*ಪಟ್ಟಣದ ದಂಡಿ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಕೆ ಎನ್ ರಾಜಣ್ಣ*……
ಮಧುಗಿರಿ.ಪಟ್ಟಣದ ಪ್ರತಿಯೊಬ್ಬ ನಾಗರಿಕರು ಕೂಡ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸ್ವಚ್ಛ ಮಧುಗಿರಿಗೆ ಮುನ್ನಡಿ ಬರೆಯಬೇಕೆಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.
ಇತಿಹಾಸ ಪ್ರಸಿದ್ಧ ಶ್ರೀ ದಂಡಿ ಮಾರಮ್ಮ ದೇವಸ್ಥಾನದ ಅ ವರಣದಲ್ಲಿ ಸೋಮವಾರ ಸ್ವಚ್ಛ ಮದುಗಿರಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ಪ್ರತಿ ವರ್ಷವೂ ಸಹ ಸ್ವತಂತ್ರ ದಿನಾಚರಣೆಯ ಮುನ್ನ ದಿನ ಈ ರೀತಿಯ ಸ್ವಚ್ಛತೆ ಅಭಿಯಾನವನ್ನು ಆರಂಭಿಸಬೇಕು. ಮುಂಬರುವ ಗಣರಾಜ್ಯೋತ್ಸವ ದಿನದಂದು ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.
ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಅತಿ ಮುಖ್ಯವಾಗಿ ತಾಲೂಕ್ ಆಡಳಿತ ಅತಿ ಹೆಚ್ಚು ಶ್ರಮವಹಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಲ್ಲಾ ಅಧಿಕಾರಿಗಳು ಕೂಡ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅದೇ ರೀತಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
ಈ ಕಾರ್ಯಕ್ರಮದಲ್ಲಿ ಸುಮಾರು 1700 ವಿದ್ಯಾರ್ಥಿಗಳ ಜೊತೆಗೆ ಸಾರ್ವಜನಿಕರು ಜನಪ್ರತಿನಿಧಿಗಳು ಅಧಿಕಾರಿಗಳು ಭಾಗಿಯಾಗಿದ್ದರು. ಇಂದು ಮಧುಗಿರಿ ಪಟ್ಟಣವನ್ನು ಸದಾ ಕಾಲ ಸ್ವಚ್ಛವಾಗಿಸಿಕೊಳ್ಳುವ ಅಭಿಯಾನ ಕಾರ್ಯಕ್ರಮ ಮುಂದುವರಿಸಬೇಕು ಎಂದರು.
ಸ್ವಚ್ಛತಾ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿ ಶ್ರೀನಿವಾಸ್ ರವರು ಮಾತನಾಡಿ ಸಹಕಾರಿ ಸಚಿವ ಕೆ ಎನ್ ರಾಜಣ್ಣನವರು ಸ್ವಚ್ಛ ಮಧುಗಿರಿ ಅಭಿಯಾನಕ್ಕೆ ಕರೆ ನೀಡಿದ್ದು . ಈ ಅಭಿಯಾನ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿರುವುದು ಸಂತಸದ ವಿಚಾರ. ತಾವೆಲ್ಲರೂ ಕೂಡ ಸ್ವಚ್ಛತೆಯ ಕಡೆಗೆ ಗಮನಹರಿಸಬೇಕು ಸ್ವಚ್ಛತೆ ಮಹಾತ್ಮ ಗಾಂಧೀಜಿಯವರ ಕನಸು ಕೂಡ. ಹಾಗೆಯೇ ಸಚಿವರ ಕಾರ್ಯವೈಖರಿ ನಮ್ಮೆಲ್ಲರಿಗೂ ಮಾದರಿಯಾಗಿದ್ದು ಅವರು ಸ್ವಚ್ಛತೆಯ ಅಭಿಯಾನದ ಕರೆಗೆ ಓಗೊಟ್ಟು ಎಲ್ಲರೂ ಭಾಗವಹಿಸಿದ್ದೇವೆ. ಸರ್ಕಾರಿ ಕಚೇರಿಗಳು ಶಾಲಾ ಕಾಲೇಜುಗಳು ವಸತಿ ನಿಲಯಗಳು ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಚರಂಡಿಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗದಂತೆ ಎಚ್ಚರ ವಹಿಸಲಾಗುವುದು. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗದಿದ್ದರೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರಲಿದೆ. ಈ ಕಾರ್ಯಕ್ರಮ ಮಧುಗಿರಿಗೆ ಸೀಮಿತವಾಗದೆ ರಾಜ್ಯ ಮತ್ತು ಎಲ್ಲಾ ಜಿಲ್ಲೆಗಳಿಗೂ ವಿಸ್ತಾರವಾಗಬೇಕು ಎಂದರು ಸಹಹಮ್ಮಿಕೊಳ್ಳಲಾಗುವುದು
ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಪ್ರಭು ಮಾತನಾಡಿ ಮದುಗಿರಿ ಸ್ವಚ್ಛತೆ ಅಭಿಯಾನದಲ್ಲಿ ಎಲ್ಲರೂ ಕ್ರಿಯಾಶೀಲರಾಗಿ ಕೆಲಸ ಮಾಡಲು ಭಾಗವಹಿಸಿದ್ದು ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸ್ವಚ್ಛತೆ ಮತ್ತು ಶುಚಿತ್ವ ದೈವಕ್ಕೆ ಸಮ ಎಂದು ಮಹಾತ್ಮ ಗಾಂಧೀಜಿ ಹೇಳಿದ ಮಾತು. ಇನ್ನು ಗ್ರಾಮಗಳಲ್ಲಿಯೂ ಕೂಡ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಲ್ಲಾ ವಸತಿ ನಿಲಯಗಳಲ್ಲಿಯೂ ಶುದ್ಧ ಕುಡಿಯುವ ನೀರಿಗೆ ಕ್ರಮ ಕೈಗೊಳ್ಳಲಾಗಿದೆ ಜಿಲ್ಲೆಯಲ್ಲಿ ಎಂಟು ಲಕ್ಷ ಮೀಟರ್ ಚರಂಡಿಗಳ ಅತ್ಯವಶ್ಯಕತೆ ಇದ್ದು ಮುಂದಿನ ದಿನಮಾನಗಳಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಚರಂಡಿಗಳನಿರ್ಮಾಣ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಮಾದರಿ ಮಧುಗಿರಿಗೆ ಮುನ್ನೋಡಿಬರೆಯುತ್ತಿರುವುದು ಇದೊಂದು ಅತ್ಯಂತ ಉತ್ತಮ ಕಾರ್ಯವಾಗಿದ ಈ ಯೋಜನೆ ಜಿಲ್ಲೆಯಾದ್ಯಂತವಿಸ್ತರಿಸಬೇಕು ಎಂದರು.
ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ರಾಜಣ್ಣ .ಎಸ್ ಪಿ ರಾಹುಲ್ ಕುಮಾರ್ ಶಹಪುರ್. ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷಣಿಯಾದ ಆರ್ ಶಾಂತಲಾ ರಾಜಣ್ಣ. ಉಪ ವಿಭಾಗಾಧಿಕಾರಿ ರಿಷಿಆನಂದ್. ತಹಶೀಲ್ದಾರ್ ಸಿಗಬತವುಲಾ. ಕಾರ್ಯನಿರ್ವಹಣಾಧಿಕಾರಿ ಬಿ. ಎಸ್ ಲಕ್ಷ್ಮಣ್. ಪುರಸಭೆಯ ಮುಖ್ಯ ಅಧಿಕಾರಿ ನಜ್ಮಾ. ಆರೋಗ್ಯ ಆಡಳಿತ ಅಧಿಕಾರಿ ರಮೇಶ್ ಬಾಬು. ಪಿಡಬ್ಲ್ಯೂಡಿ ಕಾರ್ಯ ಪಾಲಕಇಂಜಿನಿಯರ್ ಸುರೇಶ್ ಜಿ. ಸಹಾಯಕ ಕಾರ್ಯಪಲಕ ಇಂಜಿನಿಯರ್ ರಾಜಗೋಪಾಲ್ ಎಸ್. ಸಿ. ಗ್ರಾಮೀಣ ಕುಡಿಯುವ ನೀರಿನ ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಲೋಕೇಶ್. ಬಿಇಓ ಹನುಮಂತರಾಯಪ್ಪ. ಸಹಾಯಕ ಕೃಷಿ ನಿರ್ದೇಶಕ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಮಂಜುನಾಥ್.ಹನುಮಂತರಾಯಪ್ಪ.ಕೆಪಿಸಿಸಿ ಸದಸ್ಯರಾದ ಎಂ ಎಸ್ ಮಲ್ಲಿಕಾರ್ಜುನಯ್ಯ ಸಹಕಾರಿ ಮಂಡಲದ ಸದಸ್ಯರಾದ ಎನ್ ಗಂಗಣಿ. ಮಾಜಿ ಪುರಸಭಾ ಅಧ್ಯಕ್ಷರಾದ ಎಂ ಕೆ ನಂಜುಂಡಯ್ಯ ರಾಜ್ಯ ಹಾಲು ಒಕ್ಕೂಟ ಮಹಾಮಂಡಳಿಯ ಸದಸ್ಯರಾದ ಕಾಂತರಾಜು. ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳುಹಾಗೂ ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಪಿಡಿಓಗಳು ಸದಸ್ಯರುಗಳು.ಬೆಸ್ಕಾಂ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಬೆಸ್ಕಾಂ ವಿದ್ಯಾರ್ಥಿಗಳು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ ಲಕ್ಷ್ಮಿಪತಿ ದೊಡ್ಡ ಯ ಲ್ಕೂರು.