ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಧುಗಿರಿ ಹಾಗೂ ಜಿ.ಎಂ . ಹೆಚ್.ಪಿ.ಎಸ್. ಐ.ಡಿ.ಹಳ್ಳಿ ಸಂಯುಕ್ತ ಆಶ್ರಯದಲ್ಲಿ ತಾಲೂಕ್ ಮಟ್ಟದ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು 2022 23ನೇ ಸಾಲು…..
ಮಧುಗಿರಿ. ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟ ಆ ಯೋಜನೆ ಮಾಡಲಾಗಿತ್ತು. ಮೊದಲ ದಿನದ ಕ್ರೀಡಾಕೂಟದ ಕಾರ್ಯಕ್ರಮವನ್ನು ಕ್ರೀಡಾ ಧ್ವಜಾರೋಹಣಉದ್ಘಾಟನೆ ಮಾಡಿ ಮಾತನಾಡಿದ. ಶಾಸಕರಾದ ಎಂ ವಿ ವೀರಭದ್ರಯ್ಯನವರು ಗ್ರಾಮೀಣ ಭಾಗದಲ್ಲಿ ಕ್ರೀಡಾ ಆಸಕ್ತಿಯೇ ಕಡಿಮೆಯಾಗಿದೆ ಕ್ರೀಡಾ ಚಟುವಟಿಕೆಗಳಲ್ಲಿ ಕ್ರೀಡಾಪಟುಗಳು ಭಾಗವಹಿಸದೆ ದೈಹಿಕವಾಗಿ ಸದೃಢ ರಾಗದೆ ಮಾನಸಿಕ ವಾದ ಅಭ್ಯಾಸಗಳಿಗೆ ಮಕ್ಕಳು ಮಾರಕ ಹೋಗುತ್ತಿದ್ದಾರೆ ಎಂದರು
ವಿಧಾನ ಪರಿಷತ್ತಿನ ಸದಸ್ಯರಾದ ಆರ್ ರಾಜೇಂದ್ರ ಅವರು ಕ್ರೀಡಾಕೂಟದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕಬ್ಬಡ್ಡಿ ಕುಸ್ತಿ ಎತ್ತಿನಗಾಡಿ ಓಟ ಇನ್ನೂ ಮುಂತಾದ ಕ್ರೀಡೆಗಳನ್ನು ಗ್ರಾಮೀಣ ಮಟ್ಟದಲ್ಲಿ ಹೆಚ್ಚಾಗಿ ಆ ಯೋಜನೆ ಮಾಡಿ ಕ್ರೀಡಾ ಆಸಕ್ತಿಯನ್ನು ಹೆಚ್ಚಿಸಬೇಕು . ಇದರ ಜೊತೆಗೆ ದೇಶದ ಕ್ರೀಡೆಗಳಲ್ಲಿ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಾಗಿ ಭಾಗವಹಿಸಿ ಸಾಧನೆ ಮಾಡಬೇಕು ಕ್ರೀಡೆ ಮೇಲೆ ಇರುವಂತಹ ಆಸಕ್ತಿಯನ್ನು ಭಾಗವಹಿಸುವುದರ
ಮುಖಾಂತರ ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಹೊರಹಾಕಬೇಕು ಎಂದರು.
ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರಗಳನ್ನು ಹಾಗೂ ಪದಕಗಳನ್ನು ವಿತರಿಸಿ ಮಾತನಾಡಿದ. ಆರ್. ಟಿ
ಓ .ಇನ್ಸ್ಪೆಕ್ಟರ್ ಆದ ಕೆ ಎನ್ ಗೋಪಿಕೃಷ್ಣ ರವರು ತಾಲೂಕು ಮಟ್ಟದಲ್ಲಿ ನಡೆಸುತ್ತಿರುವ ಕ್ರೀಡಾಕೂಟವು ಕೇವಲ ತಾಲ್ಲೂಕ್ ಮಟ್ಟದ ಭಾಗಕ್ಕೆ ಸೀಮಿತವಾಗಬಾರದು ಮಕ್ಕಳ ಕ್ರೀಡಾ ಪ್ರತಿಭೆಗಳನ್ನು ಜಿಲ್ಲಾ ಮಟ್ಟದ ರಾಜ್ಯಮಟ್ಟದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಅವರ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕೆಂದ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಸಂಜಯ್ ಡಿಡಿಪಿ ಕೆಜಿ ರಂಗಯ್ಯ ಬಿ ಞ.ಓ .ತಿಮ್ಮರಾಜು. ವೆಂಕಟೇಶ್ ದೈಹಿಕ ಶಿಕ್ಷಕರುಗಳಾದ ಸಿದ್ದಗಂಗಪ್ಪ ವೆಂಕಟರವಣಪ್ಪ. ಪುರಸಭಾ ಸದಸ್ಯರಾದ ಎಂ ಆರ್ ಜಗನ್ನಾಥ್ ಸಹಕಾರ ಮಹಾಮಂಡಳಿ ಮಾಜಿ ಅಧ್ಯಕ್ಷರಾದ ಎನ್ ಗಂಗಣ್ಣ.ಎಸ್ ಬಿ ಟಿ ರಾಮು ಮತ್ತು ವಿದ್ಯಾರ್ಥಿಗಳು ಕ್ರೀಡಾಪೋತ್ಸಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.