ಜಯ ಮಂಗಲಿ ನದಿ ಮೈದುಂಬಿ ಅರಿಯುತ್ತಿರುವುದರಿಂದ ಮಧುಗಿರಿ ತಾಲೂಕಿನ ಕೆಲವು ಗ್ರಾಮಗಳು ಜಲಾವೃತಗೊಂಡಿರುವುದನ್ನು ತಿಳಿದ ತಕ್ಷಣ ಜಿಲ್ಲಾಧಿಕಾರಿಗಳ ಬೇಟಿ…….
ಮಧುಗಿರಿ ತಾಲೂಕಿ ನಲ್ಲಿ ಜಯ ಮಂಗಲಿ ನದಿಯು ಮೈದುಂಬಿ ಹರಿಯುತ್ತಿರುವುದರಿಂದ ಮಧುಗಿರಿ ತಾಲೂಕಿನ ಗುರವರ ಹೋಬಳಿಯ ಚೆನ್ನಸಾಗರ ಗ್ರಾಮ ಜಲಾವೃತಗೊಂಡಿರುವುದು ಮನೆಗಳಿಗೆ ನೀರು ನುಗ್ಗಿರುವುದರಿಂದ ವಿಷಯ ತಿಳಿದ ಕೂಡಲೇ ಆ ಗ್ರಾಮಕ್ಕೆ ತಕ್ಷಣ ಭೇಟಿ ನೀಡಿದ ಮಧುಗಿರಿ ಉಪ ವಿಭಾಗ ಅಧಿಕಾರಿಗಳಾದ ಸೋಮಪ್ಪ ಕಡಕೋಳ ರವರು ಹಾಗೂ ತಹಶೀಲ್ದಾರ್ರಾದ ಟಿ ಎಸ್ ಸುರೇಶಚಾರ್ರು ಗ್ರಾಮಕ್ಕೆ ಭೇಟಿ ನೀಡಿ ಜಲಾವೃತಗೊಂಡಿರುವುದನ್ನು ಜೆಸಿಪಿಗಳ ಮುಖಾಂತರ ಕಾಲುವೆಗಳನ್ನು ಮಾಡಿಸಿ ನೀರನ್ನು ಅರಿಬಿಟ್ಟರು
ಈ ವಿಷಯ ತಿಳಿದ ತಕ್ಷಣ ತುಮಕೂರು ಜಿಲ್ಲಾಧಿಕಾರಿಗಳಾದ ವೈ ಎಸ್ ಪಾಟೀಲ್ ವಿಶೇಷ ಜಿಲ್ಲಾಧಿಕಾರಿಗಳಾದ ಚನ್ನಬಸಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್ ಶಹಪುರ್ರವರು ಡಿವೈಎಸ್ಪಿ ವೆಂಕಟೇಶ್ ನಾಯ್ಡು ಪಿ ಆರ್ ಈಡಿ ಸಹಾಯಕ ಕಾರ್ಯ ಪಾಲಕ್ ಇಂಜಿನಿಯರ್ ಆದ ಸುರೇಶ್ ಹಾಗೂ ಕೊಡಿಗೆನಹಳ್ಳಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ನಾಗರಾಜ್ ಪೊಲೀಸ್ ಸಿಬ್ಬಂದಿಗಳು ಕಂದಾಯ ತನಿಖಾ ಅಧಿಕಾರಿಗಳು .
ಗ್ರಾಮ ಲೆಕ್ಕಿಗರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಲ್ಲರೂ ಸ್ಥಳದಲ್ಲಿ ಹಾಜರಿದ್ದರು
ಜಯಮಂಗಲಿ ನದಿ ತುಂಬಿ ಹರಿಯುವುದರಿಂದ ಕೊಡಗೇನಹಳ್ಳಿ ಹೋಬಳಿಯ ಸೂರ್ಯ ನಾಗೇನಹಳ್ಳಿ ಗ್ರಾಮಕ್ಕೆ ನೀರು ರಭಸವಾಗಿ ಮನೆಗಳಿಗೆ ನುಗ್ಗಿ ಸಾರ್ವಜನಿಕರು ಮನೆಗಳಿಂದ ಹೊರಬರಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೂರ ನಾಗೇನಹಳ್ಳಿ ಗ್ರಾಮ ರಸ್ತೆ ಕಡಿದು ಹೋಗಿದ್ದು ಮ ರಸ್ತೆ ಸಂಚಾರ ಮಾಡಲು ಆಗುತ್ತಿಲ್ಲ
ರೆಡ್ಡಿ ಹಳ್ಳಿ ಗ್ರಾಮವು ಸಹ ನದಿಯ ನೀರಿನಿಂದ ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತ ವಾಗಿದೆ
ಶಾಲಾ – ಮಕ್ಕಳು ಕಾಲೇಜಿ- ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದ್ದು ಇದನ್ನು ಗಮನಿಸಿದ ಜಿಲ್ಲಾ ಆಡಳಿತ ತತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಗಳು, ತಾಲ್ಲೂಕು ಆಡಳಿತಕ್ಕೆ ಸೂಚಿಸಿದರು.
ನದಿಯ ನೀರು ಗ್ರಾಮಕ್ಕೆ ಹರಿದು ಬರದಿರಲು ಜೆಸಿಬಿಗಳ ಮುಖಾಂತರ ನದಿಯ ದಡಕ್ಕೆ ಮಣ್ಣು ಹಾಕಿಸಿ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ನದಿಯ ದಡದಲ್ಲಿ ವಾಸ ಮಾಡುವ ಕುಟುಂಬಗಳಿಗೆ ಎಚ್ಚರ ದಿಂದ ಇರಲು ಸೂಚನೆಗಳನ್ನು ನೀಡಿದ್ದಾರೆ
ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು