ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ……..
ಪಾವಗಡ. ತಾಲೂಕಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಕಲ ಸಿದ್ಧತೆಗಳು ನಡೆದಿದ್ದು. ಏಪ್ರಿಲ್ 22ರಿಂದ 18 ರ ವರೆಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆಂದು,. ಪಾವಗಡ ಟೌನಿನ 1. ಸರ್ಕಾರಿ ಪದವಿ ಪೂರ್ವ ಕಾಲೇಜು. 2.ವಿವೇಕಾನಂದ ಪದವಿ ಪೂರ್ವ ಕಾಲೇಜು. 3. ಎಸ್ ಎಸ್ ಕೆ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಾಗಿದ್ದು ಮೊದಲ ದಿನದ ತರ್ಕಶಾಸ್ತ್ರ /ವ್ಯವಹಾರ ಅಧ್ಯಯನ ಪರೀಕ್ಷೆಗೆ ಮೂರು ಕೇಂದ್ರಗಳಿಂದ ಒಟ್ಟು 816 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂಬ ಮಾಹಿತಿ ಕಾಲೇಜಿನ ಮೂಲಗಳಿಂದ ತಿಳಿದುಬಂದಿದೆ,. 1. ಎಸ್ ಎಸ್ ಕೆ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯ ಮುಖ್ಯ ಅಧೀಕ್ಷಕಿಯಾದ ಸೀತಾಲಕ್ಷ್ಮಿ ಮಾತನಾಡುತ್ತಾ, ಪರೀಕ್ಷೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಕೇಂದ್ರದಲ್ಲಿ ಮೊದಲ ದಿನದ ಪರೀಕ್ಷೆಗೆ 194 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಮಾರ್ಗದರ್ಶನದಂತೆ ಪರೀಕ್ಷೆ ನಡೆಯಲಿದೆ , ಪರೀಕ್ಷಾ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಲಾಗಿದೆ ಎಂದು ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸಲಾಗುವುದು ಎಂದರು. 2. ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯ ಮುಖ್ಯ ಅಧೀಕ್ಷಕರಾದ ರಾಮಕೃಷ್ಣಪ್ಪ ಮಾತನಾಡುತ್ತಾ, ನಮ್ಮ ಕೇಂದ್ರದಲ್ಲಿ ಮೊದಲ ದಿನದ ಪರೀಕ್ಷೆಗೆ 382 ವಿದ್ಯಾರ್ಥಿಗಳು ನೊಂದಣಿ ಯಾಗಿರುವುದಾಗಿ, ಇಲಾಖೆಯ ಮಾರ್ಗದರ್ಶನದಂತೆ ಪರೀಕ್ಷಾ ಕೊಠಡಿಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ತಿಳಿಸಿದರು. 3. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ ಮುಖ್ಯ ಶಿಕ್ಷಕರಾದ ಮುದ್ದಯ್ಯ ಮಾತನಾಡುತ್ತಾ, ತಮ್ಮ ಕೇಂದ್ರದಲ್ಲಿ 240 ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆ ಬರೆಯಲಿದ್ದಾರೆ ಎಂದು, ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆಯಲ್ಲಿ ತಿಳಿಸಿರುವಂತೆ, ಯಾವುದೇ ವಿದ್ಯಾರ್ಥಿ ಹಿಜಾಬ್ ಅಥವಾ ಯಾವುದೇ ಧಾರ್ಮಿಕ ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗುವಂತಿಲ್ಲ ಎಂಬ ನಿಯಮವನ್ನು ಪಾಲಿಸುವುದಾಗಿ ತಿಳಿಸಿದರು, ಪರೀಕ್ಷೆಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕ್ರಮಗಳು ಕೈಗೊಂಡಿದ್ದಾಗಿ ತಿಳಿಸಿದರು. ಪರೀಕ್ಷಾ ವ್ಯವಸ್ಥೆಯ ಅವಲೋಕಿಸುವ ದೃಷ್ಟಿಯಿಂದ ಇಲಾಖೆ ಜಾಗೃತ ದಳವನ್ನು ನೇಮಕ ಮಾಡಲಾಗಿದೆ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿರುವ ಗೆ ತಿಳಿಸಿದರು.