ಲಿ ಮಧುಗಿರಿ ತಾಲ್ಲೂಕಿನ ಅಖಿಲ್ ಪ್ರಥಮ, ಕೊರಟಗರೆ ತಾಲ್ಲೂಕಿನ ನಂದನ್ ದ್ವಿತೀಯ.

3000 ಮೀಟರ್ ಓಟದ ಸ್ಪರ್ಧೆಯಲ್ಲಿ ಪಾವಗಡ ತಾಲ್ಲೂಕಿನ ನಿರಂಜನ್ ಪ್ರಥಮ, ಪಾವಗಡ ತಾಲ್ಲೂಕಿನ ಜೀವನ್ ದ್ವಿತೀಯ.
4×100 ರಿಲೇ ಕ್ರೀಡೆಯಲ್ಲಿ ಕೊರಟಗೆರೆ ತಾಲ್ಲೂಕಿನ ಮನು ಪ್ರಥಮ, ಕೊರಟಗೆರೆ ತಾಲ್ಲೂಕಿನ ಚರಣ್ ದ್ವಿತೀಯ.
ನಡಿಗೆ ಸ್ಪರ್ಧೆಯಲ್ಲಿ ಕೊರಟಗೆರೆ ತಾಲ್ಲೂಕಿನ ಶಿವಕುಮಾರ್ ಪ್ರಥಮ ಮಧುಗಿರಿ ತಾಲ್ಲೂಕಿನ ಯೋಗೀಶ ದ್ವಿತೀಯ.
ಶಾರ್ಟ್ ಪುಟ್ ಕ್ರೀಡೆಯಲ್ಲಿ ಮಧುಗಿರಿಯ ರಮೇಶ್ ಕುಮಾರ್ ಪ್ರಥಮ, ಶಿರಾ ತಾಲ್ಲೂಕಿನ ನಿತೀಶ್ ದ್ವಿತೀಯ.
ಎಂಬುದಾಗಿ ಫಲಿತಾಂಶ ಬಂದಿದೆ ಎಂದು
ಪಾವಗಡ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಸವರಾಜುರವರು ತಿಳಿಸಿದ್ದಾರೆ.

ವರದಿ. ಶ್ರೀನಿವಾಸಲು.ಎ