02 0011 scaled

ಪಾವಗಡ:ಪುರಸಭೆ ಪ್ರಗತಿ ಪರಿಶೀಲನಾ ಸಭೆ…!

DISTRICT NEWS ತುಮಕೂರು

ಪುರಸಭಾ ಅಧಿಕಾರಿಗಳಿಗೆ ತರಾಟೆ…………… ಪಾವಗಡ. ಪಟ್ಟಣದ ಪುರಸಭಾ ಕಚೇರಿಯಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಿರುವುದನ್ನು ಗಮನಿಸಿದ ಶಾಸಕ ವೆಂಕಟರಮಣಪ್ಪ ಪುರಸಭೆಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಪುರಸಭಾ ಅಧಿಕಾರಿಗಳು ಪಂಪ್ ರಿಪೇರಿ, ಮೋಟಾರ್ ರಿಪೇರಿ, ಜೆಸಿಬಿ ರಿಪೇರಿ ಹೆಸರಿನಲ್ಲಿ ಮನಬಂದಂತೆ ಬಿಲ್ ಗಳನ್ನು ಮಾಡಿ ಅಕ್ರಮಗಳನ್ನ ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಶಾಸಕರು ಪುರಸಭೆ ಅಧಿಕಾರಿಗಳ ವಿರುದ್ಧ ಗರಂ ಆದರು. ಪಂಪ್, ಮೋಟರ್ ದುರಸ್ತಿಗಾಗಿ 5.64 ಲಕ್ಷ ರೂ ಖರ್ಚು ಮಾಡಿರುವುದಾಗಿ ಅಧಿಕಾರಿಗಳು ಹೇಳುತ್ತಿರುವುದು ಅನುಮಾನಕ್ಕೆ ಆಸ್ಪದ ನೀಡದಂತೆ ಎಂದರು. ನನಗೆ ಸ್ವಂತ 20 ವಾಹನಗಳಿವೆ ಅವುಗಳಿಗೆ ಎಷ್ಟು ಖರ್ಚು ಬರಬಹುದೆಂದು ಅರಿವು ನನಗಿದೆ ಎಂದರು.

ಪುರಸಭೆ ಅಧಿಕಾರಿಗಳು ಅನಾವಶ್ಯಕವಾಗಿ ಜನರ ತೆರಿಗೆ ಹಣವನ್ನು ಮನಬಂದಂತೆ ಖರ್ಚು ಮಾಡುತ್ತಿದ್ದಾರೆ, ದುರಸ್ತಿ ಕೆಲಸಗಳನ್ನು ಮಾಡಿಸಬೇಕಾದರೆ ಆಯಾ ಬಡಾವಣೆಯ ಸದಸ್ಯರಿಗೆ ಮಾಹಿತಿ ನೀಡಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಪ್ರತಿ ವಾರ್ಡಿನಲ್ಲಿ ರಸ್ತೆ, ಚರಂಡಿ, ಇತ್ಯಾದಿ ಕೆಲಸಗಳ ಬಗ್ಗೆ ಮಾಹಿತಿ ಪಟ್ಟಿಮಾಡಿ, ಪ್ರತಿ ವಾರ್ಡ್ ಕಾಮಗಾರಿಗಳಿಗಾಗಿ 20ಲಕ್ಷರೂ ಮೀಸಲಿಡಲಾಗುವುದು ಎಂದರು.. ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯರಾದ ಪಿಎಚ್ ರಾಜೇಶ್, ಎಂ. ಎ. ಜಿ ಇಮ್ರಾನ್, ಬಾಲಸುಬ್ರಮಣ್ಯಂ , ಪುರಸಭೆ ಅಧಿಕಾರಿಗಳು ಸದಸ್ಯರ ಗಮನಕ್ಕೆ ತಾರದೆ ದುರಸ್ತಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಶಾಸಕರಿಗೆ ತಿಳಿಸಿದರು..