ವಿ.ಎಸ್.ಎಸ್.ಎನ್ ಚುನಾವಣೆ
ವೈ.ಎನ್.ಹೊಸಕೋಟೆ : ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಭಾನುವಾರದಂದು ಆಡಳಿತ ಮಂಡಲಿಯ ಚುನಾವಣೆ ನಡೆಯಿತು.
ಒಟ್ಟು ೧೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ ಸಾಮಾನ್ಯ ವರ್ಗದ ೫ ಸ್ಥಾನಗಳಿಗೆ ಟಿ.ವಿ.ವೆಂಕಟೇಶ್, ವೈ.ಸತ್ಯನಾರಾಯಣಪ್ಪ, ಪಿ.ಹೆಚ್.ಶಿವಾನಂದರೆಡ್ಡಿ, ಷಂಶುದ್ಧೀನ್ ಮತ್ತು ಎಂ.ಜಿ.ಪಾತಣ್ಣ, ಸಾಮಾನ್ಯ ವರ್ಗದ ೨ ಮಹಿಳಾ ಸ್ಥಾನಗಳಿಗೆ ಲಲಿತಮ್ಮವೆಂಕಟೇಶ್(ಯಾದಗಿರಿ) ಮತ್ತು ರತ್ನಮ್ಮಬಲರಾಮನಾಯಕ, ಪರಿಶಿಷ್ಟ ಪಂಗಡದ ಸಾಮಾನ್ಯ ವರ್ಗದ ೧ ಸ್ಥಾನಕ್ಕೆ ಹೆಚ್.ಓ.ಗೋಪಾಲ, ಹಿಂದುಳಿದ ವರ್ಗದ ೨ ಸಾಮಾನ್ಯ ಸ್ಥಾನಗಳಿಗೆ ರಾಮಾಂಜಿನಪ್ಪ ಮತ್ತು ಕೋನೇರಪ್ಪ ರವರು ಚುನಾಯಿತರಾದರು. ಪರಿಶಿಷ್ಠ ಜಾತಿ ವರ್ಗದ ಸ್ಥಾನಕ್ಕೆ ದುರ್ಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಯು ಸ್ಪರ್ಧಿಸಿಲ್ಲದ ಕಾರಣ ಆ ಸ್ಥಾನ ಖಾಲಿ ಉಳಿದಿದೆ ಎಂದು ಚುನವಣಾಧಿಕಾರಿ ಸೌಮ್ಯ ರವರು ಘೋಷಿಸಿದರು.
೧೦ ಜನ ಆಡಳಿತ ಮಂಡಲಿಯ ನಿರ್ದೇಶಕರ ಸ್ಥಾನಕ್ಕೆ ಒಟ್ಟು ೧೮ ಜನರು ಸ್ಪರ್ಧಿಸಿದ್ದರು. ಒಟ್ಟು ೧೨೯ ಮತಗಳ ಪೈಕಿ ೧೨೮ ಮತಗಳು ಚಲಾವಣೆಗೊಂಡು, ೨೩ ಮತಗಳು ಅಸಿಂಧು ಮತಗಳಾದವು.