ಅದ್ದೂರಿಯಾಗಿ ನಡೆದ 535 ನೇ ಕನಕ ಜಯಂತಿ.
ಪಾವಗಡ.. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕನಕದಾಸರ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಕನಕದಾಸರ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮಾಡಲಾಯಿತು. ಸಾವಿರಾರು ಕುರುಬ ಜನಾಂಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಟ್ಟಣದ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ರೊಪ್ಪಕ್ಕೆ ಹೋಗಿ ರೊಪ್ಪದಿಂದ ತುಮಕೂರು ರಸ್ತೆಯಲ್ಲಿರುವ ಕನಕದಾಸರ ಪ್ರತಿಮೆಯ ಬಳಿ ಜಾತ ಸಮಾಪ್ತಿಗೊಂಡಿತು.. ರಸ್ತೆಗಳೆಲ್ಲವೂ ಜನರಿಂದ ತುಂಬಿ ತುಳುಕುತ್ತಿದ್ದವು.
ಪುಷ್ಪಾಲಂಕೃತಗೊಂಡ ತೆರದ ವಾಹನದಲ್ಲಿ ಕನಕದಾಸರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಗೊಂಬೆ ಕುಣಿತ, ವೀರಗಾಸೆ, , ಕರಡಿ ಮಜಲು, ಹಳ್ಳಿ ವಾದ್ಯ, ಡ್ರಮ್‌ಸೆಟ್ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು. ಜಾತಾದಲ್ಲಿ ಪಾಲ್ಗೊಂಡಿದ್ದ ಹಲವಾರು ಮಹಿಳೆಯರು ಮಕ್ಕಳು, ಪುರುಷರು, ಕುರುಬರೂ ನಾವು ಕುರುಬರೂ ಎಂಬ ನೃತ್ಯಕ್ಕೆ ವಾದ್ಯಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ತಹಶೀಲ್ದಾರ್ ವರದರಾಜು, ಪುರಸಭೆಯ ಮುಖ್ಯ ಅಧಿಕಾರಿ ಜಗರೆಡ್ಡಿ, , ಆರ್.ಐ ರಾಜಗೋಪಾಲ್, ಪುರಸಭೆ ಮಾಜಿ ಸದಸ್ಯ ಮನು ಮಹೇಶ್, ಕಾರ್ಪೊರೇಷನ್ ಬ್ಯಾಂಕ್ ಸುರೇಶ್, ಚನ್ನಮಲ್ಲಯ್ಯ, ಶೇಷಗಿರಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ, ಕಿರಣ್ ಕುಮಾರ್ ಎಂ, ಗಿರೀಶ್ ಮುಂತಾದವರು ಕಾರ್ಯಕ್ರಮದ ಜಾಥ ದಲ್ಲಿ ಪಾಲ್ಗೊಂಡಿದ್ದರು