IMG 20230319 WA0110

ಪಾವಗಡ: ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಕಳಚಿದೆ – ಕೆ.ಪಿ.ಸಿ.ಸಿ ವಕ್ತಾರ ನಿಖಿತ್ ರಾಜ್

DISTRICT NEWS ತುಮಕೂರು

ತಾಲೂಕನ್ನು ಸೋಲಾರ್ ಸಿಟಿ ಯನ್ನಾಗಿ ಮಾಡಿದ ಕೀರ್ತಿ ಕಾಂಗ್ರೆಸ್ಸಿಗೆ ಸಲ್ಲುತ್ತದೆ. ಶಾಸಕ ವೆಂಕಟರಮಣಪ್ಪ.
ಪಾವಗಡ : ಏಷ್ಯಾದಲ್ಲಿಯೇ ಅತಿ ದೊಡ್ಡ ಸೋಲಾರ್ ಪಾರ್ಕನ್ನು ತಾಲೂಕಿಗೆ ತಂದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದು, ಭಾನುವಾರ ಪಟ್ಟಣದ ಎಸ್. ಎಸ್. ಕೆ ರಂಗಮಂದಿರದಲ್ಲಿ ಯೂತ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಶಾಸಕ ವೆಂಕಟರಮಣಪ್ಪ ಮಾತನಾಡಿದರು.
ತಾಲೂಕಿನಲ್ಲಿ ತಾನು ಮಾಡಿದ ಅಭಿವೃದ್ಧಿಯ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ತನ್ನ ಪುತ್ರ ಎಚ್ ವಿ ವೆಂಕಟೇಶ್ ಅವರನ್ನು ಗೆಲ್ಲಿಸಬೇಕೆಂದರು.
ಜೆ.ಡಿ.ಎಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಯಾವುದೇ ಅಭಿವೃದ್ಧಿ ಕೆಲಸ ಮಾಡಿದೆ , ಈಗ ಹೋದಲ್ಲೆಲ್ಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ಅವರ ನಾಟಕವನ್ನು ರಾಜ್ಯದ ಜನರು ನಂಬುವ ಸ್ಥಿತಿಯಲ್ಲಿಲ್ಲ ಎಂದರು.
ತಾಲೂಕಿನಲ್ಲಿ ತಿಮ್ಮರಾಯಪ್ಪ ಶಾಸಕರಾಗಿದ್ದಾಗ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಈಗ ಚುನಾವಣೆ ಬರುತ್ತಿರುವುದರಿಂದ ಜನರಿಗೆ ಬರೀ ಸುಳ್ಳಿನ ಭರವಸೆ ನೀಡುತ್ತಿದ್ದಾರೆ ಎಂದರು.
ಅದೇ ರೀತಿ ಬಿಜೆಪಿ ಸರ್ಕಾರ 40% ಸರ್ಕಾರ ಎಂಬುದು ಜನರಿಗೆ ತಿಳಿದಿದ್ದು, ಡಬಲ್ ಇಂಜಿನ್ ಸರ್ಕಾರವಿದ್ದರೂ ರಾಜ್ಯಕ್ಕೆ ಯಾವುದೇ ಅನುಕೂಲವಾಗಿಲ್ಲವೆಂದರು.

IMG 20230319 WA0107

ಕಾರ್ಯಕ್ರಮ ಉದ್ದೇಶಿಸಿ ಎಚ್ .ವಿ. ವೆಂಕಟೇಶ್ ಮಾತನಾಡಿ,
ಯುವಕರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದು, ದೇಶದ ಭವಿಷ್ಯ ಯುವಶಕ್ತಿಯ ಮೇಲಿದೆ ಎಂದರು.
ತಾಲೂಕಿನ ಜನರು ಈ ಬಾರಿ ತನ್ನನ್ನು ಗೆಲ್ಲಿಸಿದರೆ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸಿ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು.
ರೈಲ್ವೆ ಯೋಜನೆಯ ಕಾಮಗಾರಿಯನ್ನು
ಕೆ.ರಾಂ ಪುರದಿಂದ
ಮಡಕಶಿರಾ ವರೆಗೂ ಪೂರ್ಣಗೊಳಿಸುವ ಕೆಲಸ ಮಾಡಲಾಗುವುದೆಂದರು.
ಆದ್ದರಿಂದ ಯುವಕರು ತಾಲೂಕಿನಲ್ಲಿ ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮನೆ ಮನೆಗೆ ಪ್ರಚಾರ ಮಾಡಬೇಕೆಂದರು.

IMG 20230319 WA0111

ನಂತರ ಕೆ.ಪಿ.ಸಿ.ಸಿ ವಕ್ತಾರ ನಿಖಿತ್ ರಾಜ್ ಮಾತನಾಡಿ,
ವೆಂಕಟರಮಣಪ್ಪನವರು ತಾಲೂಕಿನ ಅಭಿವೃದ್ಧಿಯ ಹರಿಕಾರ,

ನಂಜುಂಡಪ್ಪ ವರದಿ ಹೇಳುವಂತೆ ಪಾವಗಡ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಹೊಂದಿದ್ದು,
ವೆಂಕಟರಮಣಪ್ಪ ನಾಲ್ಕು ಬಾರಿ ಶಾಸಕ ರಾಗಿದ್ದಾಗಿನಿಂದ ತಾಲೂಕಿನ ಮೇಲಿದ್ದ ಆ ಹಣೆಪಟ್ಟಿ ಅಭಿವೃದ್ಧಿ ಕಾರ್ಯಗಳಿಂದಾಗಿ ಕಳಚಿದೆ ಎಂದರು.
ಸಿದ್ದರಾಮಯ್ಯನ ಕಾಲಾವಧಿಯಲ್ಲಿ ಅನ್ನಭಾಗ್ಯ ಜಾರಿಗೊಳಿಸಿ, ಹಸಿವು ಮುಕ್ತ ಕರ್ನಾಟಕ ರಾಜ್ಯವನ್ನಾಗಿ ಮಾಡಿದರೆಂದು.

ತಾಲೂಕಿನ ಕಾಂಗ್ರೆಸ್ ಶಾಸಕರಿಂದಾಗಿ ಇಂದು ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ, ಕಾಮಗಾರಿಗಳಿಂದ ತಾಲೂಕಿಗೆ ಶಾಶ್ವತ ಕುಡಿಯುವ ನೀರಿನ ಕೆಲಸವಾಗಿದೆ ಎಂದು.
ಮುಂಬರುವ ದಿನಗಳಲ್ಲಿ ತಾಲೂಕು ಮಲೆನಾಡಿನ ಪ್ರದೇಶವಾಗುತ್ತದೆ ಎಂದರು.
ತಾಲೂಕಿನಲ್ಲಿ ಜೆಡಿಎಸ್ ಮತ ಕೇಳೋದಿಕ್ಕೆ ಮುಂಚೆ ತಾಲೂಕಿಗೆ ಅವರ ಕೊಡುಗೆ ಏನು ಎಂದು ತಿಳಿಸಬೇಕೆಂದರು.
ಕಾರ್ಯಕ್ರಮದ ಅಂಗವಾಗಿ ತಾಲೂಕಿನ ವಿವಿಧ ಗ್ರಾಮಗಳಿಂದ 2000 ಕ್ಕೂ ಹೆಚ್ಚಿನ ಯುವಕರು ಬೈಕ್ ರಾಲಿ ಕೈಗೊಂಡಿದ್ದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಾಮಾಂಜಿನಪ್ಪ, ನಗರ ಘಟಕದ ಅಧ್ಯಕ್ಷ ಸುದೇಶ್ ಬಾಬು, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸುಜಿತ್, ಜಿಲ್ಲಾ ಘಟಕದ ಅಧ್ಯಕ್ಷ ಶಶಿ ಹುಲಿಕುಂಟೆ, ಸುಮಾ ಅನಿಲ್, ಭರತ್ ಪಾಳೇಗಾರ್, ಅನಿಲ್, ಓಂಕಾರನಾಯಕ, ತಿಪ್ಪೇಸ್ವಾಮಿ ಮಾತನಾಡಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ, ಉಷಾ ರಾಣಿ, ಪುರಸಭೆ ಅಧ್ಯಕ್ಷೆ ಧನಲಕ್ಷ್ಮಿ, ಸದಸ್ಯ ರಾಜೇಶ್, ರವಿ, ರವಿಕುಮಾರ್, ವೇಲು, ಶಂಕರರೆಡ್ಡಿ, ಪ್ರಮೋದ್ ಕುಮಾರ್, ಎಂ ಎಸ್ ವಿಶ್ವನಾಥ್, ಹೊಸಹಳ್ಳಿ ಮಂಜುನಾಥ್, ಯುವ ನಗರ ಘಟಕದ ಅಧ್ಯಕ್ಷ ಮಹೇಶ್, ಚಿತ್ತಗಾನಹಳ್ಳಿ ಚಂದ್ರು, ಶ್ರೀನಿವಾಸ್, ಬೋರಣ್ಣ, ರವಿಕುಮಾರ್, ಮದನ್, ಮಂಜುನಾಥರೆಡ್ಡಿ, ಪರಮೇಶ, ಲಕ್ಷ್ಮಿನಾರಾಯಣ. ಹರೀಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.