IMG 20220721 WA0018

ಪಾವಗಡ:ಮಕ್ಕಳು ಪ್ರತಿಭೆಯನ್ನು ಪ್ರದರ್ಶಿಸಲು ಕ್ರೀಡಾಕೂಟ ಉತ್ತಮ ವೇದಿಕೆ …,!

DISTRICT NEWS ತುಮಕೂರು

ಮಕ್ಕಳು ಪ್ರತಿಭೆಯನ್ನು ಪ್ರದರ್ಶಿಸಲು ಕ್ರೀಡಾಕೂಟ ಉತ್ತಮ ವೇದಿಕೆ …. ಡಾಕ್ಟರ್ ಜಿ ವೆಂಕಟರಾಮಯ್ಯ

ಪಾವಗಡ…ಸದೃಢವಾದ ದೇಹ ಸದೃಢವಾದ ಮನಸ್ಸನ್ನು ಹೊಂದಿರುತ್ತದೆ ಎಂಬ ನಾನ್ನುಡಿಯಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆ ನಾಗಲಮಡಿಕೆ ಇವರ ಸಂಯುಕ್ತ ಆಶ್ರಯದಲ್ಲಿ 2022- 2023 ನೇ ಸಾಲಿನ ನಾಗಲಮಡಿಕೆ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ತಾಲೂಕು ಕ್ರೀಡಾಂಗಣದಲ್ಲಿ ಇಂದು ಉದ್ಘಾಟನೆಯಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾದ ಡಾ. ಜಿ ವೆಂಕಟರಾಮಯ್ಯ ರವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ಓದಿನಲ್ಲಿ ಹೆಚ್ಚಿನ ಗಮನ ಕೊಡುವುದರ ಜೊತೆಗೆ ಕ್ರೀಡೆಗಳ ಬಗ್ಗೆಯೂ ಹೆಚ್ಚಿನ ಗಮನಕೊಡಬೇಕು, ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಬಹುದೆಂದು, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಸೋತವರು ಗೆದ್ದವರು ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಸಮಾನರು ಎನ್ನುವ ಮನೋಭಾವ ಮಕ್ಕಳಲ್ಲಿ ಬರಬೇಕಿದೆ ಎಂದು ತಿಳಿಸಿದರು. ಕ್ರೀಡಾಪಟುಗಳು ಉತ್ತಮವಾದ ಕ್ರೀಡಾ ಪ್ರದರ್ಶನ ನೀಡುವುದರೊಂದಿಗೆ ನಮ್ಮ ತಾಲೂಕಿಗೆ ಒಳ್ಳೆಯ ಕೀರ್ತಿಯನ್ನು ತಂದು ಜಿಲ್ಲಾ ಮತ್ತು ವಿಭಾಗ ಮಟ್ಟದವರೆಗೂ ಆಯ್ಕೆಯಾಗಬೇಕು ಎಂದು ಆಶಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶ್ವಥ್ ನಾರಾಯಣ್ ರವರು ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಕಳೆದಎರಡು ವರ್ಷಗಳಿಂದ ಕೊರೊನಾದಿಂದ ಕ್ರೀಡಾಕೂಟಗಳು ನಡೆದಿರುವುದಿಲ್ಲ ಆದರೆ ಈ ವರ್ಷ ಕ್ರೀಡಾಕೂಟಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು. ಸ್ಪರ್ಧಾ ಮನೋಭಾವದಿಂದ ಆಡಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಎಂದು ತಿಳಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಚಿದಾನಂದ ಸ್ವಾಮಿರವರು ಕ್ರೀಡಾಪಟುಗಳಿಗೆ ಹಾಗೂ ದೈಹಿಕ ಶಿಕ್ಷಕರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿವೇಕಾನಂದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕಟ್ಟಾ ನರಸಿಂಹಮೂರ್ತಿ ಸ್ವಾಗತಿಸಿದರು,. ದೈಹಿಕ ಶಿಕ್ಷಕ ಆರ್ ಬಸವರಾಜುರವರು ನಿರೂಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಯತಿ ಕುಮಾರ್ ತಾಲೂಕು ದೈಹಿಕ ಶಿಕ್ಷಣ,ಸಂಘದ ಅಧ್ಯಕ್ಷರಾದ ಕರಿಯಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಾಂತರಾಜು ವಿಜಯಕುಮಾರ್. ಶಿಕ್ಷಣ ಸಂಯೋಜಕರಾದ ಶಿವಕುಮಾರ್ ರಂಗನಾಥ್ ಚಂದ್ರಶೇಖರ್ ದೈಹಿಕ ಶಿಕ್ಷಣ ಶಿಕ್ಷಕರು ಆಫ್ಟರ್ ಖಾನ್ ಗಂಗಾಧರ್ ಹೋಬಳಿ ವ್ಯಾಪ್ತಿಯ ಪ್ರೌಢಶಾಲಾ ಮುಖ್ಯ ಶಿಕ್ಷಕರು ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು

ವರದಿ: ಶ್ರೀನಿವಾಸಲು ಎ