ಚಿಕ್ಕಬಳ್ಳಾಪುರ ಮೇ ೭- ಕೊರೊನಾ ಸೋಂಕಿತರ ಮನೆಗಳಿರುವ ಚಿಕ್ಕಬಳ್ಳಾಪುರ ನಗರದ 17ನೇ ವಾರ್ಡ, 12ನೇ ವಾರ್ಡ ಸೇರಿದಂತೆ ಸುತ್ತಮುತ್ತಲಿರುವ ವಾರ್ಡಗಳನ್ನು ಸಿಲ್ ಡೌನ್ ಮಾಡಿ ಕೊರೊನಾ ಸೋಂಕು ಹರಡದಂತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುಂಜಾಗೃತಾ ಕ್ರಮ ಕೈಗೊಂಡ ಕಾರಣ ಜನರಿಗೆ ಅಗತ್ಯ ವಸ್ತುಗಳನ್ನು ಮನೆ ಮನೆ ವಿತರಿಸಲಾಗಿದೆ, ಮತ್ತೊಂದೆಡೆ ಕೆಲ ವರ್ತಕರು ಅಗತ್ಯ ವಸ್ತುಗಳನ್ನು ಮನೆ ಮನೆಗೆ ಸರಬರಾಜು ಮಾಡಲು ಅವಕಾಶ ಕಲ್ಪಿಸಲಾಗಿದೆ,ಆದ್ರೆ
ಮಧ್ಯಾಹ್ನ ದ ನಂತರ ಸಿಲ್ ಡೌನ್ ಏರಿಯಾದಲ್ಲಿ ಹಾಲಿನ ಅವಶ್ಯಕತೆ ಮನಗಂಡ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ, ಕೆ.ಎಮ್.ಎಪ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕಾಂತರಾಜು
ದಾನವಾಗಿ ನೀಡಿದ 1200 ಪಾಕೇಟ್ ನಂದಿನಿ ಗುಡ್ ಲೈಪ್ ಹಾಲನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಎ.ಡಿ.ಜಿ,ಪಿ ಪಿ.ಎಸ್.ಸಂದು, ಕೇಂದ್ರ ವಲಯ ಐ.ಜಿ.ಪಿ ಶರತ್ ಚಂದ್ರ, ಚಿಕ್ಕಬಳ್ಳಾಪುರ
ಜಿಲ್ಲಾ ಎಸ್ಪಿ ಮಿಥುನ್ ಕುಮಾರ್, ಚಿಕ್ಕಬಳ್ಳಾಪುರ ಉಪ ವಿಭಾಗಾದ ಡಿ.ವೈ.ಎಸ್ಪಿ ರವಿಶಂಕರ್, 17ನೇ ವಾರ್ಡಗೆ ಭೇಟಿ ನೀಡಿದಾಗ… ಕಾಂತರಾಜು ನೀಡಿದ ಹಾಲನ್ನು ವಾರ್ಡನ ನಿವಾಸಿ
ಮಹಿಳೆಯರಿಗೆ ವಿತರಣೆ ಮಾಡಿದ್ರು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ವಿತರಿಸಿದ ಹಾಲನ್ನು ಮೂರು ತಿಂಗಳ ವರೆಗೂ ಮನೆಯಲ್ಲಿ ಪ್ರೀಡ್ಜ್ ಇಲ್ಲದೆ ಇಟ್ಟುಕೊಳ್ಳಬಹುದು. ಇದ್ರಿಂದ ಹಾಲು ಸ್ವೀಕರಿಸಿದ ಮಹಿಳೆಯರು, ಪೊಲೀಸರು ಹಾಗೂ ಕೆ.ಎಮ್.ಎಫ್ ನಿರ್ಧೇಶಕ ಕಾಂತರಾಜುಗೆ ಕೃತಜ್ಞತೆ ಸಲ್ಲಿಸಿದ್ರು