ಪಾವಗಡ ಅ 19: – ನಗರದ ಕಣಿವೆ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದಲ್ಲಿಂದು ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್ .ಚೌಡರೆಡ್ಡಿ ತೂಪಲ್ಲಿ ರವರು ಚುನಾವಣಾ ಪ್ರಚಾರ ಸಭೆಯನ್ನ ಏರ್ಪಡಿಸಿದ್ದರು.
ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅನುಭವಿ ನಾಯಕ ಆರ್.ಚೌಡರೆಡ್ಡಿ ತೂಪಲ್ಲಿ ರವರು ನಾನು ಕಳೆದ 6 ವರ್ಷಗಳ ಅಧಿಕಾರದ ಅವಧಿಯಲ್ಲಿ ಎಲ್ಲಿಯೂ ಕೂಡ ಶಿಕ್ಷಕರಿಗಾಗಲಿ, ಜನ ಸಾಮಾನ್ಯರಿಗಾಗಲಿ ಸುಳ್ಳು ಭರವಸೆಗಳನ್ನ ನೀಡಿಲ್ಲ. ಜೊತೆಗೆ ಕಾಲಹರಣ ಮಾಡದೆ ಸದಾ ಜನ ಸೇವೆಯಲ್ಲಿ ತಲ್ಲಿನ ನಾದವನು ಆಗಾಗಿ ಮತ್ತೊಮ್ಮೆ ಬುದ್ದಿವಂತ ಮತದಾರರು ಕೈ ಹಿಡಿದು ಆಶೀರ್ವಾದ ಮಾಡಿದರೆ ಇನ್ನಷ್ಟು ಸೇವೆ ಸಲ್ಲಿಸೊ ಯೋಜನೆಗಳನ್ನ ಹೊಂದಿದ್ದೇನೆ ಎಂದರು.
ಮೋದಿ ಸರ್ಕಾರ ೨ ಕೋಟಿ ಮಂದಿಗೆ ಉದ್ಯೋಗ ಸೃಷ್ಟಿಸುವುದಾಗಿ ನಂಬಿಸಿ ಹುಸಿ ಮಾಡಿದರು.ಆದರೆ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿಯವರು ತಮ್ಮ 20 ತಿಂಗಳ ಸಮ್ಮಿಶ್ರ ಸರ್ಕಾರದಲ್ಲಿ ರೈತರನ್ನ ಒಳಗೊಂಡಂತೆ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ ಕೀರ್ತಿ ಅವರದ್ದಾಗಿದೆ. ಆಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿ ನಮ್ಮ ಪಕ್ಷದ ಸಾಧನೆಗಳನ್ನ ತಿಳಿಸಿ ಎಂದು ಸಲಹೆ ನೀಡಿದರು.
ಒಟ್ಟಾರೆಯಾಗಿ ಜನಮೆಚ್ಚಿದ ನಾಯಕನಾಗಿ ತಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಸೇವೆ ಮಾಡಿ ಚಾಣಕ್ಯ ಆಡಳಿತಗಾರನೆನಿಸಿದ್ದ ಚೌಡರೆಡ್ಡಿ ತೂಪಲ್ಲಿಯವರನ್ನು ಗೆಲ್ಲಿಸಿದರೆ ಯುವಕರಿಗೆ ಉದ್ಯೋಗ , ಶಿಕ್ಷಕರಿಗೆ ವಿಶೇಷ ಸವಲತ್ತು ಕೊಡಿಸುವಲ್ಲಿ ಸೂಕ್ತನಾಯಕ ಅನ್ನೋ ಲೆಕ್ಕಚಾರವಂತೂ ಬುದ್ದಿಜೀವಿಗಳಲ್ಲಿ ನಡೆಯುತ್ತಿದೆ.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ ಸಿ. ಅಂಜಿನಪ್ಪ, ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ತಾಲ್ಲೂಕು ಅಧ್ಯಕ್ಷ ಬಲರಾಮರೆಡ್ಡಿ, ಮುಖಂಡರಾದ ಗೋವಿಂದ ಬಾಬು, ಶಿವಣ್ಣ, ಗೊರ್ತಿ ನಾಗರಾಜು, ಮನು ಮಹೇಶ್ ಸೇರಿದಂತೆ ಹಲವರಿದ್ದರು
ವರದಿ: ನವೀನ್ ಕಿಲಾರ್ಲಹಳ್ಳಿ